ಕರ್ನಾಟಕ

karnataka

ETV Bharat / sports

ಇಂಡಿಯಾ ಓಪನ್: ಕಿಡಂಬಿ ಶ್ರೀಕಾಂತ್ ಸೇರಿ 7 ಭಾರತೀಯ ಶಟ್ಲರ್​ಗಳಿಗೆ ಕೋವಿಡ್‌ - ಇಂಡಿಯಾ ಓಪನ್​ನಲ್ಲಿ ಕೋವಿಡ್​ 19

ಟೂರ್ನಿಯಲ್ಲಿ ಅಗ್ರ ಶ್ರೇಯಾಂಕ ಪಡೆದುಕೊಂಡಿದ್ದ ಶ್ರೀಕಾಂತ್ ಜೊತೆಗೆ ಅಶ್ವಿನಿ ಪೊನ್ನಪ್ಪ, ರಿತಿಕಾ ರಾಹುಲ್ ಠಕರ್, ತ್ರೀಸಾ ಜಾಲಿ, ಮಿಥುನ್ ಮಂಜುನಾಥ್, ಸಿಮ್ರಾನ್ ಅಮನ್ ಸಿಂಗ್ ಮತ್ತು ಖುಷಿ ಗುಪ್ತಾರಿಗೆ ಕೋವಿಡ್​ ಪಾಸಿಟಿವ್ ದೃಢಪಟ್ಟಿದೆ.

Srikanth, six other players withdrawn after testing positive for COVID-19
ಕಿಡಂಬಿ ಶ್ರೀಕಾಂತ್​ಗೆ ಕೊರೊನಾ

By

Published : Jan 13, 2022, 5:44 PM IST

ನವದೆಹಲಿ: ಇಂಡಿಯಾ ಓಪನ್​ ಟೂರ್ನಿಯಲ್ಲಿ ಪಾಲ್ಗೊಂಡಿದ್ದ ವಿಶ್ವ ಚಾಂಪಿಯನ್​ಶಿಪ್ ಬೆಳ್ಳಿ ಪದಕ ವಿಜೇತ ಕಿಡಂಬಿ ಶ್ರೀಕಾಂತ್​ ಸೇರಿದಂತೆ ಏಳು ಶಟ್ಲರ್​ಗಳಿಗೆ ಕೋವಿಡ್​ ಸೋಂಕು ದೃಢಪಟ್ಟಿದ್ದು, ಟೂರ್ನಿಯಿಂದ ಹೊರಬಂದಿದ್ದಾರೆ.

ಭಾರತದಲ್ಲಿ ಕೋವಿಡ್‌ 3ನೇ ಅಲೆ ದಿನದಿಂದ ದಿನಕ್ಕೆ ಉಲ್ಬಣಗೊಳ್ಳುತ್ತಿದೆ. ಅದರ ಪರಿಣಾಮ ಕ್ರೀಡೆಗೂ ತಟ್ಟಿದೆ. ಇಂಡಿಯಾ ಓಪನ್​ನಲ್ಲಿ ಭಾಗವಹಿಸಿದ್ದ ಏಳು ಆಟಗಾರರಿಗೆ ಕೊರೊನಾ ದೃಢಪಟ್ಟಿದೆ ಎಂದು ಬ್ಯಾಡ್ಮಿಂಟನ್ ಫೆಡರೇಷನ್​ ಖಚಿತಪಡಿಸಿದೆ. ಇಂಡಿಯಾ ಓಪನ್ ಆಯೋಜಕರಾದ ಬ್ಯಾಡ್ಮಿಂಟನ್ ಅಸೋಸಿಯೇಷನ್ ಆಫ್ ಇಂಡಿಯಾ ಸೋಂಕಿತ ಆಟಗಾರರ ಹೆಸರನ್ನು ಗುರುವಾರ ಬಹಿರಂಗಪಡಿಸಿದೆ.

ಟೂರ್ನಿಯಲ್ಲಿ ನಂಬರ್​ 1 ಶ್ರೇಯಾಂಕ ಪಡೆದುಕೊಂಡಿದ್ದ ಶ್ರೀಕಾಂತ್, ಅಶ್ವಿನಿ ಪೊನ್ನಪ್ಪ, ರಿತಿಕಾ ರಾಹುಲ್ ಠಕರ್, ತ್ರೀಸಾ ಜಾಲಿ, ಮಿಥುನ್ ಮಂಜುನಾಥ್, ಸಿಮ್ರಾನ್ ಅಮನ್ ಸಿಂಗ್ ಮತ್ತು ಖುಷಿ ಗುಪ್ತಾರಿಗೆ ಕೋವಿಡ್​ ತಗುಲಿದೆ.

ಈ ಆಟಗಾರರು ಟೂರ್ನಿಯ 2ನೇ ಸುತ್ತಿಗೆ ತೇರ್ಗಡೆಗೊಂಡಿದ್ದರು. ಆದರೆ ಟೂರ್ನಿಯಿಂದ ಹಿಂದೆ ಸರಿದಿರುವುದರಿಂದ ಮುಖ್ಯ ಡ್ರಾದಲ್ಲಿ ಆಟಗಾರರನ್ನು ಬದಲಾಯಿಸಲಾಗುವುದಿಲ್ಲ. ಬದಲಾಗಿ ವಾಕ್ ಅವರ ಎದುರಾಳಿಗಳಿಗೆ ಮುಂದಿನ ಸುತ್ತಿಗೆ ವಾಕ್ಓವರ್ ನೀಡಲಾಗುತ್ತದೆ ಎಂದು ಬಿಎಐ ತಿಳಿಸಿದೆ.

2022ರ ಇಂಡಿಯಾ ಓಪನ್​ ಟೂರ್ನಮೆಂಟ್​ ಅನ್ನು ಬಿಎಐ ಇಂದಿರಾ ಗಾಂಧಿ ಸ್ಟೇಡಿಯಂನ ಕೆಡಿ ಜಾಧವ್​ ಇಂದೋರ್​ ಹಾಲ್​ನಲ್ಲಿ ಪ್ರೇಕ್ಷರಿಗೆ ಅವಕಾಶವಿಲ್ಲದೆ ನಡೆಸಲಾಗುತ್ತಿದೆ. ಪ್ರೋಟೋಕಾಲ್​ ಪ್ರಕಾರ, ಪ್ರತಿದಿನ ಎಲ್ಲ ಆಟಗಾರರು ಕೋವಿಡ್​ ಪರೀಕ್ಷೆಗೆ ಒಳಪಡಬೇಕಾಗಿದೆ.

ಇದನ್ನೂ ಓದಿ:ಇಂಡಿಯಾ ಓಪನ್: ಕ್ವಾರ್ಟರ್ ಫೈನಲ್ಸ್​ಗೆ ಸಿಂಧು, ಸೋತು ಹೊರಬಿದ್ದ ಸೈನಾ

ABOUT THE AUTHOR

...view details