ರಾಂಚಿ (ಜಾರ್ಖಂಡ್): ಭಾರತೀಯ ಮಹಿಳಾ ಹಾಕಿ ತಂಡವು ಗುರುವಾರ (ನಾಳೆ) ಇಲ್ಲಿ ನಡೆಯಲಿರುವ FIH ಹಾಕಿ ಒಲಿಂಪಿಕ್ಸ್ ಕ್ವಾಲಿಫೈಯರ್ಸ್ ಸೆಮಿ-ಫೈನಲ್‌ನಲ್ಲಿ ಜರ್ಮನಿ ತಂಡವನ್ನು ಎದುರಿಸಲಿದೆ. ಭಾರತವು ತನ್ನ ಅಂತಿಮ ಪೂಲ್ ಬಿ ಪಂದ್ಯದಲ್ಲಿ ಇಟಲಿಯನ್ನು 5-1 ಅಂತರದಿಂದ ಸೋಲಿಸಿತು. ಇದೀಗ ಸೆಮಿಫೈನಲ್‌ನಲ್ಲಿ ಜರ್ಮನಿ ವಿರುದ್ಧ ಗೆಲುವು ಸಾಧಿಸಿದರೆ 2024ರ ಪ್ಯಾರಿಸ್ ಒಲಿಂಪಿಕ್ಸ್‌ಗೆ ಭಾರತ ಅರ್ಹತೆ ಪಡೆಯಲಿದೆ.
ಗ್ರೂಪ್ ಹಂತದಲ್ಲಿ ತನ್ನ ಮೊದಲ ಪಂದ್ಯದಲ್ಲಿ USA ವಿರುದ್ಧ 0-1 ಸೋಲಿನೊಂದಿಗೆ ಒಲಿಂಪಿಕ್ಸ್ ಅರ್ಹತೆ ಪ್ರಾರಂಭಿಸಿದ ಭಾರತ ತನ್ನ ಎರಡನೇ ಗೇಮ್‌ನಲ್ಲಿ ನ್ಯೂಜಿಲೆಂಡ್ ಅನ್ನು 3-1 ಗೋಲುಗಳಿಂದ ಸೋಲಿಸಿ ಬಲಿಷ್ಠವಾಗಿ ಕಮ್ಬ್ಯಾಕ್ ಮಾಡಿತು. ನಂತರ ಇಟಲಿ ವಿರುದ್ಧವೂ ತಮ್ಮ ಫಾರ್ಮ್ ಅನ್ನು ಮುಂದುವರೆಸಿದ ಭಾರತದ ವನಿತೆಯರು 5-1 ಅಂತರದ ಗೆಲುವು ಸಾಧಿಸಿದರು.