ಕರ್ನಾಟಕ

karnataka

ETV Bharat / sports

ಅಪಘಾತದಲ್ಲಿ ಭಾರತೀಯ ಮೋಟಾರ್ ‌ಸೈಕಲ್ ರೇಸರ್​ ಸಂತೋಷ್​ಗೆ ಗಾಯ: ಕೃತಕ ಕೋಮಾದಲ್ಲಿರಿಸಿ ಚಿಕಿತ್ಸೆ - ಭಾರತೀಯ ಮೋಟಾರ್​ ಸೈಕಲ್ ರೇಸರ್ ಸಿ.ಎಸ್.ಸಂತೋಷ್

ಭಾರತೀಯ ಮೋಟಾರ್​ ಸೈಕಲ್ ರೇಸರ್ ಸಿ.ಎಸ್.ಸಂತೋಷ್ ಡಾಕರ್ ರ‍್ಯಾಲಿಯಲ್ಲಿ ಸಂಭವಿಸಿದ ಅಪಘಾತದಲ್ಲಿ ಗಾಯಗೊಂಡಿದ್ದು, ಕೃತಕ ಕೋಮಾದಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ.

Indian motorcycle racer CS Santosh
ಭಾರತೀಯ ಮೋಟಾರ್​ ಸೈಕಲ್ ರೇಸರ್ ಸಿ.ಎಸ್.ಸಂತೋಷ್

By

Published : Jan 8, 2021, 7:13 AM IST

ರಿಯಾದ್(ಯುಎಇ):ಸೌದಿ ಅರೇಬಿಯಾದಲ್ಲಿ ನಡೆಯುತ್ತಿರುವ ಡಾಕರ್ ರ‍್ಯಾಲಿಯಲ್ಲಿ ಬುಧವಾರ ಅಪಘಾತಕ್ಕೀಡಾಗಿ ಭಾರತೀಯ ಮೋಟಾರ್​ ಸೈಕಲ್ ರೇಸರ್ ಸಿ.ಎಸ್.ಸಂತೋಷ್ ಅವರನ್ನು ವೈದ್ಯಕೀಯ ಪ್ರೇರಿತ ಕೋಮಾದಲ್ಲಿ ಇರಿಸಲಾಗಿದೆ.

37 ವರ್ಷದ ಸಂತೋಷ್ ಅವರು ಪ್ರಸ್ತುತ ರಿಯಾದ್‌ನ ಸೌದಿ ಜರ್ಮನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಮತ್ತು "ಬಲ ಭುಜ ಸ್ಥಳಾಂತರಿಸಲ್ಪಟ್ಟಿದ್ದು ತಲೆಗೆ ಪೆಟ್ಟಾಗಿದೆ. ಇವುಗಳನ್ನು ಹೊರತುಪಡಿಸಿ ದೈಹಿಕವಾಗಿ ಯಾವುದೇ ದೊಡ್ಡ ಗಾಯಗಳಾಗಿಲ್ಲ" ಎಂದು ಅವರ ತಂಡ ಹೀರೋ ಮೋಟೋಸ್ಪೋರ್ಟ್ಸ್ ಹೇಳಿಕೆಯಲ್ಲಿ ತಿಳಿಸಿದೆ.

"ಇತ್ತೀಚಿನ ಸ್ಕ್ಯಾನ್‌ಗಳು ಅವರ ಪೂರ್ಣ ಚೇತರಿಕೆಯ ಮೇಲೆ ಪರಿಣಾಮ ಬೀರುವ ಯಾವುದೇ ಪ್ರಮುಖ ಸಮಸ್ಯೆಯನ್ನು ತೋರಿಸಿಲ್ಲ" ಎಂದು ತಂಡ ಹೇಳಿಕೆ ನೀಡಿದೆ.

ABOUT THE AUTHOR

...view details