ಕರ್ನಾಟಕ

karnataka

ETV Bharat / sports

BWF World Junior Championships: ಜಯದ ಓಟ ಮುಂದುವರೆಸಿದ ಜೂನಿಯರ್ಸ್​.. ಬ್ರೆಜಿಲ್ ವಿರುದ್ಧ ಭಾರತಕ್ಕೆ ಗೆಲುವು - ವೆನ್ನಾಲ ಕಲಗೊಟ್ಲ

ಅಮೆರಿಕದ ಸ್ಪೋಕೇನ್‌ನಲ್ಲಿ ನಡೆಯುತ್ತಿರುವ ಬಿಡಬ್ಲ್ಯುಎಫ್ ವಿಶ್ವ ಜೂನಿಯರ್ ಚಾಂಪಿಯನ್‌ಶಿಪ್‌ನ ಮಿಶ್ರ ಟೀಮ್ ಈವೆಂಟ್‌ನಲ್ಲಿ ಭಾರತೀಯ ಶಟ್ಲರ್‌ಗಳು ಬ್ರೆಜಿಲ್ ವಿರುದ್ಧ 5-0 ಅಂತರದಿಂದ ಗೆಲುವು ಸಾಧಿಸಿದ್ದಾರೆ.

BWF World Junior Championships
BWF World Junior Championships

By ETV Bharat Karnataka Team

Published : Sep 27, 2023, 6:43 PM IST

ಸ್ಪೋಕೇನ್ (ಯುಎಸ್​ಎ): ಬಿಡಬ್ಲ್ಯುಎಫ್ ವಿಶ್ವ ಜೂನಿಯರ್ ಚಾಂಪಿಯನ್‌ಶಿಪ್‌ನಲ್ಲಿ ಭಾರತೀಯ ಯುವ ಬ್ಯಾಡ್ಮಿಂಟನ್ ತಾರೆಗಳು ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಅಮೆರಿಕದಲ್ಲಿ ನಡೆಯುತ್ತಿರುವ ಸ್ಪರ್ಧೆಯಲ್ಲಿ ನಿನ್ನೆ ಜಯದ ಮೂಲಕ ಶುಭಾರಂಭ ಮಾಡಿದ ತಂಡವು ಇಂದು ಗೆಲುವಿನ ಓಟವನ್ನು ಮುಂದುವರೆಸಿದೆ. ಮಿಶ್ರ ಟೀಮ್ ಚಾಂಪಿಯನ್‌ಶಿಪ್‌ನಲ್ಲಿ ಭಾರತೀಯ ಬ್ಯಾಡ್ಮಿಂಟನ್ ತಂಡವು ಇಂದು ಆರಂಭದಲ್ಲಿ ಬ್ರೆಜಿಲ್ ವಿರುದ್ಧ 5-0 ಅಂಕಗಳಿಂದ ಜಯ ದಾಖಲಿಸಿದೆ.

ಬಿಡಬ್ಲ್ಯುಎಫ್ ವಿಶ್ವ ಜೂನಿಯರ್ ಚಾಂಪಿಯನ್‌ಶಿಪ್‌ನ ಎರಡನೇ ದಿನ ಭಾರತದ ಶಟ್ಲರ್‌ಗಳು ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಆರಂಭಿಕ ಪಂದ್ಯದಲ್ಲಿ ಸಮರವೀರ್ ಮತ್ತು ರಾಧಿಕಾ ಶರ್ಮಾ ಜೋಡಿ 21-14, 21-17 ಅಂಕಗಳಿಂದ ಜೋಕಿಮ್ ಮೆಂಡೋಂಕಾ ಮತ್ತು ಮರಿಯಾ ಕ್ಲಾರಾ ಲೋಪೆಸ್ ಲಿಮಾ ವಿರುದ್ಧ ಜಯಗಳಿಸಿತು.

ಬಾಲಕರ ಸಿಂಗಲ್ಸ್ ಪಂದ್ಯದಲ್ಲಿ ಲೋಕೇಶ್ ರೆಡ್ಡಿ ಕಲಗೊಟ್ಲ ಅವರು ರೆನಾನ್ ಮೆಲೊದಲ್ಲಿ ಪ್ರಬಲ ಪೈಪೋಟಿಯನ್ನು ಎದುರಿಸಿದರು, ಅವರು ಮೊದಲ ಗೇಮ್ ಅನ್ನು 17-21 ರಲ್ಲಿ ಕಳೆದುಕೊಂಡರು ಆದರೆ ಎರಡನೇ ಗೇಮ್‌ನಲ್ಲಿ ಚೇತರಿಸಿಕೊಳ್ಳುವ ಮೂಲಕ ಹೋರಾಟ ನಡೆಸಿದರು. ಲೋಕೇಶ್ ಎರಡು ಮತ್ತು ಮೂರನೇ ಸೆಟ್​ನಲ್ಲಿ ಮೇಲುಗೈ ಪಡೆಯುವಲ್ಲಿ ಯಶಸ್ವಿಯಾದರು. ಎರಡನೇ ಗೇಮ್ ಅನ್ನು 24-22 ರಿಂದ ಗೆದ್ದು ಪಂದ್ಯವನ್ನು ಮುಕ್ತಾಯಗೊಳಿಸಿದರು. ಬಾಲಕಿಯರ ಸಿಂಗಲ್ಸ್ ವಿಭಾಗದಲ್ಲಿ ದೇವಿಕಾ ಸಿಹಾಗ್ 21-9, 21-6 ರಿಂದ ಮರಿಯಾ ಎಡ್ವರ್ಡಾ ಒಲಿವೇರಾ ಅವರನ್ನು ಕೇವಲ 18 ನಿಮಿಷಗಳಲ್ಲಿ ಸೋಲಿಸಿ ಗೆಲುವಿನ ನಗೆ ಬೀರಿದರು. ಬಾಲಕರ ಡಬಲ್ಸ್‌ನಲ್ಲಿ ದಿವ್ಯಮ್ ಅರೋರಾ ಮತ್ತು ಮಯಾಂಕ್ ರಾಣಾ ಜೋಡಿ 21-19, 21-10 ಅಂಕಗಳಿಂದ ಜೋಕಿಮ್ ಮತ್ತು ಜೋವೊ ಮೆಂಡೋನ್ಕಾ ತವೇರಾ ವಿರುದ್ಧ ಜಯಗಳಿಸಿತು. ಬಾಲಕಿಯರ ಡಬಲ್ಸ್ ಜೋಡಿ ವೆನ್ನಾಲ ಕಲಗೊಟ್ಲ ಮತ್ತು ಶ್ರೀಯಾನ್ಶಿ ವಲಿಶೆಟ್ಟಿ ತಮ್ಮ ಸಮನ್ವಯತೆಯನ್ನು ಪ್ರದರ್ಶಿಸುವ ಮೂಲಕ ಮರಿಯಾ ಕ್ಲಾರಾ ಮತ್ತು ಮರಿಯಾ ಎಡ್ವರ್ಡಾ ಒಲಿವೇರಾ ವಿರುದ್ಧ 21-13, 21-11 ರಿಂದ ಗೆಲುವು ಸಾಧಿಸಿದರು.

ಡಿ ಗುಂಪಿನಲ್ಲಿರುವ ಎರಡನೇ ಸ್ಥಾನದಲ್ಲಿರುವ ಭಾರತ ಮುಂದೆ ಜರ್ಮನಿಯನ್ನು ಎದುರಿಸಲಿದೆ. ಈ ಪಂದ್ಯದ ಫಲಿತಾಂಶವು ಗುಂಪಿನಲ್ಲಿ ಯಾರು ಅಗ್ರಸ್ಥಾನದಲ್ಲಿದೆ ಎಂಬುದನ್ನು ನಿರ್ಧರಿಸುತ್ತದೆ. ಅಗ್ರಸ್ಥಾನ ಪಡೆಯುವ ತಂಡವು ಸೆಪ್ಟೆಂಬರ್ 28 ರಂದು ಕ್ವಾರ್ಟರ್ ಫೈನಲ್‌ನಲ್ಲಿ ಸಿ ಗುಂಪಿನ ವಿಜೇತರನ್ನು ಎದುರಿಸಲಿದೆ.

ನಿನ್ನೆ ಬಿಡಬ್ಲ್ಯುಎಫ್ ವಿಶ್ವ ಜೂನಿಯರ್ ಚಾಂಪಿಯನ್‌ಶಿಪ್‌ನಲ್ಲಿ ಭಾರತೀಯ ಶಟ್ಲರ್‌ಗಳು ಕುಕ್ ಐಲ್ಯಾಂಡ್ಸ್ ವಿರುದ್ಧ 5-0 ಅಂತರದಿಂದ ಗೆಲುವು ಸಾಧಿಸಿದ್ದಾರೆ.

ಇದನ್ನೂ ಓದಿ:ಬಿಡಬ್ಲ್ಯುಎಫ್ ವಿಶ್ವ ಜೂನಿಯರ್ ಚಾಂಪಿಯನ್‌ಶಿಪ್​ನಲ್ಲಿ ಭಾರತಕ್ಕೆ ಗೆಲುವಿನ ಆರಂಭ..

ABOUT THE AUTHOR

...view details