ಕರ್ನಾಟಕ

karnataka

ಅಂತಾರಾಷ್ಟ್ರೀಯ ಆನ್​​​ಲೈನ್ ಶೂಟಿಂಗ್.. ಮೊದಲ ಸುತ್ತಿನಲ್ಲಿ ಮಿಂಚಿದ ಹುಬ್ಬಳ್ಳಿ ಪ್ರತಿಭೆ

By

Published : Jul 6, 2020, 3:42 PM IST

ಮೂರು ವರ್ಷಗಳಿಂದ ಶಿವಾನಂದ ಬಾಳೆಹೊಸೂರ್ ಹುಬ್ಬಳ್ಳಿ ಶೂಟಿಂಗ್ ಅಕಾಡೆಮಿಯಲ್ಲಿ ರವಿಚಂದ್ರ ಬಾಳೆಹೊಸೂರು ಅವರಿಂದ ಜ್ಯೋತಿ ಸಣ್ಣಕ್ಕಿ ಅವರು ತರಬೇತಿ ಪಡೆಯುತ್ತಿದ್ದರು..

jyoti sannakki
ಜ್ಯೋತಿ ಸಣ್ಣಕ್ಕಿ

ಹುಬ್ಬಳ್ಳಿ :ಇಂಡಿಯನ್ ಶೂಟಿಂಗ್ ಅಸೋಸಿಯೇಷನ್ ಆಯೋಜಿಸಿರುವ ಮೊದಲ ಅಂತಾರಾಷ್ಟ್ರೀಯ ಆನ್​​​ಲೈನ್ ಶೂಟಿಂಗ್ ಲೀಗ್‌ನಲ್ಲಿ ಭಾರತದ ಇಂಡಿಯನ್‌ ಟೈಗರ್ಸ್‌ ತಂಡವನ್ನು ಪ್ರತಿನಿಧಿಸಿರುವ ಹುಬ್ಬಳ್ಳಿ ಮೂಲದ ಜ್ಯೋತಿ ಸಣ್ಣಕ್ಕಿ ಅವರು, ಭಾನುವಾರ ನಡೆದ ಮೊದಲ ಸುತ್ತಿನ ಸ್ಪರ್ಧೆಯಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ನಗರದ ತತ್ವದರ್ಶ ಆಸ್ಪತ್ರೆ ಬಳಿಯಿರುವ ಹುಬ್ಬಳ್ಳಿ ಶೂಟಿಂಗ್ ಅಕಾಡೆಮಿಯಲ್ಲಿ ಜೂಮ್ ಆ್ಯಪ್ ಮೂಲಕ ಭಾನುವಾರ ಸಂಜೆ 5.30ಕ್ಕೆ ಇಟಲಿಯೊಂದಿಗೆ ನಡೆದ ಮೊದಲ ಸುತ್ತಿನ ಸ್ಪರ್ಧೆ ಮುಕ್ತಾಯವಾಗಿದೆ. ಕೃಷ್ಣಕುಮಾರ್, ಇಶಾಂಕ್ ಅಹುಜಾ ಜೊತೆಗೆ ಜ್ಯೋತಿ ಭಾರತದ ತಂಡದಲ್ಲಿದ್ದರು. ಮುಂದಿನ ಸ್ಪರ್ಧೆ ಜುಲೈ 11ರಂದು ಆಸ್ಟ್ರೇಲಿಯಾ ವಿರುದ್ಧ ನಡೆಯಲಿದೆ. ದೆಹಲಿಯಲ್ಲಿ ಜಿ ಎ ಮೌಲಂಕರ್‌ನಲ್ಲಿ ಏರ್ ರೈಫಲ್-2019ರಲ್ಲಿ ನಡೆದಿದ್ದ ಎಂಕ್ಯೂಎಸ್ ಶೂಟಿಂಗ್‌ನಲ್ಲಿ ಲೇವಲ್-2 ಕ್ರಾಸ್ ಮಾಡಿದ್ದ ಹಿನ್ನೆಲೆ ಆನ್‌ಲೈನ್ ಶೂಟಿಂಗ್ ಲೀಗ್‌ಗೆ ಆಯ್ಕೆಯಾದ ಜ್ಯೋತಿ, ನಗರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಚೇರಿಯಲ್ಲಿ ಸೂಪರ್‌ ವೈಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಮೂರು ವರ್ಷಗಳಿಂದ ಶಿವಾನಂದ ಬಾಳೆಹೊಸೂರ್ ಹುಬ್ಬಳ್ಳಿ ಶೂಟಿಂಗ್ ಅಕಾಡೆಮಿಯಲ್ಲಿ ರವಿಚಂದ್ರ ಬಾಳೆಹೊಸೂರು ಅವರಿಂದ ಜ್ಯೋತಿ ಸಣ್ಣಕ್ಕಿ ಅವರು ತರಬೇತಿ ಪಡೆಯುತ್ತಿದ್ದರು. 2018ರಲ್ಲಿ ಕೇರಳದ ತಿರುವನಂತಪುರದಲ್ಲಿ ನಡೆದ 62ನೇ ರಾಷ್ಟ್ರೀಯ ಶೂಟಿಂಗ್ ಚಾಂಪಿಯನ್‌ಶಿಪ್ ಎಸ್‌ಹೆಚ್-1 ವಿಭಾಗದ 10 ಮೀ. ಏರ್​​​ರೈಫಲ್ ಸ್ಟ್ಯಾಂಡಿಂಗ್ ‌ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗಳಿಸಿದ್ದರು. ಮಧ್ಯಪ್ರದೇಶದಲ್ಲಿ ನಡೆದಿದ್ದ 63ನೇ ರಾಷ್ಟ್ರೀಯ ಶೂಟಿಂಗ್ ಚಾಂಪಿಯನ್‌ಶಿಪ್‌ನಲ್ಲೂ ಬೆಳ್ಳಿ ಪದಕಕ್ಕೆ ಮುತ್ತಿಕ್ಕಿದ್ದರು.

ಕೊರೊನಾ ಹಿನ್ನೆಲೆಯಲ್ಲಿ ಶೂಟರ್‌ಗಳ ಕ್ರೀಡಾ ಮನೋಭಾವಕ್ಕೆ ತೊಡಕು ಉಂಟಾಗಬಾರದು ಎಂದು ಆನ್‌ಲೈನ್ ಸ್ಪರ್ಧೆ ನಡೆಸಲಾಗುತ್ತಿದೆ. ಪಿಸಿಐ ಅನುಮತಿ ಮೇರೆಗೆ ಭಾರತೀಯ ಪ್ಯಾರಾಲಿಂಪಿಕ್ ಶೂಟಿಂಗ್‌ನ ಇಂಡಿಯನ್ ಟೈಗರ್ಸ್ ತಂಡ ಪಾಲ್ಗೊಂಡಿದೆ. ಟೂರ್ನಿಯಲ್ಲಿ ಫ್ರಾನ್ಸ್, ಇಸ್ರೇಲ್, ಸ್ಪೇನ್, ಇಟಲಿ, ಆಸ್ಟ್ರೇಲಿಯಾ ಮತ್ತು ಭಾರತ ಸೇರಿ ಆರು ತಂಡಗಳು ಪಾಲ್ಗೊಂಡಿವೆ.

ತಂಡದಲ್ಲಿ ಇಂಡಿಯನ್ ಟೈಗರ್ಸ್ ಇಟಲಿಯನ್ ಸ್ಟೈಲ್, ಆಸ್ಟ್ರೇಲಿಯನ್ ರಾಕ್ಸ್ ಇವೆ. ಬಿ ತಂಡದಲ್ಲಿ ಫ್ರೆಂಚ್ ಫ್ರಾನ್ಸ್, ಇಸ್ರೇಲ್ ಮಾಬರುತ್, ಸ್ಪಾನಿಷ್ ಚನೊಸ್ ತಂಡಗಳಿವೆ. ಈ ಹಿಂದೆ ಹಲವು ಬಾರಿ ಆನ್‌ಲೈನ್ ಶೂಟಿಂಗ್ ಸ್ಪರ್ಧೆಗಳು ನಡೆದಿವೆ. ಆದರೆ, ಆಲ್‌ಲೈನ್ ಶೂಟಿಂಗ್ ಲೀಗ್ ನಡೆದಿರಲಿಲ್ಲ.

ABOUT THE AUTHOR

...view details