ಕೀಲ್ಸ್ (ಪೋಲೆಂಡ್) :2019ರ ಏಷ್ಯನ್ ಯೂತ್ ಚಾಂಪಿಯನ್ ವಿಂಕಾ ಮತ್ತು ಆಲ್ಫಿಯಾ ಪಠಾಣ್ ಸೇರಿ ಭಾರತದ ನಾಲ್ವರು ಮಹಿಳಾ ಬಾಕ್ಸರ್ಗಳು ಪೋಲೆಂಡ್ನ ಕೀಲ್ಸ್ನಲ್ಲಿ ನಡೆಯುತ್ತಿರುವ ವಿಶ್ವ ಯೂತ್ ಚಾಂಪಿಯನ್ಶಿಪ್ನಲ್ಲಿ ಸೆಮಿಫೈನಲ್ ತಲುಪಿದ್ದು, ಪದಕ ಖಚಿತಪಡಿಸಿದ್ದಾರೆ.
6ನೇ ದಿನವಾದ ಇಂದು ವಿಂಕಾ, ಆಲ್ಫಿಯಾ ಜೊತೆಗೆ ಗೀತಿಕಾ ಹಾಗೂ ಪೂನಮ್ ಕೂಡ ಸೆಮಿಫೈನಲ್ ಪ್ರವೇಶಿಸಿ ಕನಿಷ್ಟ ಕಂಚು ಪದಕವನ್ನು ಖಚಿತಪಡಿಸಿಕೊಂಡಿದ್ದಾರೆ. ಎಲ್ಲಾ ನಾಲ್ಕು ಬಾಕ್ಸರ್ಗಳು ತಮ್ಮ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ತೋರಿದರು.
ಪಾಣಿಪತ್ ಬಾಕ್ಸರ್ ವಿಂಕಾ 60 ಕೆಜಿ ವಿಭಾಗದಲ್ಲಿ ಕೊಲಂಬಿಯಾದ ಕ್ಯಾಮಿಲೊ ಕ್ಯಾಮೆಲಾ ಇರುದ್ಧ 5-0ಯಿಂದ ಗೆದ್ದರೆ, 81+ಕೆಜಿ ವಿಭಾಗದಲ್ಲಿ 2019ರ ಏಷ್ಯನ್ ಜೂನಿಯರ್ ಚಾಂಪಿಯನ್ ನಾಗ್ಪುರದ ಅಲ್ಫಿಯಾ ಕೂಡ 5-0 ಅಂತರದಲ್ಲೇ ಹಂಗೇರಿಯಾದ ರೆಕಾ ಹೊಫ್ಮನ್ ವಿರುದ್ಧ ಜಯ ಸಾಧಿಸಿದರು.