ಹೈದರಾಬಾದ್: ಭಾರತೀಯ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ತಾವು 90 ಮೀ. ದೂರ ಜಾವೆಲಿನ್ ಎಸೆಯುವ ಗುರಿ ಹೊಂದಿದ್ದೇನೆ ಎಂದು ತಿಳಿಸಿದ್ದಾರೆ.
ನೇತಾಜಿ ಸುಭಾಸ್ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಸ್ಪೋರ್ಟ್ಸ್‌ನಲ್ಲಿ ನಡೆದ ಭಾರತೀಯ ಗ್ರ್ಯಾಂಡ್ ಪ್ರಿಕ್ಸ್ III ಕ್ರೀಡಾಕೂಟದಲ್ಲಿ ನೀರಜ್ ಚೋಪ್ರಾ 90 ಮೀ ಜಾವಲಿನ್ ಎಸೆಯುವ ಮೂಲಕ ಹೊಸ ದಾಖಲೆ ಬರೆಯು ಇಂಗಿತ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಆಗಸ್ಟ್ 27, 2018 ರಂದು ಜಕಾರ್ತದಲ್ಲಿ ನಡೆದ ಏಷ್ಯನ್ ಕ್ರೀಡಾಕೂಟದಲ್ಲಿ ನೀರಜ್ ಚೋಪ್ರಾ 88.08 ಮೀಟರ್ ಜಾವೆಲಿನ್ ಎಸೆದು ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದರು.
ವರ್ಚುಯಲ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು "ನಾನು 90 ಮೀ. ಗಿಂತ ಹೆಚ್ಚು ದೂರ ಎಸೆಯುವ ಗುರಿ ಹೊಂದಿದ್ದೇನೆ" ಎಂದು ನೀರಜ್ ಹೇಳಿದ್ದಾರೆ.
ಓದಿ : IND vs ENG, 4th Test: ಚೊಚ್ಚಲ ಶತಕ, ಅರ್ಧ ಶತಕ ಮಿಸ್ ಮಾಡಿಕೊಂಡ ವಾಷಿಂಗ್ಟನ್, ಅಕ್ಷರ್ ಪಟೇಲ್
ನೀರಜ್ ಅವರು ರಾಷ್ಟ್ರೀಯ ದಾಖಲೆಯನ್ನು ಮುರಿಯುವ ಬಗ್ಗೆ ಸಂತೋಷ ವ್ಯಕ್ತಪಡಿಸಿದರು. ರಾಷ್ಟ್ರೀಯ ದಾಖಲೆ ಮುರಿಯುವುದು ಖುಷಿಯ ವಿಚಾರ ಎಂದರು. ಗಾಯದ ಸಮಸ್ಯೆ ಹಾಗೂ ಲಾಕ್ಡೌನ್ನಿಂದಾಗಿ, ನೀರಜ್ ಹೆಚ್ಚು ಸಮಯ ಕ್ರೀಡಾಕೂಟಗಳಲ್ಲಿ ಸ್ಪರ್ಧಿಸಿರಲಿಲ್ಲ. ಈಗ ಮತ್ತೆ ಕ್ರೀಡಾಕೂಟಕ್ಕೆ ಮರಳಿದ್ದು ಖುಷಿ ನೀಡಿದೆ ಎಂದಿದ್ದಾರೆ.