ಕರ್ನಾಟಕ

karnataka

ETV Bharat / sports

ಡಕಾರ್​ ರ‍್ಯಾಲಿ ವೇಳೆ ಅಪಘಾತ: ಕೋಮಾದಲ್ಲಿ ಭಾರತೀಯ ಬೈಕ್​ರೈಡರ್​ ಸಿಎಸ್​ ಸಂತೋಷ್​ - CS Santosh medically-induced coma

37 ವರ್ಷದ ರೇಸರ್​ ಸಂತೋಷ್​ ಅವರು ಹೀರೋ ಮೋಟೋ ಸ್ಪೋರ್ಟ್ಸ್​ ತಂಡವನ್ನು ಪ್ರತಿನಿಧಿಸುತ್ತಿದ್ದರು. ಅವರು ನಿನ್ನೆ ವಿಶ್ವದ ಅತಿ ದೊಡ್ಡ ರ‍್ಯಾಲಿಯಲ್ಲಿ ಪಾಲ್ಗೊಂಡಿದ್ದ ವೇಳೆ ಮತ್ತೊಬ್ಬ ರೇಸರ್​ನೊಂದಿಗೆ ಡಿಕ್ಕಿಯಾಗಿ ಅಪಘಾತಕ್ಕೀಡಾಗಿದ್ದಾರೆ.

ಸಿಎಸ್​ ಸಂತೋಷ್​ ಅಪಘಾತ
ಸಿಎಸ್​ ಸಂತೋಷ್​ ಅಪಘಾತ

By

Published : Jan 7, 2021, 5:47 PM IST

ನವದೆಹಲಿ:ಸೌದಿ ಅರೇಬಿಯಾದಲ್ಲಿ ನಡೆಯುತ್ತಿರುವ ಡಕಾರ್ ಬೈಕ್​ ರ‍್ಯಾಲಿಯ ವೇಳೆ ಭಾರತದ ಖ್ಯಾತ ಮೋಟರ್‌ಸೈಕಲ್ ರೇಸರ್ ಸಿ.ಎಸ್. ಸಂತೋಷ್ ಅಪಘಾತಕ್ಕೀಡಾಗಿದ್ದು, ಅವರನ್ನು ರಿಯಾಧ್​ನ ಆಸ್ಪತ್ರೆಯಲ್ಲಿ ವೈದ್ಯಕೀಯ ಪ್ರೇರಿತ ಕೋಮಾದಲ್ಲಿ ಇರಿಸಲಾಗಿದೆ ಎಂದು ತಿಳಿದುಬಂದಿದೆ.

37 ವರ್ಷದ ರೇಸರ್​ ಸಂತೋಷ್​ ಅವರು ಹೀರೋ ಮೋಟೋ ಸ್ಪೋರ್ಟ್ಸ್​ ತಂಡವನ್ನು ಪ್ರತಿನಿಧಿಸುತ್ತಿದ್ದರು. ಅವರು ನಿನ್ನೆ ನಡೆದ ವಿಶ್ವದ ಅತಿ ದೊಡ್ಡ ರ‍್ಯಾಲಿಯಲ್ಲಿ ಪಾಲ್ಗೊಂಡಿದ್ದ ವೇಳೆ ಮತ್ತೊಬ್ಬ ರೇಸರ್​ನೊಂದಿಗೆ ಡಿಕ್ಕಿಯಾಗಿ ಅಪಘಾತಕ್ಕೀಡಾಗಿದ್ದಾರೆ. ಅವರನ್ನು ತಕ್ಷಣ ಹೆಲಿಕಾಪ್ಟರ್​ ಮೂಲಕ ಆಸ್ಪತ್ರೆಗೆ ಸಾಗಿಸಲಾಗಿದ್ದು, ಸದ್ಯ ತುರ್ತುನಿಗಾ ಘಟಕದಲ್ಲಿರಿಸಿ 24 ಗಂಟೆಗಳ ವೈದ್ಯರ ವೀಕ್ಷಣೆಯಲ್ಲಿರಿಸಲಾಗಿದೆ.

ಸಿಎಸ್​ ಸಂತೋಷ್​

"ದುರದೃಷ್ಟಕರ ಘಟನೆಯೊಂದರಲ್ಲಿ ಸಿಎಸ್​ ಸಂತೋಷ್​ 'ಡಕಾರ್ 2021' ರ‍್ಯಾಲಿಯ 4 ನೇ ಹಂತದ ಸ್ಪರ್ಧೆಯ ವೇಳೆ ಅಪಘಾತಕ್ಕೀಡಾಗಿದ್ದಾರೆ. ಅವರನ್ನು ರಿಯಾಧ್​‌ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಅರೋಗ್ಯ ಸ್ಥಿರವಾಗಿದೆ ಎಂದು ಆರಂಭಿಕ ಮೌಲ್ಯಮಾಪನದಿಂದ ತಿಳಿದುಬಂದಿದೆ. ಸಂತೋಷ್​ ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ನಮ್ಮೊಂದಿಗೆ ಪ್ರಾರ್ಥಿಸಿ" ಎಂದು ಹೀರೋ ಮೋಟೋಸ್ಪೋರ್ಟ್ಸ್ ಟ್ವೀಟ್​ ಮಾಡಿದೆ.

ಕಳೆದ ವರ್ಷ ಇದೇ ಸ್ಪರ್ಧೆಯಲ್ಲಿ ಹೀರೋ ಮೋಟೋಸ್ಪೋರ್ಟ್ ರೈಡರ್​ ಪಾಲೊ ಗೊನ್ಕಾಲ್ವ್ಸ್ 'ಡಾಕರ್ 2020' ರ‍್ಯಾಲಿಯಲ್ಲಿ ಸ್ಪರ್ಧಿಸಿದ್ದಾಗಲೇ ಸಾವನ್ನಪ್ಪಿದ್ದರು. ಗೋನ್ಕಾಲ್ವ್ಸ್​​ ಸಾವನ್ನಪ್ಪಿದ ನಂತರ ಹೀರೋ ಮೋಟೋ ಸ್ಪೋರ್ಟ್ ರ‍್ಯಾಲಿಯಿಂದ ಹಿಂದೆ ಸರಿದಿತ್ತು. ಇದೀಗ ಆ ಘಟನೆ ಮಾಸುವ ಮುನ್ನವೇ ಮತ್ತೊಂದು ಕರಾಳ ಘಟನೆ ಸಂಭವಿಸಿದೆ.

ಇದನ್ನು ಓದಿ:ಸುಲಭ ಕ್ಯಾಚ್​ಗಳನ್ನು ಕೈಚೆಲ್ಲಿ ಕ್ರಿಕೆಟ್​ ಅಭಿಮಾನಿಗಳ ಆಕ್ರೋಶಕ್ಕೆ ತುತ್ತಾದ ರಿಷಭ್ ಪಂತ್​

ABOUT THE AUTHOR

...view details