ಕರ್ನಾಟಕ

karnataka

ETV Bharat / sports

ಇಟಲಿಯಲ್ಲಿ ತರಬೇತಿ ಪುನಾರಂಭಿಸಿದ ಭಾರತೀಯ ಬಾಕ್ಸಿಂಗ್​​​ ತಂಡ - 52 ದಿನಗಳ ಪ್ರವಾಸದಲ್ಲಿರುವ ಭಾರತೀಯ ಬಾಕ್ಸರ್ಸ್​

ಭಾರತೀಯ ಬಾಕ್ಸರ್​ಗಳು ಇಟಲಿಯ ಅಸ್ಸಿಸಿಯಲ್ಲಿರುವ ಒಲಿಂಪಿಕ್ ಕೇಂದ್ರದ ಜೈವಿಕ ಸುರಕ್ಷಿತ ವಾತಾವರಣದಲ್ಲಿ ತಮ್ಮ ತರಬೇತಿಯನ್ನು ಪುನಾರಂಭಿಸಿದ್ದಾರೆ

Indian boxing team resumes training in Italy
ತರಬೇತಿ ಪುನಾರಂಭಿಸಿದ ಭಾರತೀಯ ಬಾಕ್ಸಿಂಗ್ ತಂಡ

By

Published : Oct 24, 2020, 8:48 AM IST

ಅಸ್ಸಿಸಿ(ಇಟಲಿ): 52 ದಿನಗಳ ಪ್ರವಾಸದಲ್ಲಿರುವ ಭಾರತೀಯ ಬಾಕ್ಸರ್​ಗಳು ಇಟಲಿಯ ಅಸ್ಸಿಸಿಯಲ್ಲಿರುವ ಒಲಿಂಪಿಕ್ ಕೇಂದ್ರದ ಜೈವಿಕ ಸುರಕ್ಷಿತ ವಾತಾವರಣದಲ್ಲಿ ತಮ್ಮ ತರಬೇತಿ ಪುನಾರಂಭಿಸಿದ್ದಾರೆ.

"10 ಸದಸ್ಯರ ಭಾರತೀಯ ಪುರುಷರ ಬಾಕ್ಸಿಂಗ್ ತಂಡವು ತರಬೇತಿಯನ್ನು ಪ್ರಾರಂಭಿಸಿದೆ" ಎಂದು ಭಾರತೀಯ ಕ್ರೀಡಾ ಪ್ರಾಧಿಕಾರ ತಿಳಿಸಿದೆ.

ಇಟಲಿ ಮತ್ತು ಫ್ರಾನ್ಸ್​ಗೆ ತರಬೇತಿಗಾಗಿ 28 ಸದಸ್ಯರ ತಂಡವನ್ನು ಭಾರತೀಯ ಕ್ರೀಡಾ ಪ್ರಾಧಿಕಾರ ಆಯ್ಕೆ ಮಾಡಿತ್ತು. ಇದರಲ್ಲಿ 10 ಪುರುಷ ಬಾಕ್ಸರ್‌ಗಳು ಮತ್ತು ಆರು ಮಹಿಳಾ ಬಾಕ್ಸರ್‌ಗಳು ಮತ್ತು ಸಹಾಯಕ ಸಿಬ್ಬಂದಿ ಸೇರಿದ್ದಾರೆ.

ಪೂಜಾ ರಾಣಿ

ಭಾಗವಹಿಸುತ್ತಿರುವ ಬಾಕ್ಸರ್​ಗಳಲ್ಲಿ ಅಮಿತ್ ಪಂಗಲ್, ಆಶಿಶ್ ಕುಮಾರ್, ಸತೀಶ್ ಕುಮಾರ್, ಸಿಮ್ರಾಂಜಿತ್ ಕೌರ್ ಮತ್ತು ಪೂಜಾ ರಾಣಿ ಟೋಕಿಯೋ ಒಲಿಂಪಿಕ್ಸ್​ಗೆ ಅರ್ಹತೆ ಪಡೆದಿದ್ದರು.

ಅಕ್ಟೋಬರ್ 28ರಿಂದ ಅಕ್ಟೋಬರ್ 30ರವರೆಗೆ ಫ್ರಾನ್ಸ್‌ನ ನಾಂಟೆಸ್‌ನಲ್ಲಿ ನಡೆಯಲಿರುವ "ಅಲೆಕ್ಸಿಸ್ ವ್ಯಾಸ್ಟೈನ್" ಅಂತಾರಾಷ್ಟ್ರೀಯ ಬಾಕ್ಸಿಂಗ್ ಪಂದ್ಯಾವಳಿಯಲ್ಲಿ 13 ಮಂದಿ ಬಾಕ್ಸರ್‌ಗಳು ಭಾಗವಹಿಸಲಿದ್ದಾರೆ.

ABOUT THE AUTHOR

...view details