ಕರ್ನಾಟಕ

karnataka

ETV Bharat / sports

ಜುಡೋ ಪಟು ಲಿಂಥೋಯ್ ಚನಂಬಮ್​ಗೆ ವಿಶ್ವ ಚಾಂಪಿಯನ್​ಶಿಪ್​ನಲ್ಲಿ ಐತಿಹಾಸಿಕ ಚಿನ್ನ - ವಿಶ್ವ ಚಾಂಪಿಯನ್​ಶಿಪ್​ನಲ್ಲಿ ಐತಿಹಾಸಿಕ ಚಿನ್ನ

ಭಾರತೀಯ ಜುಡೋ ಪಟು ಲಿಂಥೋಯ್ ಚನಂಬಮ್ ಸರಜೆವೊದಲ್ಲಿ ನಡೆಯುತ್ತಿರುವ ಕೆಡೆಟ್​ ವಿಶ್ವ ಚಾಂಪಿಯನ್​ಶಿಪ್​ನಲ್ಲಿ ಚಿನ್ನದ ಸಾಧನೆ ಮಾಡಿದ್ದಾರೆ. ಇದು ದೇಶಕ್ಕೆ ಮೊದಲ ಐತಿಹಾಸಿಕ ಪದಕ ಇದಾಗಿದೆ.

world-championship
ಐತಿಹಾಸಿಕ ಚಿನ್ನ

By

Published : Aug 27, 2022, 1:44 PM IST

ಸರಜೆವೊ:ಭಾರತದ ಜೂಡೋ ಪಟು ಲಿಂಥೋಯ್ ಚನಂಬಮ್ ಅವರು ಸರಜೆವೊದಲ್ಲಿ ನಡೆಯುತ್ತಿರುವ ವಿಶ್ವ ಚಾಂಪಿಯನ್​ಶಿಪ್​ನಲ್ಲಿ ಇತಿಹಾಸ ನಿರ್ಮಿಸಿದರು. ಜುಡೋದಲ್ಲಿ ಚಿನ್ನ ಬಾಚಿಕೊಳ್ಳುವ ಮೂಲಕ ಪದಕ ಪಡೆದ ಮೊದಲ ಭಾರತೀಯೆ ಎಂಬ ಹೆಗ್ಗಳಿಕೆ ಪಡೆದರು. ವಿಶೇಷ ಅಂದರೆ ಕೆಡೆಟ್​, ಸೀನಿಯರ್​, ಜೂನಿಯರ್​ ಯಾವುದೇ ವಿಭಾಗದಲ್ಲಿ ಜುಡೋದಲ್ಲಿ ಭಾರತಕ್ಕೆ ಬಂದ ಮೊದಲ ಪದಕ ಇದಾಗಿದೆ.

ಕೆಡೆಟ್ ವಿಶ್ವ ಚಾಂಪಿಯನ್‌ಶಿಪ್‌ನ ಮಹಿಳೆಯರ 57 ಕೆಜಿ ವಿಭಾಗದಲ್ಲಿ ಬ್ರೆಜಿಲ್‌ನ ಬಿಯಾಂಕಾ ರೀಸ್ ಅವರನ್ನು ಸದೆಬಡಿಯುವ ಮೂಲಕ ಲಿಂಥೋಯ್ ಚನಂಬಮ್ ಭಾರತಕ್ಕೆ ಮೊದಲ ಚಿನ್ನ ತಂದುಕೊಟ್ಟರು.

ಜುಡೋ ಫೈನಲ್​ ಪಂದ್ಯದಲ್ಲಿ ಬ್ರೆಜಿಲಿಯನ್ ಎದುರಾಳಿ ವಿರುದ್ಧ 1-0 ಅಂತರದಿಂದ ಜಯಿಸಿದರು. ಇದು ಭಾರತದ ಜುಡೋ ಇತಿಹಾಸದಲ್ಲಿಯೇ ಯಾವುದೇ ವಯೋಮಾನದಲ್ಲಿ ಬಂದ ಮೊದಲ ಚಿನ್ನದ ಪದಕವಾಗಿದೆ. ಈ ಮೂಲಕ ಏಷ್ಯನ್ ಚಾಂಪಿಯನ್ ಆಗಿರುವ ಲಿಂಥೋಯ್ ಐತಿಹಾಸಿಕ ಸಾಧನೆ ಮಾಡಿದರು.

ಈ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ಜುಡೋ ಫೆಡರೇಷನ್​, ವಿಶ್ವ ಚಾಂಪಿಯನ್​ಶಿಪ್​ನಲ್ಲಿ ಭಾರತಕ್ಕೆ ಮೊದಲ ಚಿನ್ನ ಒಲಿದಿದೆ. ಲಿಂಥೋಯ್​ ಸುವರ್ಣ ಸಾಧನೆ ಮಾಡಿದರು. ಐತಿಹಾಸಿಕ ಸಾಧನೆಗೆ ಅಭಿನಂದನೆಗಳು ಲಿಂಥೋಯ್ ಚನಂಬಮ್ ಎಂದು ಟ್ವೀಟ್​ ಮಾಡಿದೆ.

ಜುಡೋ ಪಟು ಲಿಂಥೋಯ್ ಚನಂಬಮ್ ಅವರು 2018 ರಲ್ಲಿ ಸಬ್ ಜೂನಿಯರ್ ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ ಮೊದಲ ಬಾರಿಗೆ ಚಿನ್ನ ಗೆದ್ದಿದ್ದರು. ಈ ವರ್ಷದ ಜುಲೈನಲ್ಲಿ ಬ್ಯಾಂಕಾಕ್‌ನಲ್ಲಿ ನಡೆದ ಏಷ್ಯನ್ ಕೆಡೆಟ್ ಮತ್ತು ಜೂನಿಯರ್ ಜೂಡೋ ಚಾಂಪಿಯನ್‌ಶಿಪ್‌ಗಳಲ್ಲಿ ಚಿನ್ನ ಬಾಚಿಕೊಂಡಿದ್ದರು.

ಓದಿ:ವಿಶ್ವ ಚಾಂಪಿಯನ್‌ಶಿಪ್‌.. ಕಂಚಿನ ಪದಕ ಗೆದ್ದ ಚಿರಾಗ್, ಸಾತ್ವಿಕ್

ABOUT THE AUTHOR

...view details