ಕರ್ನಾಟಕ

karnataka

By

Published : Jun 30, 2022, 2:57 PM IST

ETV Bharat / sports

ಕಾಮನ್​ವೆಲ್ತ್​ ಗೇಮ್ಸ್​ ಶಿಬಿರ: ಹಾಕಿ ತಂಡದ ಇಬ್ಬರು ಆಟಗಾರರು, ಮೂವರು ಸಿಬ್ಬಂದಿಗೆ ಕೋವಿಡ್‌

ಬೆಂಗಳೂರಿನಲ್ಲಿ ಹಾಕಿ ತಂಡದ ಕಾಮನ್‌ವೆಲ್ತ್ ಗೇಮ್ಸ್ ಶಿಬಿರ ಆರಂಭಗೊಂಡಿದ್ದು, ಕೊರೊನಾ ಪರೀಕ್ಷೆಯಲ್ಲಿ ಕೆಲವು ಆಟಗಾರರು ಹಾಗು ಸಹಾಯಕ ಸಿಬ್ಬಂದಿಗೆ ಸೋಂಕು​ ಕಂಡುಬಂದಿದೆ. ಆಟಗಾರರು ಸೌಮ್ಯ ರೋಗಲಕ್ಷಣಗಳನ್ನು ಹೊಂದಿದ್ದಾರೆ ಎಂದು ಹಾಕಿ ಇಂಡಿಯಾ ತಿಳಿಸಿದೆ.

ಹಾಕಿ ತಂಡದ ಇಬ್ಬರು ಆಟಗಾರರು, ಮೂವರು ಸಿಬ್ಬಂದಿಗೆ ಕೊರೊನಾ
ಹಾಕಿ ತಂಡದ ಇಬ್ಬರು ಆಟಗಾರರು, ಮೂವರು ಸಿಬ್ಬಂದಿಗೆ ಕೊರೊನಾ

ಭಾರತ ಪುರುಷರ ಹಾಕಿ ತಂಡದ ಇಬ್ಬರು ಆಟಗಾರರು ಮತ್ತು ಮೂವರು ಸಹಾಯಕ ಸಿಬ್ಬಂದಿಗೆ ಕೊರೊನಾ ಕಾಣಿಸಿಕೊಂಡಿದೆ. ಕಾಮನ್​ವೆಲ್ತ್​ ಗೇಮ್ಸ್​ಗೆ ತಯಾರಿಯ ಭಾಗವಾಗಿ ಜೂನ್​ 27 ರಿಂದ ಬೆಂಗಳೂರಿನಲ್ಲಿ ಅಭ್ಯಾಸ ಶಿಬಿರ ಆಯೋಜಿಸಲಾಗಿದೆ. ಈ ವೇಳೆ ಆಟಗಾರರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ.

ಈ ಬಗ್ಗೆ ಹಾಕಿ ಇಂಡಿಯಾ ಪ್ರಕಟಣೆ ನೀಡಿದೆ. ಕಾಮನ್​ವೆಲ್ತ್​ ಗೇಮ್​ಗೆ ಪೂರ್ವ ತಯಾರಿ ನಡೆಸುತ್ತಿರುವ ಆಟಗಾರರು ಮತ್ತು ಸಹಾಯಕ ಸಿಬ್ಬಂದಿಗೆ ಸೋಂಕು ತಗುಲಿದೆ. ಅವರನ್ನು ಪ್ರತ್ಯೇಕಿಸಲಾಗಿದೆ ಎಂದು ತಿಳಿಸಿದ್ದಾರೆ.

ಗೋಲ್‌ಕೀಪರ್‌ಗಳಾದ ಪಿ.ಆರ್.ಶ್ರೀಜೇಶ್, ಕ್ರಿಶನ್ ಪಾಠಕ್, ಸುರೇಂದ್ರ ಕುಮಾರ್, ಹರ್ಮನ್‌ಪ್ರೀತ್ ಸಿಂಗ್, ವರುಣ್ ಕುಮಾರ್ ಮತ್ತು ಅಮಿತ್ ರೋಹಿದಾಸ್ ಶಿಬಿರದಲ್ಲಿ ಭಾಗಿಯಾಗಿದ್ದಾರೆ. ಬೆಂಗಳೂರಿನಲ್ಲಿ ಜೂನ್ 27 ರಿಂದ ಪ್ರಾರಂಭವಾಗಿರುವ ಶಿಬಿರ ಜುಲೈ 23 ರಂದು ಕೊನೆಗೊಳ್ಳಲಿದೆ.

ಜುಲೈ 31ರಿಂದ ಆರಂಭವಾಗುವ ಕಾಮನ್​ವೆಲ್ತ್​ ಗೇಮ್ಸ್‌​ನಲ್ಲಿ ಭಾರತ ಪುರುಷರ ಹಾಕಿ ತಂಡ ಮನ್‌ಪ್ರೀತ್ ಸಿಂಗ್ ನಾಯಕತ್ವದಲ್ಲಿ ಘಾನಾ ವಿರುದ್ಧ ಅಭಿಯಾನ ಆರಂಭಿಸಲಿದೆ.

ಇದನ್ನೂ ಓದಿ:ಬಲತೊಡೆ ಶಸ್ತ್ರಚಿಕಿತ್ಸೆ ಯಶಸ್ವಿ: ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ ಕೆ.ಎಲ್​ ರಾಹುಲ್​

ABOUT THE AUTHOR

...view details