ನವದೆಹಲಿ:ನಾನು ಅಥ್ಲೆಟಿಕ್ಸ್ನಲ್ಲೇ ಉಸಿರಾಡುತ್ತಿದ್ದೇನೆ ಮತ್ತು ಬದುಕುತ್ತಿದ್ದೇನೆ. ಒಲಿಂಪಿಕ್ಸ್ನಲ್ಲಿ ದೇಶಕ್ಕೆ ಸಾಕಷ್ಟು ಪದಕ ವಿಜೇತರನ್ನು ಬೆಳೆಸುವುದೇ ನನ್ನ ಗುರಿ ಎಂದು ವಿಶ್ವ ಅಥ್ಲೆಟಿಕ್ಸ್ನಿಂದ 'ವರ್ಷದ ಮಹಿಳೆ' ಪ್ರಶಸ್ತಿ ಪಡೆದ ಭಾರತದ ಲೆಜೆಂಡರಿ ಲಾಂಗ್ ಜಂಪರ್ ಅಂಜು ಬಾಬಿ ಜಾರ್ಜ್ ಗುರುವಾರ ಹೇಳಿದ್ದಾರೆ.
2003ರ ಆವೃತ್ತಿಯಲ್ಲಿ ಲಾಂಗ್ಜಂಪ್ನಲ್ಲಿ ಕಂಚಿನ ಪದಕ ಗೆಲ್ಲುವ ಮೂಲ ವಿಶ್ವ ಚಾಂಪಿಯನ್ಶಿಪ್ನಲ್ಲಿ ಭಾರತಕ್ಕೆ ಪದಕ ತಂದುಕೊಟ್ಟಿರುವ ಏಕೈಕ ಅಥ್ಲೀಟ್ ಎಂಬ ಗೌರವಕ್ಕೆ 44 ವರ್ಷದ ಅಂಜು ಪಾತ್ರರಾಗಿದ್ದಾರೆ. ಬುಧವಾರ ನಡೆದ ವಿಶ್ವ ಅಥ್ಲೆಟಿಕ್ಸ್ ಮಂಡಳಿಯ ವಾರ್ಷಿಕೋತ್ಸವದಲ್ಲಿ ಅಥ್ಲೆಟಿಕ್ಸ್ಗೆ ತಮ್ಮ ಜೀವನ ಅರ್ಪಿಸಿರುವುದಕ್ಕೆ ಪ್ರತಿಷ್ಠಿತ ಪ್ರಶಸ್ತಿ ಪಡೆದುಕೊಂಡರು. ಈ ಪ್ರಶಸ್ತಿ ಪಡೆದ ಮೊದಲ ಭಾರತೀಯ ಮತ್ತು ವಿಶ್ವದ 2ನೇ ಮಹಿಳಾ ಅಥ್ಲೀಟ್ ಎನಿಸಿಕೊಂಡರು.
ಅಥ್ಲೆಟಿಕ್ಸ್ ನನ್ನ ಉತ್ಸಾಹ. ನಾನು ಅದರಲ್ಲಿ ಜೀವಿಸಿದ್ದೇನೆ ಮತ್ತು ಉಸಿರಾಡುತ್ತಿದ್ದೇನೆ. ಅಥ್ಲೆಟಿಕ್ಸ್ಈ ಪ್ರಶಸ್ತಿ ಸೇರಿದಂತೆ ನನಗೆ ಸಾಕಷ್ಟು ಹೆಸರನ್ನು ಮತ್ತು ಜನಪ್ರಿಯತೆ ತಂದುಕೊಟ್ಟಿದೆ. ಇದೀಗ ನನ್ನ ಸಮಯವಾಗಿದ್ದು, ನನ್ನ ದೇಶಕ್ಕೆ ಮತ್ತು ಕ್ರೀಡೆಗೆ ಕೊಡುಗೆ ನೀಡಬೇಕಿದೆ" ಎಂದು ಪಿಟಿಐಗೆ ತಿಳಿಸಿದ್ದಾರೆ.
ನಾನು ವಿಶ್ವಚಾಂಪಿಯನ್ಶಿಪ್ನಲ್ಲಿ ಪದಕ ಗೆದ್ದಿದ್ದೇನೆ. ಆದರೆ, ಒಲಿಂಪಿಕ್ಸ್ನಲ್ಲಿ ಸಾಧ್ಯವಾಗಲಿಲ್ಲ. ಆದರೆ, ನೀರಜ್ ಚೋಪ್ರಾ ಟೋಕಿಯೋದಲ್ಲಿ ಚಿನ್ನ ಗೆಲ್ಲುವ ಮೂಲಕ ಭಾರತೀಯರು ಒಲಿಂಪಿಕ್ಸ್ನಲ್ಲಿ ಪದಕ ಗೆಲ್ಲಬಲ್ಲರು ಎಂದು ತೋರಿಸಿಕೊಟ್ಟಿದ್ದಾರೆ. ದೇಶಕ್ಕಾಗಿ ಒಳ್ಳೆಯ ಪ್ರತಿಭೆಗಳನ್ನು ಬೆಳಸುವುದು ಮತ್ತು ಒಲಿಂಪಿಕ್ಸ್ನಲ್ಲಿ ಪದಕ ಗೆಲ್ಲುವಂತೆ ಮಾಡುವುದು ನನ್ನ ಮುಂದಿರುವ ಗುರಿಯಾಗಿದೆ ಎಂದು ಅವರು ಹೇಳಿದ್ದಾರೆ.