ಅಂಟಾರ್ಟಿಕಾ: ಮೈನಸ್ 15 ಡಿಗ್ರಿ ತಾಪಮಾನ ಹೊಂದಿರುವ ಅಂಟಾರ್ಟಿಕಾದಲ್ಲಿ ಐಸ್ ಮ್ಯಾರಥಾನ್ ರೇಸ್ ಆಯೋಜಿಸಲಾಗಿತ್ತು. ಇದರಲ್ಲಿ ಮ್ಯಾರಾಥಾನ್ನಲ್ಲಿ ಲಾಟ್ವಿಯಾದ ಇವಿಜಾ ರೈನ್ ಮಹಿಳೆಯರ ವಿಭಾಗದಲ್ಲಿ ವಿಶ್ವ ದಾಖಲೆ ಬರೆದಿದ್ದಾರೆ.
ಸೌತ್ ಪೋಲ್ನಿಂದ ಕೆಲವು ನೂರು ಮೈಲುಗಳಷ್ಟು ದೂರದಲ್ಲಿರುವ ಯುನಿಯನ್ ಗ್ಲಾಸಿಯರ್ನಲ್ಲಿ ಡಿಸೆಂಬರ್ 17ರಂದು ನಡೆದಿದ್ದ ಅಂಟಾರ್ಕ್ಟಿಕ್ ಐಸ್ ಮ್ಯಾರಥಾನ್‌ನಲ್ಲಿ 18 ದೇಶಗಳ 62 ಜನರು ಭಾಗವಹಿಸಿದ್ದರು. 30 ವರ್ಷದ ಇವಿಜಾ 4 ಗಂಟೆ 6 ನಿಮಿಷ 11 ಸೆಕೆಂಡ್ಗಳಲ್ಲಿ ಗುರಿ ತಲುಪುವ ಮೂಲಕ ವಿಶ್ವದಾಖಲೆ ಬರೆದರು. ಈ ಹಿಂದೆ, ಗ್ರೇಟ್ ಬ್ರಿಟನ್ನ ಫಿಯೋನ ಓಕ್ಸ್ 2013ರಲ್ಲಿ 4 ಗಂಟೆ 20 ನಿಮಿಷ 2 ಸೆಕೆಂಡ್ಗಳಲ್ಲಿ ಮ್ಯಾರಾಥಾನ್ ಪೂರೈಸಿ ದಾಖಲೆ ಬರೆದಿದ್ದರು.