ಕರ್ನಾಟಕ

karnataka

ETV Bharat / sports

Tokyo Olympic: 113 ಪದಕಗಳೊಂದಿಗೆ ಅಗ್ರಸ್ಥಾನ ಪಡೆದ ಅಮೆರಿಕ - ಜಪಾನ್​

ಭಾರತ ಕೂಡ ಈ ಒಲಿಂಪಿಕ್ಸ್​ನಲ್ಲಿ 7 ಪದಕ ಗೆಲ್ಲುವ ಮೂಲಕ ಇತಿಹಾಸ ಬರೆದಿದೆ. 2012ರಲ್ಲಿ 6 ಪದಕ ಗೆದ್ದಿದ್ದು, ಈ ವರೆಗಿನ ಭಾರತದ ಅತ್ಯುತ್ತಮ ಸಾಧನೆಯಾಗಿತ್ತು. ಮೀರಾಬಾಯಿ ಚನು ಮತ್ತು ರವಿಕುನಮಾರ್​ ದಹಿಯಾ ಬೆಳ್ಳಿ, ಬಜರಂಗ್ ಪೂನಿಯಾ, ಪಿವಿ ಸಿಂಧು ಮತ್ತು ಹಾಕಿ ಪುರುಷರ ತಂಡ ಕಂಚಿ ಗೆದ್ದರು.

Tokyo Olympics final medal
ಟೋಕಿಯೋ ಒಲಿಂಪಿಕ್ಸ್​ 2020 ಪದಕ ಪಟ್ಟಿ

By

Published : Aug 9, 2021, 3:46 PM IST

ಟೋಕಿಯೋ: ಟೋಕಿಯೋದಲ್ಲಿ ಭಾನುವಾರ 17 ದಿನಗಳ ಮಹಾ ಕ್ರೀಡಾಕೂಟಕ್ಕೆ ಭಾನುವಾರ ತೆರೆ ಎಳೆಯಲಾಗಿದೆ. ಕೋವಿಡ್​ 19 ಬಿಕ್ಕಟ್ಟಿನ ನಡುವೆಯೂ ಜಪಾನ್​ ಒಲಿಂಪಿಕ್ಸ್​ನಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಯಶಸ್ವಿಯಾಗಿ ನಡೆಸಿದೆ. ಸಮಾರೋಪ ಸಮಾರಂಭ ನಡೆಯುತ್ತಿದ್ದಂತೆ ಅಥ್ಲೀಟ್​ಗಳ ಗಮನ 2024ರ ಪ್ಯಾರೀಸ್ ಒಲಿಂಪಿಕ್ಸ್​ ಕಡೆಗೆ ತಿರುಗಿದೆ.

ಇನ್ನೂ ಕೋವಿಡ್​ ಭೀತಿಯನ್ನು ಲೆಕ್ಕಿಸದೇ ಸಾವಿರಾರು ಕ್ರೀಡಾಪಟುಗಳು ನೂರಕ್ಕೂ ಹೆಚ್ಚು ದೇಶಗಳ ಕ್ರೀಡಾಪಟುಗಳು ಒಲಿಂಪಿಕ್ಸ್​ ಗೇಮ್ಸ್​ನಲ್ಲಿ ಭಾಗವಹಿಸಿ ಪದಕ ಬೇಟೆಯಾಡಿದ್ದಾರೆ. ಆದರೆ, ತೀವ್ರ ಪೈಪೋಟಿಯುತವಾಗಿದ್ದ ಕ್ರೀಡಾಕೂಟದಲ್ಲಿ ಬಲಿಷ್ಠ ಅಮೆರಿಕ ಕೊನೆಯ ದಿನ ಚೀನಾವನ್ನು ಹಿಂದಿಕ್ಕಿ ಅಗ್ರಸ್ಥಾನ ಪಡೆದುಕೊಂಡಿದೆ.

32ನೇ ಒಲಿಂಪಿಕ್ಸ್​ ಕ್ರೀಡಾಕೂಟದ ಅಂತ್ಯಕ್ಕೆ ಅಮೆರಿಕ 39 ಚಿನ್ನ, 41 ಬೆಳ್ಳಿ ಮತ್ತು 33 ಕಂಚಿನ ಪದಕಗಳನ್ನು 113 ಪದಕಗಳನ್ನು ಗೆಲ್ಲುವ ಮೂಲಕ ಅಗ್ರಸ್ಥಾನ ಪಡೆದಿದೆ. ಆರಂಭದಿಂದ ಒಲಿಂಪಿಕ್ಸ್​ನ 16ನೇ ದಿನಗಳವರೆಗೂ ನಂಬರ್​ 1 ಸ್ಥಾನದಲ್ಲಿದ್ದ ಚೀನಾ ಕೊನೆಯ ದಿನ 2ನೇ ಸ್ಥಾನಕ್ಕೆ ಕುಸಿಯಿತು. ಚೀನಾ 38 ಚಿನ್ನದ ಪದಕ , 32 ಬೆಳ್ಳಿ ಮತ್ತು 18 ಕಂಚಿನ ಪದಕ ಸೇರಿದಂತೆ ಒಟ್ಟು 88 ಪದಕಗಳನ್ನು ಪಡೆದರೆ, ಜಪಾನ್​ 27 ಚಿನ್ನ, 14 ಬೆಳ್ಳಿ ಮತ್ತು 17 ಕಂಚಿನ ಪದಕ ಸೇರಿದಂತೆ 58 ಪದಕಗಳನ್ನು ಗೆದ್ದು 3ನೇ ಸ್ಥಾನ ಪಡೆಯಿತು.

ಭಾರತ ಕೂಡ ಈ ಒಲಿಂಪಿಕ್ಸ್​ನಲ್ಲಿ 7 ಪದಕ ಗೆಲ್ಲುವ ಮೂಲಕ ಇತಿಹಾಸ ಬರೆದಿದೆ. 2012ರಲ್ಲಿ 6 ಪದಕ ಗೆದ್ದಿದ್ದು, ಈ ವರೆಗಿನ ಭಾರತದ ಅತ್ಯುತ್ತಮ ಸಾಧನೆಯಾಗಿತ್ತು. ಮೀರಾಬಾಯಿ ಚನು ಮತ್ತು ರವಿಕುಮಾರ್​ ದಹಿಯಾ ಬೆಳ್ಳಿ, ಬಜರಂಗ್ ಪೂನಿಯಾ, ಪಿವಿ ಸಿಂಧು ಮತ್ತು ಹಾಕಿ ಪುರುಷರ ತಂಡ ಕಂಚಿ ಗೆದ್ದರು.

ಟೋಕಿಯೋ ಒಲಿಂಪಿಕ್ಸ್​ನ ಸಂಪೂರ್ಣ ಪದಕ ಪಟ್ಟಿ ಇಲ್ಲಿದೆ.

ABOUT THE AUTHOR

...view details