ಭುವನೇಶ್ವರ(ಒಡಿಶಾ): ಎಫ್‌ಐಎಚ್ ಪುರುಷರ ಹಾಕಿ ವಿಶ್ವಕಪ್‌ನಲ್ಲಿ ಭಾರತ ತಂಡ ಇಂದು ನ್ಯೂಜಿಲೆಂಡ್ ವಿರುದ್ಧ ಸೆಣಸಿದೆ. ಕಳಿಂಗ ಕ್ರೀಡಾಂಗಣದಲ್ಲಿ ನಡೆದ ಪೂಲ್ ಡಿ ಪಂದ್ಯದಲ್ಲಿ ಉಭಯ ತಂಡಗಳು ನಿಗದಿತ ಅವಧಿಯ ಅಂತ್ಯಕ್ಕೆ 3-3 ಗೋಲುಗಳಿಂದ ಸಮಬಲ ಸಾಧಿಸಿದ್ದವು. ಆ ಬಳಿಕ ಪಂದ್ಯ ಪೆನಾಲ್ಟಿ ಶೂಟೌಟ್ ತಲುಪಿತು. ಅಲ್ಲಿ ನ್ಯೂಜಿಲೆಂಡ್ ಭಾರತವನ್ನು 5-4 ಅಂತರದಿಂದ ಸೋಲಿಸಿತು. ಜನವರಿ 24 ರಂದು ನಡೆಯಲಿರುವ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ಹಾಲಿ ಚಾಂಪಿಯನ್ ಬೆಲ್ಜಿಯಂ ತಂಡವನ್ನು ಎದುರಿಸಲಿದೆ.
ಮೊದಲ ಕ್ವಾರ್ಟರ್ ಮುಗಿದ ನಂತರ ಉಭಯ ತಂಡಗಳು 0-0 ಗೋಲುಗಳ ಸಮಬಲದಲ್ಲಿದ್ದವು. ಮೊದಲ ಕ್ವಾರ್ಟರ್‌ನಲ್ಲಿ ಭಾರತಕ್ಕೆ ಪೆನಾಲ್ಟಿ ಕಾರ್ನರ್ ಸಿಕ್ಕರೂ ಅದನ್ನು ಗೋಲಾಗಿ ಪರಿವರ್ತಿಸಲು ತಂಡಕ್ಕೆ ಸಾಧ್ಯವಾಗಲಿಲ್ಲ. ಟ್ಯಾಕಲ್ ಸಮಯದಲ್ಲಿ ಆಕ್ರಮಣಕಾರಿ ನಡೆಯನ್ನು ತೋರಿಸಿದ ಮನ್‌ಪ್ರೀತ್ ಸಿಂಗ್‌ಗೆ ರೆಫರಿ ಗ್ರೀನ್ ಕಾರ್ಡ್ ತೋರಿಸಿದರು. ಇದಕ್ಕೂ ಮೊದಲು 7ನೇ ನಿಮಿಷದಲ್ಲಿ ನ್ಯೂಜಿಲೆಂಡ್ನ ವುಡ್ ಅವರ ಆಕ್ರಮಣಕಾರಿ ಆಟಕ್ಕೆ ಗ್ರೀನ್ ಕಾರ್ಡ್ ಪ್ರದರ್ಶಿಸಲಾಗಿತ್ತು.
ಎರಡನೇ 15 ನಿಮಿಷದ ಆಟ ಆರಂಭವಾಗುತ್ತಿದ್ದಂತೆ ಭಾರತ ಆಕ್ರಮಣಕಾರಿ ಆಟಕ್ಕೆ ಮುಂದಾಯಿತು. ಎರಡನೇ ಕ್ವಾರ್ಟರ್ನ 2ನೇ ನಿಮಿಷದಲ್ಲಿ ಶಂಶೇರ್ ನೀಡಿದ ಪಾಸ್ನ್ನು ಉಪಾದ್ಯಯ ಲಲಿತ್ ಕುಮಾರ್ ಗೋಲ್ ಮಾಡಿದರು. 17ನೇ ನಿಮಿಷದಲ್ಲಿ ಭಾರತ ಮುನ್ನಡೆ ಸಾಧಿಸಿತು. ಮೊದಲ ಗೋಲ್ಗಳಿಸಿದ 7ನೇ (24) ನಿಮಿಷದಲ್ಲಿ ಭಾರತಕ್ಕೆ ಪೆನಾಲ್ಟಿ ಕಾರ್ನರ್ ಸುಖಜಿತ್ ಸಿಂಗ್ ಗೋಲ್ ಆಗಿ ಪರಿವರ್ತಿಸಿದರು. ಈ ಪಂದ್ಯದಲ್ಲಿ ಟೀಂ ಇಂಡಿಯಾ 2-0 ಮುನ್ನಡೆಸಾಧಿಸಿತು. ನ್ಯೂಜಿಲೆಂಡ್ ಪರ ಸ್ಯಾಮ್ ಲೇನ್ 28 ನೇ ನಿಮಿಷದಲ್ಲಿ ಮೊದಲ ಗೋಲು ದಾಖಲಿಸಿದರು. ಮೊದಲಾರ್ಧ ಮುಗಿಯುವಾಗ ಭಾರತ 2-1ರ ಮುನ್ನಡೆ ಗಳಿಸಿತ್ತು.
ಮೂರನೇ ಕ್ವಾರ್ಟರ್‌ನಲ್ಲಿ ಉಭಯ ತಂಡಗಳು ತಲಾ ಒಂದು ಗೋಲ್ ದಾಖಲಿಸಿದವು. 40ನೇ ನಿಮಿಷದಲ್ಲಿ ಭಾರತಕ್ಕೆ ಮತ್ತೊಂದು ಪೆನಾಲ್ಟಿ ಕಾರ್ನರ್ ಸಿಕ್ಕಿತು. ಈ ಮೂಲಕ ಟೀಂ ಇಂಡಿಯಾ ಭರ್ಜರಿ ಗೋಲು ದಾಖಲಿಸಿತು. ಈ ಪೆನಾಲ್ಟಿ ಕಾರ್ನರ್ನಲ್ಲಿ ವರುಣ್ ಕುಮಾರ್ ಅದ್ಭುತ ಗೋಲು ದಾಖಲಿಸಿದರು. 43 ನೇ ನಿಮಿಷದಲ್ಲಿ ಕಿವೀಸ್ನ ಕೆನ್ ರಸೆಲ್ ಪೆನಾಲ್ಟಿಯನ್ನು ಗೋಲ್ ಮಾಡಿದರು. ಈ ಪಂದ್ಯದಲ್ಲಿ ಟೀಂ ಇಂಡಿಯಾ 3-2 ಮುನ್ನಡೆ ಸಾಧಿಸಿತು.