ಅಡಿಲೇಡ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಐದು ಟೆಸ್ಟ್ ಸರಣಿಯ ನಾಲ್ಕನೇ ಟೆಸ್ಟ್ ಪಂದ್ಯ ಇಂದು ಬೆಳಗ್ಗೆ 11 ಗಂಟೆಗೆ ಆರಂಭವಾಗಲಿದೆ. ಐದು ಟೆಸ್ಟ್‌ಗಳ ಸರಣಿಯಲ್ಲಿ ಭಾರತ 1-2 ಹಿನ್ನಡೆಯಲ್ಲಿದೆ. ಸರಣಿ ಸಮಬಲಗೊಳಿಸಲು ಭಾರತಕ್ಕೆ ಇಂದಿನ ಪಂದ್ಯ ಗೆಲ್ಲಲೇಬೇಕಾಗಿದೆ. ಈ ಪಂದ್ಯದಲ್ಲಿ ಭಾರತ ಸೋತರೆ ಸರಣಿ ಕೈ ತಪ್ಪಲಿದೆ. ನಾಯಕ ಹರ್ಮನ್‌ಪ್ರೀತ್ ಸಿಂಗ್ ನಾಯಕತ್ವದಲ್ಲಿ ತಂಡವು ಪಂದ್ಯವನ್ನು ಗೆಲ್ಲಲು ಸಂಪೂರ್ಣ ಬಲವನ್ನು ಪ್ರಯೋಗಿಸಬೇಕಾಗಿದೆ. ಇದರಿಂದಾಗಿ ಈ ಸರಣಿ ಕೂತುಹಲ ಮೂಡಿಸಿದೆ.
ಮೂರನೇ ಪಂದ್ಯದಲ್ಲಿ ಭಾರತಕ್ಕೆ ಗೆಲುವು:ನವೆಂಬರ್ 30 ರಂದು ನಡೆದ ಮೂರನೇ ಪಂದ್ಯದಲ್ಲಿ ಭಾರತ 4-3 ರಿಂದ ಆಸ್ಟ್ರೇಲಿಯಾವನ್ನು ಸೋಲಿಸಿತು. ನಾಯಕ ಹರ್ಮನ್‌ಪ್ರೀತ್ ಸಿಂಗ್ ಮೊದಲ ಗೋಲು (12ನೇ ನಿಮಿಷ) ಬಾರಿಸಿದರು. ಅಭಿಷೇಕ್ ಎರಡನೇ (47ನೇ ನಿಮಿಷ) ಗೋಲು ಬಾರಿಸಿದ್ರೆ, ಶಂಶೇರ್ ಸಿಂಗ್ ತೃತೀಯ (57ನೇ ನಿಮಿಷ) ಮತ್ತು ಆಕಾಶದೀಪ್ (60ನೇ ನಿಮಿಷ) ನಾಲ್ಕನೇ ಗೋಲು ಗಳಿಸಿದರು. ಇನ್ನು ಆಸ್ಟ್ರೇಲಿಯಾ ಪರ ಜಾಕ್ ವೆಲ್ಚ್ (25ನೇ ನಿಮಿಷ), ಅರಾನ್ ಜಲೆವ್ಸ್ಕಿ (32ನೇ ನಿಮಿಷ) ಮತ್ತು ನಾಥನ್ ಇಫ್ರಾಮ್ಸ್ (59ನೇ ನಿಮಿಷ) ಗೋಲು ಗಳಿಸಿದರು.
ಭಾರತಕ್ಕೆ ಎರಡು ಪಂದ್ಯಗಳಲ್ಲಿ ಸೋಲು:ನವೆಂಬರ್ 26 ರಂದು ನಡೆದ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ 5-4 ರಲ್ಲಿ ಭಾರತವನ್ನು ಸೋಲಿಸಿತು. ಆ ಪಂದ್ಯದಲ್ಲಿ ಆಕಾಶದೀಪ್ ಮೂರು ಗೋಲು ಗಳಿಸಿ ಹ್ಯಾಟ್ರಿಕ್ ಸಾಧನೆ ಮಾಡಿದರು. ಹರ್ಮನ್‌ಪ್ರೀತ್ ಸಿಂಗ್ ಒಂದು ಗೋಲು ಗಳಿಸಿದರು. ನವೆಂಬರ್ 27 ರಂದು ನಡೆದ ಎರಡನೇ ಪಂದ್ಯದಲ್ಲಿ ಆಸ್ಟ್ರೇಲಿಯಾ 7-4 ರಲ್ಲಿ ಅಂತರದಲ್ಲಿ ಭಾರತವನ್ನು ಮಣಿಸಿತು.
ಪಂದ್ಯದ ವೇಳಾಪಟ್ಟಿ:
- ಡಿಸೆಂಬರ್ 3, ಶನಿವಾರ ಬೆಳಗ್ಗೆ 11:00 ಗಂಟೆಗೆ
- ಡಿಸೆಂಬರ್ 4, ಭಾನುವಾರ ಬೆಳಗ್ಗೆ 11:00 ಗಂಟೆಗೆ