ದುಬೈ : ಪಾಕಿಸ್ತಾನದ ವಿಕೆಟ್ ಕೀಪರ್-ಬ್ಯಾಟರ್ ಮೊಹಮ್ಮದ್ ರಿಜ್ವಾನ್ ಅವರು 2021ರ ICC ಪುರುಷರ T20 ವರ್ಷದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಮೊಹಮ್ಮದ್ ರಿಜ್ವಾನ್ 2021ರಲ್ಲಿ ಅದ್ಭುತ ಫಾರ್ಮ್ನಲ್ಲಿದ್ದರು.
29 ಪಂದ್ಯಗಳಲ್ಲಿ ವಿಶ್ವದಾಖಲೆಯ 1326 ರನ್ಗಳಿಸಿದ್ದಾರೆ. ಅವರು ಟಿ20 ಕ್ರಿಕೆಟ್ ಇತಿಹಾಸದಲ್ಲೇ ಕ್ಯಾಲೆಂಡರ್ ವರ್ಷದಲ್ಲಿ 1000 ರನ್ಗಳಿಸಿದ ಮೊದಲ ಬ್ಯಾಟರ್ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.
ಅವರು 73.66ರ ಸರಾಸರಿ ಮತ್ತು 134.9ರ ಸ್ಟ್ರೈಕ್ರೇಟ್ನಲ್ಲಿ ರನ್ಗಳಿಸುವುದರ ಜತೆಗೆ, ವಿಕೆಟ್ ಕೀಪಿಂಗ್ನಲ್ಲೂ 24 ಬಲಿ ಪಡೆದು ಮಿಂಚಿದ್ದಾರೆ. ಜೊತೆಗೆ ಪಾಕಿಸ್ತಾನ ತಂಡ ಟಿ20 ವಿಶ್ವಕಪ್ನಲ್ಲಿ ಸೆಮಿಫೈನಲ್ ಪ್ರವೇಶಿಸುವಲ್ಲಿ ಅವರ ಪಾತ್ರ ಪ್ರಮುಖವಾಗಿತ್ತು.
ಅವರು ವರ್ಷದ ಆರಂಭದಲ್ಲಿ ಲಾಹೋರ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ತಮ್ಮ ವೃತ್ತಿಜೀವನದ ಮೊದಲ T-20 ಶತಕವನ್ನು ಗಳಿಸಿದರು. ನಂತರ ಕರಾಚಿಯಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 87 ರನ್‌ಗಳ ಅದ್ಭುತ ಆಟದೊಂದಿಗೆ ತಂಡದಲ್ಲಿ ಖಾಯಂ ಸದಸ್ಯನಾದರು.
ICC ಪುರುಷರ ಅಸೋಸಿಯೇಟ್ ಆಟಗಾರ 2021: ಜೀಶಾನ್ ಮಕ್ಸೂದ್
ಓಮನ್ ತಂಡದ ನಾಯಕ ಜೀಶಾನ್ ಮಕ್ಸೂದ್ ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದು, 2021ರ ICC ಪುರುಷರ ಅಸೋಸಿಯೇಟ್ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಮಾಡುವ ಇವರು ತಂಡಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ.
ಮಕ್ಸೂದ್ USA ಮತ್ತು ನಮೀಬಿಯಾ ತಂಡಗಳ ವಿರುದ್ಧ ಮಿಂಚಿನ ಅರ್ಧಶತಕಗಳನ್ನು ಗಳಿಸಿ ತಂಡಕ್ಕೆ ಜಯ ತಂದು ಕೊಟ್ಟಿದ್ದರು. ಇದಲ್ಲದೇ ಬೌಲಿಂಗ್ನಲ್ಲೂ ಕೂಡ ಮಿಂಚಿದ ಇವರು ತಂಡಕ್ಕೆ ಜಯ ತಂದು ಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಐಸಿಸಿ ಟಿ-20 ವರ್ಷದ ಮಹಿಳಾ ಆಟಗಾರ್ತಿ ಟಮ್ಮಿ ಬ್ಯೂಮಾಂಟ್
ಇಂಗ್ಲೆಂಡ್ ತಂಡದ ಸ್ಟಾರ್ ಆಟಗಾರ್ತಿ ಟಮ್ಮಿ ಬ್ಯೂಮಾಂಟ್ 2021 ಐಸಿಸಿ ಟಿ-20 ವರ್ಷದ ಮಹಿಳಾ ಆಟಗಾರ್ತಿ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಇವರು ನ್ಯೂಜಿಲ್ಯಾಂಡ್ ವಿರುದ್ಧ ನಡೆದ ಮೂರು ಪಂದ್ಯಗಳ ಟಿ-20 ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ತಂಡ ಸರಣಿ ಜಯಗಳಿಸಲು ಪ್ರಮುಖ ಪಾತ್ರ ವಹಿಸಿದ್ದರು.
ಮೂರು ಪಂದ್ಯಗಳ ಈ ಸರಣಿಯಲ್ಲಿ ಟಮ್ಮಿ ಬ್ಯೂಮಾಂಟ್ 102 ರನ್ಗಳಿಸುವ ಮೂಲಕ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು. ಈ ಸರಣಿಯ ಎರಡನೇ ಪಂದ್ಯದಲ್ಲಿ 53 ಬಾಲ್ಗಳಲ್ಲಿ 63 ರನ್ಗಳಿಸುವ ಮೂಲಕ ತಂಡಕ್ಕೆ ಸುಲಭ ಜಯ ತಂದುಕೊಡುವ ಮೂಲಕ, ತಂಡ ಸರಣಿ ಗೆಲ್ಲಲು ಕಾರಣರಾಗಿದ್ದರು.
ಐಸಿಸಿ ಟಿ-20 ವರ್ಷದ ಉದಯೋನ್ಮಖ ಆಟಗಾರ ಪ್ರಶಸ್ತಿ ಪಡೆದ ಮಲನ್
ಸೌತ್ ಆಫ್ರಿಕ ತಂಡದ ಯುವ ಆಟಗಾರ ಬ್ಯಾಟರ್ ಜನೆಮನ್ ಮಲನ್ 2021 ಐಸಿಸಿ ಟಿ-20 ವರ್ಷದ ಉದಯೋನ್ಮಖ ಆಟಗಾರ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇವರು ಆಫ್ರಿಕಾ ಪರ ಹೆಚ್ಚು ಟಿ-20 ಪಂದ್ಯಗಳನ್ನಾಡುತ್ತಿದ್ದು, ಆಡಿದ ಎಲ್ಲಾ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ.
ಜಾಹಿರಾತು : ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ