ಭುವನೇಶ್ವರ (ಒಡಿಶಾ): ಒಡಿಶಾದಲ್ಲಿ ಮುಂಬರುವ 2022ರ ಜನವರಿಯಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಹಾಕಿ ಫೆಡರೇಶನ್ (ಎಫ್‌ಐಎಚ್) ಹಿರಿಯರ ಪುರುಷರ ಹಾಕಿ ವಿಶ್ವಕಪ್‌ನ ಪೂಲ್‌ಗಳ ಘೋಷಣೆ ಮಾಡಲಾಗಿದ್ದು, ಆತಿಥೇಯ ಭಾರತ, ಇಂಗ್ಲೆಂಡ್, ಸ್ಪೇನ್ ಮತ್ತು ವೇಲ್ಸ್ ತಂಡ ಪೂಲ್-ಡಿಯಲ್ಲಿ ಸ್ಥಾನ ಪಡೆದಿವೆ.
ಒಡಿಶಾದ ಭುವನೇಶ್ವರ ಮತ್ತು ರೂರ್ಕೆಲಾದಲ್ಲಿ ಪುರುಷರ ವಿಶ್ವಕಪ್ ಹಾಕಿ ನಡೆಯಲಿದೆ. ಇಂದು ಭುವನೇಶ್ವರದಲ್ಲಿ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್, ಕ್ರೀಡಾ ಸಚಿವ ತುಷಾರಕಾಂತಿ ಬೆಹೆರಾ ಮತ್ತು ಹಾಕಿ ಇಂಡಿಯಾ ಆಡಳಿತಾಧಿಕಾರಿಗಳ (ಸಿಒಎ) ಸದಸ್ಯರಾದ ಜಾಫರ್ ಇಕ್ಬಾಲ್ ಮತ್ತು ಎಸ್.ವೈ.ಖುರೈಷಿ ಮತ್ತು ಇತರ ಗಣ್ಯರ ಸಮ್ಮುಖದಲ್ಲಿ ಎಫ್‌ಐಎಚ್ ಸಿಇಒ ಥೇರಿ ವೇಲ್ ಅವರು ಪೂಲ್‌ಗಳ ಡ್ರಾವನ್ನು ನಡೆಸಿದರು.
ಪೂಲ್-ಎನಲ್ಲಿ ಆಸ್ಟ್ರೇಲಿಯಾ, ಅರ್ಜೆಂಟೀನಾ, ಫ್ರಾನ್ಸ್ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಇದ್ದು, ಪೂಲ್ - ಬಿಯಲ್ಲಿ ವಿಶ್ವ ಮತ್ತು ಒಲಿಂಪಿಕ್ ಚಾಂಪಿಯನ್ ಬೆಲ್ಜಿಯಂ, ಜರ್ಮನಿ, ದಕ್ಷಿಣ ಕೊರಿಯಾ ಮತ್ತು ಜಪಾನ್ ತಂಡಗಳು ಇದೆ. ಆದರೆ, ಪೂಲ್-ಸಿಯಲ್ಲಿ ನೆದರ್ಲ್ಯಾಂಡ್, ನ್ಯೂಜಿಲ್ಯಾಂಡ್, ಮಲೇಷ್ಯಾ ಮತ್ತು ಚಿಲಿ ತಂಡಗಳು ಸೆಣಸಲಿವೆ.
ಒಡಿಶಾದಲ್ಲಿ ಸತತ ಎರಡನೇ ಹಾಕಿ ವಿಶ್ವಕಪ್: ಒಡಿಶಾದಲ್ಲಿ ಆಯೋಜಿಸುತ್ತಿರುವ ಸತತ ಎಡರನೇ ಹಾಕಿ ವಿಶ್ವಕಪ್ ಇದಾಗಿದೆ. 2018ರಲ್ಲೂ ಭುವನೇಶ್ವರದ ಕಳಿಂಗ ಸ್ಟೇಡಿಯಂನಲ್ಲಿ ವಿಶ್ವಕಪ್ ನಡೆದಿತ್ತು. ಇದಕ್ಕೂ ಮೊದಲು ಎಂದರೆ 1982ರಲ್ಲಿ ಮುಂಬೈ ಮತ್ತು 2010ರಲ್ಲಿ ನವದೆಹಲಿಯಲ್ಲಿ ಹಾಕಿ ವಿಶ್ವಕಪ್ ಆಯೋಜಸಲಾಗಿತ್ತು. ಇದೀಗ ಭಾರತದಲ್ಲಿ ನಡೆಯುತ್ತಿರುವ ಒಟ್ಟಾರೆ ನಾಲ್ಕನೇ ವಿಶ್ವಕಪ್ ಇದಾಗಿದ್ದು, 2020ರ ಜನವರಿ 13ರಿಂದ 29ರವರೆಗೆ ಹಾಕಿ ವಿಶ್ವಕಪ್ ಟೂರ್ನಿ ಜರುಗಲಿದೆ.
ಹಾಕಿ ವಿಶ್ವಕಪ್ ಪೂಲ್‌ಗಳು ಹೀಗಿವೆ: