ನವದೆಹಲಿ:ಡಿಸೆಂಬರ್ 4 ರಿಂದ ನೇಪಾಳದ ಕಠ್ಮಂಡುವಿನಲ್ಲಿ ನಡೆಯಲಿರುವ ಸೌತ್ ಏಷ್ಯನ್ ಗೇಮ್ಸ್ಗೆ ಪ್ರಕಟಗೊಂಡಿರುವ ಕಬಡ್ಡಿ ತಂಡದಲ್ಲಿ ಬೆಂಗಳೂರು ಬುಲ್ಸ್ ತಂಡದ ಪವನ್ ಶೆರಾವತ್ ಉಪ ನಾಯಕರಾಗಿ ಆಯ್ಕೆಯಾಗಿದ್ದಾರೆ.
2018-2109ರ ಪ್ರೋ ಕಬಡ್ಡಿ ಲೀಗ್ನಲ್ಲಿ ಸತತ 2ನೇ ಬಾರಿಗೆ ಟಾಪ್ ರೈಡರ್ ಆಗಿರುವ ಪವನ್ ಕುಮಾರ್ ಶೆರಾವತ್ ಬೆಂಗಳೂರು ಬುಲ್ಸ್ ತಂಡವನ್ನು ಏಕಾಂಗಿಯಾಗಿ ಹೋರಾಡಿ 2018ರಲ್ಲಿ ಚಾಂಪಿಯನ್ ಮಾಡಿದ್ದರು. ಇವರು 2019ರ ಆವೃತ್ತಿಯಲ್ಲಿ ತಂಡವನ್ನು ಸೆಮಿಫೈನಲ್ವರೆಗೂ ತಂದಿದ್ದರು.
ಇದೀಗ ಪವನ್ ಭಾರತ ತಂಡದ ಪರ ಕಣಕ್ಕಿಳಿಯಲಿದ್ದು, ತಮ್ಮ ತಾಕತ್ತನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರದರ್ಶಿಸಲಿದ್ದಾರೆ. ಈ ಟೂರ್ನಿಯಲ್ಲಿ ಭಾರತ ತಂಡವನ್ನು ಆಲ್ರೌಂಡರ್ ದೀಪಕ್ ನಿವಾಸ್ ಹೂಡಾ ಮುನ್ನಡೆಸಲಿದ್ದಾರೆ.