ಮಲಪ್ಪುರಂ(ಕೇರಳ):ದೇಶದ ಅತ್ಯಂತ ಪ್ರಮುಖ ಫುಟ್ಬಾಲ್ ಟ್ರೋಫಿಗಳಲ್ಲಿ ಒಂದಾದ ಸಂತೋಷ್ ಟ್ರೋಫಿಯನ್ನು ಕೇರಳ ಗೆದ್ದುಕೊಂಡಿದೆ. ಮಲಪ್ಪುರಂನ ಮಂಜೇರಿ ಪಯ್ಯನಾಡ್ ಸ್ಟೇಡಿಯಂನಲ್ಲಿ ನಡೆದ ರೋಚಕ ಪಂದ್ಯದಲ್ಲಿ ಅಂತಿಮವಾಗಿ ಪೆನಾಲ್ಟಿಶೂಟ್ ಮೂಲಕ 5-4 ಗೋಲುಗಳ ಅಂತರದಲ್ಲಿ ಪಶ್ಚಿಮ ಬಂಗಾಳವನ್ನು ಸೋಲಿಸುವ ಮೂಲಕ ಟ್ರೋಫಿಯನ್ನು ಕೇರಳ ಗೆದ್ದುಕೊಂಡಿತು.
1993ರಿಂದ ಇದೇ ಮೊದಲು ತನ್ನ ನೆಲದಲ್ಲೇ ಕೇರಳ ಟ್ರೋಫಿ ಗೆದ್ದಿದೆ. ಕೇರಳಕ್ಕೆ ಪ್ರಬಲ ಸ್ಪರ್ಧೆ ನೀಡಿದ್ದ ಪಶ್ಚಿಮ ಬಂಗಾಳ ತಂಡ 46 ಬಾರಿ ಸಂತೋಷ್ ಟ್ರೋಫಿಯಲ್ಲಿ ಫೈನಲ್ ಪ್ರವೇಶಿಸಿದ್ದು, 32 ಬಾರಿ ಟ್ರೋಫಿಯನ್ನು ತನ್ನದಾಗಿಸಿಕೊಂಡಿದೆ ಎಂಬುದೊಂದು ದಾಖಲೆ.