ಭೂವನೇಶ್ವರ(ಒಡಿಶಾ):ಮೂರು ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾ ಮತ್ತು ಅರ್ಜೆಂಟೀನಾ ನಡುವಿನ ಪಂದ್ಯ 3-3 ಗೋಲುಗಳಿಂದ ರೋಮಾಂಚಕ ಡ್ರಾದಲ್ಲಿ ಅಂತ್ಯವಾಯಿತು. ಪಂದ್ಯ ಡ್ರಾ ಆದರೂ ಆಸ್ಟ್ರೇಲಿಯಾ ಅಂಕ ಪಟ್ಟಿಯಲ್ಲಿ ಅಗ್ರ ಸ್ಥಾನ ಉಳಿಸಿಕೊಂಡಿತು. ಅರ್ಜೆಂಟೀನಾ ನಾಲ್ಕು ಅಂಕ ಇದ್ದರೂ ಗೋಲು ವ್ಯತ್ಯಾಸ ಆಸ್ಟ್ರೇಲಿಯಾಕ್ಕೆ ಅಗ್ರಸ್ಥಾನದಲ್ಲಿ ಇರಲು ಸಹಕರಿಸಿತು.
ಆರಂಭಿಕ ನಿಮಿಷಗಳಲ್ಲಿ ಆಸ್ಟ್ರೇಲಿಯಾ ಪ್ರಾಬಲ್ಯ ಸಾಧಿಸಿತು. ಆದರೆ, ಅರ್ಜೆಂಟೀನಾ ಪ್ರತಿದಾಳಿಯೊಂದಿಗೆ ಉತ್ತಮವಾಗಿ ಹೋರಾಡಿತು, ಆಸ್ಟ್ರೇಲಿಯಾದ 9 29 ಮತ್ತು ಕೊನೆಯ 57 ನೇ ನಿಮಿಷದಲ್ಲಿ ಗೋಲ್ ಗಳಿಸಿತು. ಅರ್ಜೆಂಟೀನಾ 18, 32 ಮತ್ತು 48 ನೇ ನಿಮಿಷದಲ್ಲಿ ಗೋಲ್ ಪಡೆದು ಕೊಂಡಿತ್ತು. ಆದರೆ, 57ನೇ ನಿಮಿಷದಲ್ಲಿ ಬ್ಲೇಕ್ ಗಳಿಸಿದ ಗೋಲ್ ಡ್ರಾಕ್ಕೆ ಕಾರಣವಾಯಿತು.
ಫ್ರಾನ್ಸ್ ವಿರುದ್ಧ ದಕ್ಷಿಣ ಆಫ್ರಿಕಾ :ವಿಕ್ಟರ್ ಚಾರ್ಲೆಟ್ ಅವರು ಗಳಿಸಿ ಎರಡು ಗೋಲ್ಗಳು ಫ್ರಾನ್ಸ್ನ್ನು ಗೆಲುವಿಗೆ ಕೊಂಡೊಯ್ಯಿತು. ಫ್ರಾನ್ಸ್ 7 ನೇ ನಿಮಿಷದಲ್ಲಿ ಮತ್ತು ಆಫ್ರಿಕಾ 15ನೇ ನಿಮಿಷದಲ್ಲಿ ಗೋಲ್ ಗಳಿಸಿ ಸಮಬಲ ಆಗಿದ್ದವು. ನಂತರ ಕೊನೆಯಲ್ಲಿ ವಿಕ್ಟರ್ ಚಾರ್ಲೆಟ್ ಗೋಲ್ ತಂದರು ಇದರಿಂದ ಗೆಲುವು ಫ್ರಾನ್ಸ್ನದ್ದಾಯಿತು.
ಗೆಲುವಿನೊಂದಿಗೆ, ಫ್ರಾನ್ಸ್ ಈಗ ಮೂರು ಅಂಕಗಳೊಂದಿಗೆ ತಮ್ಮ ಪೂಲ್‌ನಲ್ಲಿ ಮೂರನೇ ಸ್ಥಾನದಲ್ಲಿದೆ, ಒಂದು ಸೋಲು ಮತ್ತು ಕೆಳಮಟ್ಟದ ಗೋಲು ವ್ಯತ್ಯಾಸದಿಂದಾಗಿ ಟೇಬಲ್-ಟಾಪ್ಪರ್‌ಗಳಾದ ಆಸ್ಟ್ರೇಲಿಯಾ ಮತ್ತು ಅರ್ಜೆಂಟೀನಾವನ್ನು ಹಿಂದಿಕ್ಕಿದೆ. ಮತ್ತೊಂದೆಡೆ, ದಕ್ಷಿಣ ಆಫ್ರಿಕಾವು ಎರಡು ಪಂದ್ಯಗಳಲ್ಲಿ ಶೂನ್ಯ ಮತ್ತು ಎರಡು ಸೋಲುಗಳೊಂದಿಗೆ ಪಾಯಿಂಟ್ಸ್ ಪಟ್ಟಿಯಲ್ಲಿ ಕೆಳಭಾಗದಲ್ಲಿದೆ.