ಕರ್ನಾಟಕ

karnataka

ETV Bharat / sports

ಆಡ್ರಿಯಾಟಿಕ್ ಪರ್ಲ್ ಬಾಕ್ಸಿಂಗ್ ಟೂರ್ನಮೆಂಟ್: ಚಿನ್ನ ಗೆದ್ದ ವಿಂಕಾ, ಚಾನು - ಬಾಕ್ಸಿಂಗ್ ಟೂರ್ನಮೆಂಟ್​

ಮೊದಲ ದಿನ ಆಲ್ಫಿಯಾ ಪಠಾಣ್​ 81+ ಕೆಜಿ ವಿಭಾಗದಲ್ಲಿ ಮೊದಲ ಚಿನ್ನದ ಪದಕ ಪಡೆದಿದ್ದರು. ಈ ದಿನ ಭಾರತ ತಂಡ 2 ಚಿನ್ನ, 2 ಬೆಳ್ಳಿ ಮತ್ತು 3 ಕಂಚಿನ ಪದಕ ಪಡೆಯುವ ಮೂಲಕ ಪ್ರಾಬಲ್ಯ ಸಾಧಿಸಿತು.

ಆಡ್ರಿಯಾಟಿಕ್ ಪರ್ಲ್ ಬಾಕ್ಸಿಂಗ್ ಟೂರ್ನಮೆಂಟ್
ವಿಂಕಾಗೆ ಚಿನ್ನದ ಪದ

By

Published : Feb 21, 2021, 7:52 PM IST

ಬುಡ್ವಾ(ಮಾಂಟೆನೆಗ್ರೊ):ಮಾಂಟೆನೆಗ್ರೋದ ಬುಡ್ವಾದಲ್ಲಿ ನಡೆಯುತ್ತಿರುವ 30ನೇ ಆಡ್ರಿಯಾಟಿಕ್​ ಪರ್ಲ್​ ಬಾಕ್ಸಿಂಗ್ ಟೂರ್ನಮೆಂಟ್​ನಲ್ಲಿ ಭಾರತದ ವಿಂಕಾ ಮತ್ತು ಟಿ.ಸನಮಚಾ ಚಿನ್ನದ ಪದಕ ಗೆದ್ದಿದ್ದಾರೆ.

ಮೊದಲ ದಿನ ಆಲ್ಫಿಯಾ ಪಠಾಣ್​ 81+ ಕೆಜಿ ವಿಭಾಗದಲ್ಲಿ ಮೊದಲ ಚಿನ್ನದ ಪದಕ ಪಡೆದಿದ್ದರು. ಈ ದಿನ ಭಾರತ ತಂಡ 2 ಚಿನ್ನ, 2 ಬೆಳ್ಳಿ ಮತ್ತು 3 ಕಂಚಿನ ಪದಕ ಪಡೆಯುವ ಮೂಲಕ ಪ್ರಾಬಲ್ಯ ಸಾಧಿಸಿತು.

ರೋಹ್ಟಕ್‌ನ ವಿಂಕಾ ಫೈನಲ್‌ನಲ್ಲಿ ಪ್ರತಿಸ್ಪರ್ಧಿಯಾದ ಮೊಲ್ಡೊವಾದ ಕ್ರಿಸ್ಟಿನಾ ಕ್ರಿಪರ್‌ ಅವರನ್ನು 5-0 ಅಂತರದಿಂದ ಸುಲಭವಾಗಿ ಮಣಿಸಿ ಚಿನ್ನಕ್ಕೆ ಮುತ್ತಿಕ್ಕಿದರೆ, 75 ಕೆಜಿ ವಿಭಾಗದಲ್ಲಿ ಮಣಿಪುರದ ಹುಡುಗಿ ಟಿ.ಸನಮಚಾ ಚಾನು 5-0 ಅಂತರದಿಂದ ಭಾರತದವರೇ ಆದ ರಾಜ್ ಸಹೀಬಾ ಅವರ ವಿರುದ್ಧ ಪ್ರಾಬಲ್ಯ ಸಾಧಿಸಿ ದೇಶಕ್ಕೆ 3ನೇ ಚಿನ್ನದ ಪದಕ ತಂದುಕೊಟ್ಟರು. ರಾಜ್ ಸಹೀಬಾ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟರು.

48 ಕೆಜಿ ವಿಭಾಗದ ಫೈನಲ್‌ ಬೌಟ್‌ನಲ್ಲಿ ಭಾರತದ ಗೀತಿಕಾ 1-4ರಿಂದ ಉಜ್ಬೆಕಿಸ್ತಾನದ ಫರ್ಜಾನಾ ಫೋಜಿಲೋವಾ ವಿರುದ್ಧ ಸೋಲು ಕಂಡು ಬೆಳ್ಳಿ ಪದಕ ಪಡೆದರು.

ಉಳಿದಂತೆ ಪುರುಷರ ವಿಭಾದ 49 ಕೆಜಿ ವಿಭಾಗದಲ್ಲಿ ಪ್ರಿಯಾಂಶು ದಬಾಸ್​ ತ್ತು ಜುಂಗೂ ಸೆಮಿಫೈನಲ್​ನಲ್ಲಿ ಸೋಲು ಕಾಣುವ ಮೂಲಕ ಕಂಚಿನ ಪದಕ ಪಡೆದರು.

ABOUT THE AUTHOR

...view details