ಭುವನೇಶ್ವರ: ಒಲಿಂಪಿಕ್ಸ್ನಲ್ಲಿ ನಾಲ್ಕು ದಶಕಗಳ ಬಳಿಕ ಪದಕ ಗೆಲ್ಲುವಲ್ಲಿ ಸಫಲರಾಗಿರುವ ಭಾರತ ಹಾಕಿ ತಂಡಕ್ಕೆ ಇಂದು ಒಡಿಶಾ ಸರ್ಕಾರ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಪುರುಷ ಮತ್ತು ಮಹಿಳಾ ಹಾಕಿ ತಂಡ ಒಡಿಶಾಗೆ ಬಂದಿಳಿದಿದೆ. ಒಲಿಂಪಿಕ್ಸ್ನಲ್ಲಿ ಅದ್ಭುತ ಸಾಧನೆ ಮಾಡರುವ ಎರಡೂ ತಂಡಗಳಿಗೂ ಒಡಿಶಾ ಮುಖ್ಯಮಂತ್ರಿ ಗೌರವಿಸಲಿದ್ದಾರೆ.
ಪುರುಷರ ತಂಡ 41 ವರ್ಷಗಳ ಬಳಿಕ ಒಲಿಂಪಿಕ್ಸ್ನಲ್ಲಿ ಕಂಚಿನ ಪದಕ ಗೆದ್ದರೆ, ಮಹಿಳಾ ತಂಡ ಇದೇ ಮೊದಲ ಬಾರಿಗೆ ಸೆಮಿಫೈನಲ್ ಪ್ರವೇಶಿಸಿ ಇತಿಹಾಸ ಬರೆದಿತ್ತು. ಕಡೆಗಣಿಸಲ್ಪಡುತ್ತಿದ್ದ ಹಾಕಿ ಕ್ರೀಡೆಗೆ ಮರುಜೀವ ನೀಡಿದ್ದ ಒಡಿಶಾ ಸರ್ಕಾರ, ಇದೀಗ ಒಲಿಂಪಿಕ್ಸ್ನಲ್ಲಿ ಬಹುದೊಡ್ಡ ಸಾಧನೆ ಮಾಡಿರುವುದಕ್ಕೆ ಮಂಗಳವಾರ ಮಹಿಳಾ ಮತ್ತು ಪುರುಷ ತಂಡಗಳಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಂಡಿದೆ.