ಕರ್ನಾಟಕ

karnataka

ETV Bharat / sports

ಗಿನ್ನೆಸ್​​​​​ ದಾಖಲೆ ಬ್ರೇಕ್​​​​ ಮಾಡಿದ ಹೈದರಾಬಾದ್​​ನ ಟೇಕ್ವಾಂಡೋ ಆಟಗಾರ ಸಾಯಿ ದೀಪಕ್​​! - ಬಿ ಸಾಯಿ ದೀಪಕ್ ಗಿನ್ನೆಸ್​ ದಾಖಲೆ

ದೀಪಕ್​ 60 ಸೆಕೆಂಡ್​ಗಳಲ್ಲಿ 59 ಸೈಡ್​ ಲಾಂಜ್​​ ಮಾಡುವ ಮೂಲಕ ತಮ್ಮ 4ನೇ ಗಿನ್ನೆಸ್​ ವಿಶ್ವದಾಖಲೆಗೆ ಪಾತ್ರರಾಗಿದ್ದಾರೆ. ಈ ವಿಭಾಗದ ಗಿನ್ನೆಸ್​ ರೆಕಾರ್ಡ್​ ಪಾಕಿಸ್ತಾನದ ಇರ್ಫಾನ್​ ಮೆಹ್ಸೂದ್​ ಅವರ ಹೆಸರಿನಲ್ಲಿತ್ತು. ತಮ್ಮ ಈ ಸಾಧನೆಯನ್ನು ಮಹಿಳೆಯರ ಭದ್ರತೆ ಹಾಗೂ ದೇಶಕ್ಕೋಸ್ಕರ ಪ್ರಾಣ ತ್ಯಾಗ ಮಾಡಿದ ಯೋಧರಿಗೆ ಅರ್ಪಿಸಿದ್ದಾರೆ.

Guinness World Records
Guinness World Records

By

Published : Jan 2, 2020, 5:05 PM IST

ಹೈದರಾಬಾದ್​:ಹೈದರಾಬಾದ್​ನ ಬಿ.ಸಾಯಿ ದೀಪಕ್​ ಎಂಬ ಯುವಕ ಒಂದು ನಿಮಿಷದಲ್ಲಿ 59 ಸೈಡ್​ ಲಾಂಜ್​​ ಮಾಡುವ ಮೂಲಕ ಗಿನ್ನೆಸ್​ ವಿಶ್ವದಾಖಲೆಗೆ ಸೇರಿದ್ದಾರೆ.

ದೀಪಕ್​ 60 ಸೆಕೆಂಡ್​ಗಳಲ್ಲಿ 59 ಸೈಡ್​ ಲಾಂಜ್​​ ಮಾಡುವ ಮೂಲಕ ತಮ್ಮ 4ನೇ ಗಿನ್ನೆಸ್​ ವಿಶ್ವದಾಖಲೆಗೆ ಪಾತ್ರರಾಗಿದ್ದಾರೆ. ಈ ವಿಭಾಗದ ಗಿನ್ನೆಸ್​ ರೆಕಾರ್ಡ್​ ಪಾಕಿಸ್ತಾನದ ಇರ್ಫಾನ್​ ಮೆಹ್ಸೂದ್​ ಅವರ ಹೆಸರಿನಲ್ಲಿತ್ತು. ತಮ್ಮ ಈ ಸಾಧನೆಯನ್ನು ಮಹಿಳೆಯರ ಭದ್ರತೆ ಹಾಗೂ ದೇಶಕ್ಕೋಸ್ಕರ ಪ್ರಾಣ ತ್ಯಾಗ ಮಾಡಿದ ಯೋಧರಿಗೆ ಅರ್ಪಿಸಿದ್ದಾರೆ.

"ಪಾಕಿಸ್ತಾನದ ಇರ್ಫಾನ್​​ ಒಂದು ನಿಮಿಷದಲ್ಲಿ 54 ಸೈಡ್ ಲಾಂಜ್​ ಮಾಡಿ ದಾಖಲೆ ಬರೆದಿದ್ದರು. ನಾನು 59 ಸೈಡ್​ ಲಾಂಜ್​ ಮಾಡುವ ಮೂಲಕ ನಾಲ್ಕನೇ ಬಾರಿ ಗಿನ್ನೆಸ್​ ದಾಖಲೆಗೆ ಸೇರ್ಪಡೆಗೊಂಡಿದ್ದೇನೆ. ಈ ಗಿನ್ನೆಸ್​ ದಾಖಲೆಯನ್ನು ದೇಶವನ್ನು ಸುಸ್ಥಿತಿಯಲ್ಲಿಡಲು ತಮ್ಮ ಪ್ರಾಣವನ್ನು ತ್ಯಾಗ ಮಾಡಿರುವ ಯೋಧರಿಗೆ ಅರ್ಪಿಸುತ್ತಿದ್ದೇನೆ" ಎಂದು ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ದೀಪಕ್​ ತಿಳಿಸಿದ್ದಾರೆ.

ಸೈಡ್​ ಲಾಂಜ್​ ದಾಖಲೆಯಲ್ಲದೆ​ ದೀಪಕ್​ ಟೇಕ್ವಾಂಡೋದಲ್ಲೇ ಇನ್ನು ಮೂರು ಗಿನ್ನೆಸ್​ ದಾಖಲೆಗಳಿಗೆ ಪಾತ್ರರಾಗಿದ್ದಾರೆ. ಒಂದು ನಿಮಿಷದಲ್ಲಿ ಅತಿ ಹೆಚ್ಚು ಎಲ್ಬೋ ಸ್ಟ್ರೈಕ್ಸ್​, ಮೂರು ನಿಮಿಷದಲ್ಲಿ ಅತಿ ಹೆಚ್ಚು ನೀ ಸ್ಟ್ರೈಕ್ಸ್, 5 ಕೆಜಿ ಭಾರವನ್ನು ಯಾಂಕಲ್​ ವೈಟ್ಸ್​ ಧರಿಸಿ ಒಂದೇ ಕಾಲಿನಲ್ಲಿ ಅತಿ ಹೆಚ್ಚು ನೀ ಸ್ಟ್ರೈಕ್ಸ್​ ಮಾಡಿ ಗಿನ್ನೆಸ್​ ದಾಖಲೆ ಬರೆದಿದ್ದರು.

29 ಗಿನ್ನೆಸ್​ ದಾಖಲೆ ಹೊಂದಿರುವ ದೀಪಕ್​ ಕೋಚ್​​ ಜೀವನ್​ ರೆಡ್ಡಿ ಮಾತನಾಡಿ, 2024ರ ವೇಳೆಗೆ ದೀಪಕ್​ನನ್ನು ಒಲಿಂಪಿಕ್ಸ್​ಗೆ ಸ್ಪರ್ಧಿಸಲು ಕಳಿಸುವ ಗುರಿ ಹೊಂದಿದ್ದೇನೆ. ಇದಕ್ಕು ಮುನ್ನ ಮತ್ತಷ್ಟು ಗಿನ್ನೆಸ್​ ದಾಖಲೆ ಸೃಷ್ಠಿಸಲು ಆತನಿಗೆ ತರಬೇತಿ ನೀಡುತ್ತಿದ್ದೇನೆ. ಈ ವರ್ಷ 10 ಗಿನ್ನೆಸ್​ ರೆಕಾರ್ಡ್​ಗಳನ್ನು ಬ್ರೇಕ್​ ಮಾಡುವ ಯೋಜನೆಯಲ್ಲಿದ್ದೇವೆ ಎಂದು ತಿಳಿಸಿದ್ದಾರೆ.

ABOUT THE AUTHOR

...view details