ಟೋಕಿಯೊ:ಜುಲೈ 23 ರಿಂದ ಆರಂಭವಾಗಲಿರುವ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಲು ಭಾರತದ 15 ಸದಸ್ಯರ ಒಳಗೊಂಡ ಶೂಟಿಂಗ್ ತಂಡ ಶನಿವಾರ ಟೋಕಿಯೊಗೆ ತೆರಳಿದೆ.
ಭಾರತೀಯ ತಂಡ ತರಬೇತಿ ಮತ್ತು ಸ್ಪರ್ಧೆಗಾಗಿ ಮೇ ಆರಂಭದಿಂದ ಕ್ರೊಯೇಷಿಯಾದಲ್ಲಿ ನೆಲೆಗೊಂಡಿತ್ತು. ಇಂದು ಜಾಗ್ರೆಬ್(Zagreb) ನಿಂದ ಟೋಕಿಯೊಗೆ ಹಾರಿದೆ. ಶೂಟರ್‌ಗಳು ಟೋಕಿಯೊಗೆ ಬಂದಿಳಿದ್ದಾರೆ ಎಂದು ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ಮುಖ್ಯಸ್ಥ ನರಿಂದರ್ ಬಾತ್ರಾ ಖಚಿತಪಡಿಸಿದ್ದಾರೆ.
ಇನ್ನುಳಿದ ಕ್ರೀಡಾಪಟುಗಳು ಶನಿವಾರ ರಾತ್ರಿ ಚಾರ್ಟರ್ಡ್ ವಿಮಾನದ ಮೂಲಕ ಇಂದಿರಾ ಗಾಂದಿ ವಿಮಾನ ನಿಲ್ದಾಣದಿಂದ ಟೋಕಿಯೊಗೆ ತೆರಳಲಿದ್ದಾರೆ. ಮೊದಲ ಬ್ಯಾಚ್ ಕ್ರೀಡಾಪಟುಗಳು ಭಾರತದಿಂದ ಟೋಕಿಯೊಗೆ ತೆರಳಲಿದ್ದಾರೆ.
54 ಕ್ರೀಡಾಪಟುಗಳು, ಸಹಾಯಕ ಸಿಬ್ಬಂದಿ ಮತ್ತು ಭಾರತೀಯ ಒಲಿಂಪಿಕ್ ಅಸೋಸಿಯೇಷನ್ (ಐಒಎ) ಪ್ರತಿನಿಧಿಗಳನ್ನು ಒಳಗೊಂಡ 88 ರ ತಂಡಕ್ಕೆ ಕೇಂದ್ರ ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವ ಅನುರಾಗ್ ಸಿಂಗ್ ಠಾಕೂರ್ ಮತ್ತು ರಾಜ್ಯ ಸಚಿವ ನಿಸಿತ್ ಪ್ರಮಣಿಕ್ ಅವರು ಔಪಚಾರಿಕವಾಗಿ ಬೀಳ್ಕೊಡುಗೆ ನೀಡಲಿದ್ದಾರೆ.
ಇದನ್ನೂ ಓದಿ : Tokyo Olympics ಗ್ರಾಮದಲ್ಲಿ ಮೊದಲ ಕೋವಿಡ್ ಪ್ರಕರಣ ಪತ್ತೆ!