ನವದೆಹಲಿ:ಭಾರತದ ಮೊದಲ ದ್ರೋಣಾಚಾರ್ಯ ಪ್ರಶಸ್ತಿ ಪುರಸ್ಕೃತ ತರಬೇತುದಾರ ಓಂ ಪ್ರಕಾಶ್ ಭಾರದ್ವಾಜ್ ದೀರ್ಘಕಾಲದಿಂದ ಅನಾರೋಗ್ಯ ಮತ್ತ ವಯೋಸಹಜ ಖಾಯಿಲೆಯಿಂದ ಚೇತರಿಕೆ ಸಾಧ್ಯವಾಗದೆ ಇಂದು ನಿಧನರಾಗಿದ್ದಾರೆ.
'ದ್ರೋಣಾಚಾರ್ಯ ಪ್ರಶಸ್ತಿ' ಪುರಸ್ಕೃತ ಬಾಕ್ಸಿಂಗ್ ಕೋಚ್ ಓಂ ಪ್ರಕಾಶ್ ಭಾರದ್ವಾಜ್ ನಿಧನ - ಬಾಕ್ಸಿಂಗ್ ಕೋಚ್ ಓಂ ಪ್ರಕಾಶ್ ಭಾರದ್ವಾಜ್ ನಿಧನ
1968 ರಿಂದ 1989 ರವರೆಗೆ ಭಾರತದ ರಾಷ್ಟ್ರೀಯ ಬಾಕ್ಸಿಂಗ್ ತರಬೇತುದಾರರಾಗಿದ್ದ ಭಾರದ್ವಾಜ್, ರಾಷ್ಟ್ರೀಯ ಆಯ್ಕೆದಾರರಾಗಿಯೂ ಸೇವೆ ಸಲ್ಲಿಸಿದ್ದಾರೆ. ಇವರ ಮಾರ್ಗದರ್ಶನದಲ್ಲಿ ಭಾರತೀಯ ಬಾಕ್ಸರ್ಗಳು ಏಷ್ಯನ್ ಕ್ರೀಡಾಕೂಟ, ಕಾಮನ್ವೆಲ್ತ್ ಕ್ರೀಡಾಕೂಟ ಮತ್ತು ದಕ್ಷಿಣ ಏಷ್ಯಾ ಕ್ರೀಡಾಕೂಟಗಳಲ್ಲಿ ಪದಕ ಸಾಧನೆ ಮಾಡಿದ್ದಾರೆ.
!['ದ್ರೋಣಾಚಾರ್ಯ ಪ್ರಶಸ್ತಿ' ಪುರಸ್ಕೃತ ಬಾಕ್ಸಿಂಗ್ ಕೋಚ್ ಓಂ ಪ್ರಕಾಶ್ ಭಾರದ್ವಾಜ್ ನಿಧನ ಬಾಕ್ಸಿಂಗ್ ಕೋಚ್ ಓಂ ಪ್ರಕಾಶ್ ಭಾರದ್ವಾಜ್ ನಿಧನ](https://etvbharatimages.akamaized.net/etvbharat/prod-images/768-512-11840852-1014-11840852-1621579675898.jpg)
ಬಾಕ್ಸಿಂಗ್ ಕೋಚ್ ಓಂ ಪ್ರಕಾಶ್ ಭಾರದ್ವಾಜ್ ನಿಧನ
ಭಾರದ್ವಾಜ್ ಅವರಿಗೆ 82 ವರ್ಷ ವಯಸ್ಸಾಗಿತ್ತು. ಇವರು 10 ದಿನಗಳ ಹಿಂದಷ್ಟೇ ತಮ್ಮ ಪತ್ನಿಯನ್ನು ಕಳೆದುಕೊಂಡಿದ್ದರು.
ಭಾರದ್ವಾಜ್ 1968 ರಿಂದ 1989 ರವರೆಗೆ ಭಾರತದ ರಾಷ್ಟ್ರೀಯ ಬಾಕ್ಸಿಂಗ್ ತರಬೇತುದಾರರಾಗಿದ್ದು, ರಾಷ್ಟ್ರೀಯ ಆಯ್ಕೆದಾರರಾಗಿಯೂ ಸೇವೆ ಸಲ್ಲಿಸಿದ್ದಾರೆ. ಇವರ ಮಾರ್ಗದರ್ಶನದಲ್ಲಿ, ಭಾರತೀಯ ಬಾಕ್ಸರ್ಗಳು ಏಷ್ಯನ್ ಕ್ರೀಡಾಕೂಟ, ಕಾಮನ್ವೆಲ್ತ್ ಮತ್ತು ದಕ್ಷಿಣ ಏಷ್ಯಾ ಕ್ರೀಡಾಕೂಟಗಳಲ್ಲಿ ಪದಕ ಗೆದ್ದಿದ್ದಾರೆ.