ಲಾಸ್ ಏಂಜಲೀಸ್: ರೋಲ್ಓವರ್ ವಾಹನ ಅಪಘಾತದಲ್ಲಿ ಗಾಯಗೊಂಡಿದ್ದ ಗಾಲ್ಫ್ ತಾರೆ ಟೈಗರ್ ವುಡ್ಸ್ ಶಸ್ತ್ರಚಿಕಿತ್ಸೆಗೆ ಒಳಗಾದ ನಂತರ ಆಸ್ಪತ್ರೆಯಿಂದ ಮನೆಗೆ ಮರಳಿದ್ದಾರೆ.
ರೋಲಿಂಗ್ ಹಿಲ್ಸ್ ಎಸ್ಟೇಟ್ ಮತ್ತು ರಾಂಚೊ ಪಾಲೋಸ್ ವರ್ಡೆಸ್‌ನ ಗಡಿಯಲ್ಲಿರುವ ಲಾಸ್ ಏಂಜಲೀಸ್‌ನ ದಕ್ಷಿಣಕ್ಕೆ ಸುಮಾರು 20 ಮೈಲಿ ದೂರದಲ್ಲಿ ಫೆಬ್ರವರಿ 23, 2021 ಮಂಗಳವಾರ ಬೆಳಗ್ಗೆ 7: 15ಕ್ಕೆ ಅಪಘಾತ ಸಂಭವಿಸಿತ್ತು.
"ನಾನು ಮನೆಗೆ ಮರಳಿದ್ದೇನೆ ಮತ್ತು ಚೇತರಿಸಿಕೊಳ್ಳುತ್ತಿದ್ದೇನೆ ಎಂದು ಹೇಳಲು ಸಂತೋಷವಾಗಿದೆ. ಕಳೆದ ಕೆಲವು ವಾರಗಳಿಂದ ನನಗೆ ದೊರೆತ ಬೆಂಬಲ ಮತ್ತು ಪ್ರೋತ್ಸಾಹಕ್ಕೆ ನಾನು ತುಂಬಾ ಕೃತಜ್ಞನಾಗಿದ್ದೇನೆ." ಎಂದು ಟೈಗರ್ ವುಡ್ಸ್ ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಓದಿ : ಮೊಟೆರಾ ಪಿಚ್ನಲ್ಲಿ ಈ ರೀತಿಯ ಫಲಿತಾಂಶ ಬಂದಿದ್ದು ಅಚ್ಚರಿಯೇ ಸರಿ : ಇಯಾನ್ ಮಾರ್ಗನ್
15 ಬಾರಿ ಪ್ರಮುಖ ಗಾಲ್ಫ್ ಚಾಂಪಿಯನ್ಶಿಪ್ ಗೆದ್ದಿರುವ ವುಡ್ಸ್ ಕೊನೆಯ ಬಾರಿಗೆ ಕಳೆದ ವರ್ಷದ ಡಿಸೆಂಬರ್ 20 ರಂದು ಪಿಎನ್‌ಸಿ ಚಾಂಪಿಯನ್‌ಶಿಪ್‌ನಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದರು.