ಲಿಮಾ :ಐಎಸ್ಎಸ್ಎಫ್ ಜೂನಿಯರ್ ವಿಶ್ವ ಚಾಂಪಿಯನ್ಶಿಪ್ನಲ್ಲಿ ಭಾರತದ ಪ್ರಾಬಲ್ಯ ಮುಂದುವರೆದಿದೆ. ಇದೀಗ ಚಿನ್ನದ ಪದಕವನ್ನು ಭಾರತ ಬಾಚಿಕೊಂಡಿದೆ.
ದೇಶದ ರಿದಮ್ ಸಂಗ್ವಾನ್ ಮತ್ತು ವಿಜಯ್ವೀರ್ ಸಿಧು ಜೋಡಿಯು 25 ಮೀಟರ್ ರ್‍ಯಾಪಿಡ್ ಫೈರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದಿದೆ. ಸ್ಪರ್ಧೆಯಲ್ಲಿ ಇದು ಭಾರತದ 23ನೇ (10ನೇ ಚಿನ್ನದ ಪದಕ)ಪದಕವಾಗಿದೆ. ಇದರೊಂದಿಗೆ ಅಗ್ರಸ್ಥಾನವನ್ನು ಭಾರತ ಭದ್ರಪಡಿಸಿಕೊಂಡಿದೆ.
ರಿದಮ್ ಸಂಗ್ವಾನ್ ಮತ್ತು ವಿಜಯ್ವೀರ್ ಸಿಧು ಜೋಡಿಯು ಥಾಯ್ಲೆಂಡ್ನ ಕನ್ಯಾಕೋರ್ನ್ನ ಹಿರುನ್ಫೋಮ್ ಮತ್ತು ಶ್ವಾಕೋನ್ ಟ್ರಿನಿಫಕ್ರೊನ್ ಅವರನ್ನು ಸೋಲಿಸಿ ಗೆಲುವು ಸಾಧಿಸಿದರು.
ಇದನ್ನೂ ಓದಿ:IPL: ಇಂದು ಸಂಜೆ ಏಕಕಾಲದಲ್ಲಿ ಎರಡು ಪಂದ್ಯ; ಐಪಿಎಲ್ ಇತಿಹಾಸದಲ್ಲಿ ಇದೇ ಮೊದಲು
ಇನ್ನು, ತೇಜಸ್ವಿನಿ ಮತ್ತು ಅನಿಷ್ ತಂಡ ಥಾಯ್ಲೆಂಡ್ನ ಚವಿಸ ಪಡುಕ ಮತ್ತು ರಾಮ್ ಖಮ್ಹೆಂಗ್ ಅವರನ್ನು ಸೋಲಿಸಿ ಕಂಚಿನ ಪದಕ ಪಡೆದರು. ಸದ್ಯ ಭಾರತ 10 ಚಿನ್ನ, 9 ಬೆಳ್ಳಿ ಮತ್ತು 4 ಕಂಚಿನ ಪದಕಗಳನ್ನು ಪಡೆದಿದೆ.