ಕರ್ನಾಟಕ

karnataka

ETV Bharat / sports

73ನೇ ಸ್ಟ್ರಾಂಡ್ಜಾ ಸ್ಮಾರಕ ಪಂದ್ಯಾವಳಿಯಲ್ಲಿ ಭಾಗವಹಿಸಲು ತೆರಳಿದ ಭಾರತದ ತಂಡ - 10 ಪುರುಷರು ಮತ್ತು 7 ಮಹಿಳಾ ಬಾಕ್ಸರ್‌ಗಳನ್ನು ಒಳಗೊಂಡ 17 ಸದಸ್ಯರ ಭಾರತೀಯ ಬಾಕ್ಸಿಂಗ್ ತಂಡ

ಕಳೆದ ಆವೃತ್ತಿಯ ಸ್ಟ್ರಾಂಡ್ಜಾ ಟೂರ್ನಿಯಲ್ಲಿ ಭಾರತ ಎರಡು ಪದಕಗಳನ್ನು ಗೆದ್ದುಕೊಂಡಿತ್ತು. ಇದರಲ್ಲಿ ದೀಪಕ್ ಕುಮಾರ್ ಬೆಳ್ಳಿ ಮತ್ತು ನವೀನ್ ಬೂರಾ ಅವರು ಕಂಚಿನ ಪದಕ ಪಡೆದಿದ್ದರು. ಆದರೆ ಮಹಿಳಾ ಬಾಕ್ಸರ್‌ಗಳು ವೇದಿಕೆ ಮೇಲೆ ಉನ್ನತ ಪ್ರದರ್ಶನ ನೀಡಲು ಸಾಧ್ಯವಾಗಿರಲಿಲ್ಲ. ಪಂದ್ಯಾವಳಿಯು ಫೆಬ್ರವರಿ 18 ರಿಂದ ಫೆಬ್ರವರಿ 28 ರವರೆಗೆ ನಡೆಯಲಿದೆ..

Indian Boxing contingent leaves for Sofia, Bulgaria to participate in Strandja Memorial Boxing Tournament
73 ನೇ ಸ್ಟ್ರಾಂಡ್ಜಾ ಸ್ಮಾರಕ ಪಂದ್ಯಾವಳಿಯಲ್ಲಿ ಭಾಗವಹಿಸಲು ತೆರಳಿದ ಭಾರತದ ತಂಡ

By

Published : Feb 18, 2022, 4:47 PM IST

ನವದೆಹಲಿ:10 ಪುರುಷರು ಮತ್ತು 7 ಮಹಿಳಾ ಬಾಕ್ಸರ್‌ಗಳನ್ನು ಒಳಗೊಂಡ 17 ಸದಸ್ಯರ ಭಾರತೀಯ ಬಾಕ್ಸಿಂಗ್ ತಂಡವು ಶುಕ್ರವಾರದ ಮುಂಜಾನೆ ಬಲ್ಗೇರಿಯಾದ ಸೋಫಿಯಾಕ್ಕೆ 73ನೇ ಸ್ಟ್ರಾಂಡ್ಜಾ ಸ್ಮಾರಕ ಪಂದ್ಯಾವಳಿಯಲ್ಲಿ ಭಾಗವಹಿಸಲು ತೆರಳಿದೆ. ಈ ಮೂಲಕ ಯುರೋಪ್‌ನ ಅತ್ಯಂತ ಹಳೆಯ ಅಂತಾರಾಷ್ಟ್ರೀಯ ಬಾಕ್ಸಿಂಗ್ ಪಂದ್ಯಾವಳಿಯಲ್ಲಿ ಇವರು ಭಾಗವಹಿಸಲಿದ್ದಾರೆ.

ಈ ಪಂದ್ಯಾವಳಿಯು ಫೆಬ್ರವರಿ 18 ರಿಂದ ಫೆಬ್ರವರಿ 28 ರವರೆಗೆ ನಡೆಯಲಿದೆ. ಇದು ಭಾರತೀಯ ಬಾಕ್ಸರ್‌ಗಳ ವರ್ಷದ ಮೊದಲ ಎಕ್ಸ್‌ಪೋಸರ್ ಟ್ರಿಪ್ ಆಗಿದೆ. ಆರು ಭಾರತೀಯ ಪುರುಷ ಬಾಕ್ಸರ್‌ಗಳು ತರಬೇತಿಯ ಸಮಯದಲ್ಲಿ ಉಂಟಾದ ತೊಂದರೆಗಳಿಂದಾಗಿ ಪಂದ್ಯಾವಳಿಯಿಂದ ಹೊರಗುಳಿಯಬೇಕಾಯಿತು.

ಈ ಮೂಲಕ ಭಾರತೀಯ ಪುರುಷರ ತಂಡದ ಭಾಗವಹಿಸುವಿಕೆಯನ್ನು ಏಳು ಬಾಕ್ಸರ್‌ಗಳಿಗೆ ಇಳಿಸಲಾಗಿದೆ ಮತ್ತು ತಂಡವು ಹೆಚ್ಚಾಗಿ ರಾಷ್ಟ್ರೀಯ ಪದಕ ವಿಜೇತರನ್ನು ಒಳಗೊಂಡಿದೆ. ಏಷ್ಯನ್ ಚಾಂಪಿಯನ್ ಪೂಜಾ ರಾಣಿ (81 ಕೆಜಿ) ಮತ್ತು ಸೋನಿಯಾ ಲಾಥರ್ (57 ಕೆಜಿ) ಅವರನ್ನು ತಂಡದಿಂದ ಹೊರಗಿಟ್ಟು ಮಹಿಳಾ ತಂಡವನ್ನು 10ಕ್ಕೆ ಇಳಿಸಲಾಗಿದೆ. ಈ ಹಿಂದೆ ಈ ಕ್ರೀಡಾಕೂಟದಲ್ಲಿ ತಂಡದ ಭಾಗವಹಿಸುವಿಕೆಯ ವೆಚ್ಚವನ್ನು ಸರ್ಕಾರ ಭರಿಸಲಿದೆ ಎಂದು ಭಾರತೀಯ ಕ್ರೀಡಾ ಪ್ರಾಧಿಕಾರ (ಎಸ್‌ಎಐ) ಹೇಳಿತ್ತು.

ಕಳೆದ ಆವೃತ್ತಿಯ ಸ್ಟ್ರಾಂಡ್ಜಾ ಟೂರ್ನಿಯಲ್ಲಿ ಭಾರತ ಎರಡು ಪದಕಗಳನ್ನು ಗೆದ್ದುಕೊಂಡಿತ್ತು. ಇದರಲ್ಲಿ ದೀಪಕ್ ಕುಮಾರ್ ಬೆಳ್ಳಿ ಮತ್ತು ನವೀನ್ ಬೂರಾ ಅವರು ಕಂಚಿನ ಪದಕ ಪಡೆದಿದ್ದರು. ಆದರೆ ಮಹಿಳಾ ಬಾಕ್ಸರ್‌ಗಳು ವೇದಿಕೆ ಮೇಲೆ ಉನ್ನತ ಪ್ರದರ್ಶನ ನೀಡಲು ಸಾಧ್ಯವಾಗಿರಲಿಲ್ಲ. ಪಂದ್ಯಾವಳಿಯು ಫೆಬ್ರವರಿ 18 ರಿಂದ ಫೆಬ್ರವರಿ 28 ರವರೆಗೆ ನಡೆಯಲಿದೆ.

ಇದನ್ನೂ ಓದಿ: ವನಿತೆಯರ ಏಕದಿನ ಕ್ರಿಕೆಟ್: ಟೀಂ ಇಂಡಿಯಾ ಮಣಿಸಿ ಸರಣಿ ಗೆದ್ದ ನ್ಯೂಜಿಲ್ಯಾಂಡ್

ತಂಡದ ವಿವರ:

ಮಹಿಳಾ ತಂಡ:

ನಿತು (48 ಕೆಜಿ), ಅನಾಮಿಕಾ (50 ಕೆಜಿ), ನಿಖತ್ (52 ಕೆಜಿ), ಶಿಕ್ಷಾ (54 ಕೆಜಿ), ಮೀನಾ ರಾಣಿ (60 ಕೆಜಿ), ಪರ್ವೀನ್ (63 ಕೆಜಿ), ಅಂಜಲಿ ತುಶೀರ್ (66 ಕೆಜಿ), ಅರುಂಧತಿ ಚೌಧರಿ (70 ಕೆಜಿ), ಸವೀತಿ (75 ಕೆಜಿ), ನಂದಿನಿ (81+ಕೆಜಿ).

ಪುರುಷ ತಂಡ:

ಪುರುಷ ತಂಡ

ರೋಹಿತ್ ಮೋರ್ (57 ಕೆಜಿ), ವರೀಂದರ್ ಸಿಂಗ್ (60 ಕೆಜಿ), ಆಕಾಶ್ (67 ಕೆಜಿ), ಸುಮಿತ್ (75 ಕೆಜಿ), ಸಚಿನ್ ಕುಮಾರ್ (80 ಕೆಜಿ), ಲಕ್ಷ್ಯ ಚಹಾರ್ (86 ಕೆಜಿ), ನರೇಂದರ್ (92+ ಕೆಜಿ).

ABOUT THE AUTHOR

...view details