ನವದೆಹಲಿ: ಭಾರತ ತಂಡ ತವರಿನ ನೆಲದಲ್ಲಿ ನಡೆದ ಏಷ್ಯನ್ ಕುಸ್ತಿ ಚಾಂಪಿಯನ್ಶಿಪ್ನಲ್ಲಿ ಭರ್ಜರಿ ಪ್ರದರ್ಶನ ನೀಡಿ ಪದಕ ಪಟ್ಟಿಯಲ್ಲಿ 3ನೇ ಸ್ಥಾನದೊಂದಿಗೆ ಮುಗಿಸಿದೆ.
2019ರಲ್ಲಿ ಚೀನಾದಲ್ಲಿ ನಡೆದಿದ್ದ ಚಾಂಪಿಯನ್ಶಿಪ್ನಲ್ಲಿ ಭಾರತ ಕೇವಲ ಒಂದು ಚಿನ್ನ, 6 ಬೆಳ್ಳಿ , 9 ಕಂಚಿನೊಂದಿಗೆ 8ನೇ ಸ್ಥಾನ ಪಡೆದಿತ್ತು.
ಈ ಬಾರಿ ಭಾರತದ ಕ್ರೀಡಾಪುಟಗಳು ಅದ್ಭುತ ಪ್ರದರ್ಶನ ತೋರಿ 5 ಚಿನ್ನ 6 ಬೆಳ್ಳಿ ಹಾಗೂ 9 ಕಂಚಿನ ಪದಕಗಳೊಂದಿಗೆ ದೇಶವನ್ನು 3ನೇ ಸ್ಥಾನಕ್ಕೇರಿಸಿದ್ದಾರೆ. ಭಾರತದ ಪರ ರವಿ ಕುಮಾರ್, ಸುನಿಲ್ ಕುಮಾರ್ ಹಾಗೂ ಮಹಿಳೆಯರ ವಿಭಾಗದಲ್ಲಿ ದಿವ್ಯಾ ಕರಣ್, ಪಿಂಕಿ ಹಾಗೂ ಸರಿತಾ ಮೋರೆ ಚಿನ್ನದ ಪದಕ ಪಡೆದಿದ್ದರು. ಅನುಭವಿ ಕುಸ್ತಿಪಟು ಭಜರಂಗ್ ಪೂನಿಯಾ ಬೆಳ್ಳಿ ಪದಕ ಪಡೆದು ನಿರಾಶೆ ಮೂಡಿಸಿದ್ದರು.
ಇನ್ನು ಕಳೆದ ವರ್ಷ 11 ಚಿನ್ನದ ಪದಕದೊಂದಿಗೆ 17 ಪದಕ ಪಡೆದು ಮೊದಲ ಸ್ಥಾನ ಪಡೆದಿದ್ದ ಇರಾನ್ ಈ ಬಾರಿ 2ನೇ ಸ್ಥಾನಕ್ಕೆ ಕುಸಿದಿದೆ. ಈ ಬಾರಿ 7 ಚಿನ್ನದ ಸಹಿತ 17 ಪದಕ ಪಡೆದಿದೆ.
8 ಚಿನ್ನ 4 ಬೆಳ್ಳಿ ಹಾಗೂ 4 ಕಂಚು ಸಹಿತ 16 ಪದಕ ಪಡೆದ ಜಪಾನ್ ಅಗ್ರಸ್ಥಾನಿಯಾಗಿ ಟೂರ್ನಿಯನ್ನು ಮುಗಿಸಿದೆ.