ಭುವನೇಶ್ವರ(ಒಡಿಶಾ):ಜೂನಿಯರ್ ಹಾಕಿ ವಿಶ್ವಕಪ್ನಲ್ಲಿ ತಾನು ಆಡಿರುವ ಮೊದಲ ಪಂದ್ಯದಲ್ಲಿ ಸೋಲು ಕಾಣುವ ಮೂಲಕ ನಿರಾಶೆಗೊಳಗಾಗಿದ್ದ ಭಾರತ ಇದೀಗ ಸತತ ಎರಡು ಪಂದ್ಯಗಳಲ್ಲಿ ಗೆಲುವು ದಾಖಲು ಮಾಡಿದೆ. ಈ ಮೂಲಕ ಬಿ ಪೂಲ್ನಲ್ಲಿ ಕ್ವಾರ್ಟರ್ಫೈನಲ್ಗೆ ಲಗ್ಗೆ ಹಾಕಿದೆ.
ಇಂದು ಪೊಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡಿದ ಭಾರತೀಯ ಯುವ ಪಡೆ ಎದುರಾಳಿ ತಂಡದ ವಿರುದ್ಧ 8-2 ಅಂತರದಿಂದ ಗೆಲುವು ದಾಖಲಿಸಿತ್ತು.
ಈಗಾಗಲೇ ತಾನಾಡಿರುವ ಫ್ರಾನ್ಸ್ ವಿರುದ್ಧದ ಪಂಧ್ಯದಲ್ಲಿ ಸೋಲು ಕಂಡಿದ್ದ ಭಾರತ ತದನಂತರ ಕೆನಡಾ ವಿರುದ್ಧದ ಪಂದ್ಯದಲ್ಲಿ 13-1 ಅಂತರದಿಂದ ಜಯ ಸಾಧಿಸಿತ್ತು. ಇಂದಿನ ಪಂದ್ಯದಲ್ಲೂ ಅದೇ ಪ್ರದರ್ಶನ ನೀಡಿ, ಕ್ವಾರ್ಟರ್ಫೈನಲ್ಗೆ ಲಗ್ಗೆ ಹಾಕಿದೆ.
ಇದನ್ನೂ ಓದಿರಿ:Aircel-Maxis case : ಮಾಜಿ ಸಚಿವ ಚಿದಂಬರಂ ಹಾಗೂ ಮಗ ಕಾರ್ತಿಗೆ ಸಮನ್ಸ್
ಇದೀಗ ಮುಂದಿನ ಕ್ವಾರ್ಟರ್ಫೈನಲ್ ಪಂದ್ಯದಲ್ಲಿ ಬಲಿಷ್ಠ ಬೆಲ್ಜಿಯಂ ವಿರುದ್ಧ ಹೋರಾಟ ನಡೆಸಲಿದೆ. ಗೆಲುವಿನ ನಗೆ ಬೀರುವ ಉತ್ಸಾಹದಲ್ಲಿದೆ. ಈ ಪಂದ್ಯ ಡಿಸೆಂಬರ್ 1ರಂದು ನಡೆಯಲಿದೆ.