ಕರ್ನಾಟಕ

karnataka

ETV Bharat / sports

Asian Games: ಪುರುಷರ 10 ಮೀಟರ್ ಏರ್ ಪಿಸ್ತೂಲ್​ನಲ್ಲಿ ಭಾರತಕ್ಕೆ ಸ್ವರ್ಣ ಪದಕ - ಅರ್ಜುನ್ ಸಿಂಗ್ ಚೀಮಾ

Asian Games: ಪುರುಷರ 10 ಮೀ ಏರ್ ಪಿಸ್ತೂಲ್ ಟೀಮ್ ಈವೆಂಟ್‌ನಲ್ಲಿ ಭಾರತ ತಂಡದ ಅರ್ಜುನ್ ಚೀಮಾ, ಸರಬ್ಜೋತ್ ಸಿಂಗ್, ಶಿವ ನರ್ವಾ ಅವರು ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ.

Asian Games
ಏಷ್ಯನ್ ಗೇಮ್ಸ್ ಏರ್ ಪಿಸ್ತೂಲ್​ನಲ್ಲಿ ಭಾರತಕ್ಕೆ ಸ್ವರ್ಣ ಪದಕ

By PTI

Published : Sep 28, 2023, 8:31 AM IST

Updated : Sep 28, 2023, 9:50 AM IST

ಹ್ಯಾಂಗ್‌ಝೌ:ಹ್ಯಾಂಗ್‌ಝೌನಲ್ಲಿ ನಡೆದ ಏಷ್ಯನ್ ಗೇಮ್ಸ್​ನ ಪುರುಷರ 10 ಮೀಟರ್ ಏರ್ ಪಿಸ್ತೂಲ್ ಟೀಮ್ ಈವೆಂಟ್‌ನಲ್ಲಿ ಭಾರತದ ಸರಬ್ಜೋತ್ ಸಿಂಗ್, ಅರ್ಜುನ್ ಸಿಂಗ್ ಚೀಮಾ, ಶಿವ ನರ್ವಾಲ್ ಅವರನ್ನೊಳಗೊಂಡ ಶೂಟಿಂಗ್ ತಂಡವು ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿದೆ. ಭಾರತದ ತಂಡವು ಫೈನಲ್​ನಲ್ಲಿ ಅಗ್ರಸ್ಥಾನ ಪಡೆದು ಚಿನ್ನಕ್ಕೆ ಮುತ್ತಿಟ್ಟಿದೆ.

ಏಷ್ಯನ್ ಗೇಮ್ಸ್​ನ 5ನೇ ದಿನದಂದು (ಗುರುವಾರ) ನವೋರೆಮ್ ರೋಶಿಬಿನಾ ದೇವಿ ಭಾರತಕ್ಕೆ ಬೆಳ್ಳಿ ಪದಕವನ್ನು ಗೆದ್ದರು. ರೋಶಿಬಿನಾ ಮಹಿಳೆಯರ 60 ಕೆಜಿ ವುಶು ಸ್ಪರ್ಧೆಯಲ್ಲಿ ಚೀನಾದ ವು ಕ್ಸಿಯಾವೊಯ್ ವಿರುದ್ಧ ಸೋಲು ಅನುಭವಿಸಿದರು.

ಪುರುಷರ 10 ಮೀಟರ್‌ ಏರ್‌ ಪಿಸ್ತೂಲ್‌ ಟೀಮ್​ ಈವೆಂಟ್​ನಲ್ಲಿ ಭಾರತದ ಯಶೋಗಾಥೆ ಮುಂದುವರಿದಿದೆ. ಗುರುವಾರ ನಡೆದ ವೈಯಕ್ತಿಕ ಫೈನಲ್‌ನಲ್ಲಿ ಸರಬ್ಜೋತ್ ಸಿಂಗ್, ಅರ್ಜುನ್ ಸಿಂಗ್ ಚೀಮಾ ಮತ್ತು ಶಿವ ನರ್ವಾಲ್ ಅವರ ತಂಡವು ಚೀನಾ ತಂಡವನ್ನು ಸೋಲಿಸಿ ವಿಜೇತರಾಗಿ ಹೊರಹೊಮ್ಮಿತು. ಶೂಟಿಂಗ್​ನಲ್ಲಿ ಭಾರತಕ್ಕೆ ನಾಲ್ಕನೇ ಚಿನ್ನದ ಪದಕ ಲಭಿಸಿದೆ.

ಒಂದೇ ಅಂಕದ ಅಂತರದಿಂದ ಚೀನಾ ಸೋಲು:ಏಷ್ಯನ್ ಗೇಮ್ಸ್‌ನಲ್ಲಿ ಭಾರತೀಯ ಶೂಟರ್‌ಗಳನ್ನು ಪದಕ ಬೇಟೆ ಮುಂದುವರಿದಿದೆ. ಈವರೆಗೆ ನಾಲ್ಕು ಚಿನ್ನ, ನಾಲ್ಕು ಬೆಳ್ಳಿ ಮತ್ತು ಐದು ಕಂಚಿನ ಪದಕಗಳನ್ನು ಶೂಟಿಂಗ್ ತಂಡ ಗಳಿಸಿದೆ. ಭಾರತ ತಂಡವು ಒಟ್ಟು 1,734 ಸ್ಕೋರ್‌ನೊಂದಿಗೆ ಚೀನಾ ತಂಡವನ್ನು ಒಂದೇ ಅಂಕದ ಅಂತರದಿಂದ ಸೋಲಿಸಿತು. ವಿಯೆಟ್ನಾಂ 1,730 ಅಂಕಗಳೊಂದಿಗೆ ಕಂಚಿನ ಪದಕಕ್ಕೆ ತೃಪ್ತಿಪಟ್ಟಿತು. ಸರಬ್ಜೋತ್, ಅರ್ಜುನ್ ಮತ್ತು ಶಿವ ಕ್ರಮವಾಗಿ 580 ಮತ್ತು 578 ಹಾಗೂ 576 ಸ್ಕೋರ್ ಮಾಡುವಲ್ಲಿ ಯಶಸ್ವಿಯಾದರು.

ಪ್ರಧಾನಿ ಮೋದಿ ಅಭಿನಂದನೆ:ಏಷ್ಯನ್ ಗೇಮ್ಸ್‌ನಲ್ಲಿ ನಮ್ಮ ಗಮನಾರ್ಹ 10 ಮೀಟರ್ ಏರ್ ಪಿಸ್ತೂಲ್ ಪುರುಷರ ತಂಡದಿಂದ ಶೂಟಿಂಗ್‌ನಲ್ಲಿ ಮತ್ತೊಂದು ಚಿನ್ನ ಗಳಿಸಿದೆ. ಸರಬ್ಜೋತ್ ಸಿಂಗ್, ಅರ್ಜುನ್ ಸಿಂಗ್ ಚೀಮಾ ಮತ್ತು ಶಿವ ನರ್ವಾಲ್ ಅವರು ತಮ್ಮ ಉತ್ತಮ ಪ್ರದರ್ಶನದಿಂದ ಇಡೀ ರಾಷ್ಟ್ರವನ್ನು ಹೆಮ್ಮೆಪಡುವಂತೆ ಮಾಡಿದ್ದಾರೆ. ನಾನು ಅವರನ್ನು ಅಭಿನಂದಿಸುತ್ತೇನೆ. ಅವರ ಮುಂದಿನ ಪ್ರಯತ್ನಗಳಿಗೆ ಶುಭ ಹಾರೈಸುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಸಾಮಾಜಿಕ ಜಾಲತಾಣವಾದ ಎಕ್ಸ್​ನಲ್ಲಿ ಬರೆದಿದ್ದಾರೆ.

ಇದನ್ನೂ ಓದಿ:Asian games: ಭಾರತಕ್ಕೆ ಮತ್ತೊಂದು ಪದಕ... ವುಶು ಫೈನಲ್‌ನಲ್ಲಿ ಬೆಳ್ಳಿ ಪದಕ ಗೆದ್ದ ರೋಶಿಬಿನಾ ದೇವಿ ನವೋರೆಮ್

Last Updated : Sep 28, 2023, 9:50 AM IST

ABOUT THE AUTHOR

...view details