ಕಟಕ್(ಒಡಿಶಾ):ಅಂತಾರಾಷ್ಟ್ರೀಯ ಹಾಕಿ ಫೆಡರೇಶನ್ ವತಿಯಿಂದ ಆಯೋಜನೆ ಗೊಂಡಿರುವ 15ನೇ ಆವೃತ್ತಿಯ ಹಾಕಿ ವಿಶ್ವಕಪ್ಗೆ ನಾಳೆ ಅದ್ಧೂರಿ ಚಾಲನೆ ಸಿಗಲಿದೆ. ಒಡಿಶಾದ ಕಟಕ್ನ ಬಾರಾಬಬತಿ ಕ್ರಿಡಾಂಗಣದಲ್ಲಿ ಮಹಾಕುಂಭದ ಉದ್ಘಾಟನಾ ಸಮಾರಂಭ ನಡೆಯಲಿದೆ. ಬಾಲಿವುಡ್ನ ಪ್ರಸಿದ್ಧ ಕಲಾವಿದರು ಮನರಂಜನಾ ಕಾರ್ಯಕ್ರಮಗಳನ್ನು ನೀಡಲಿದ್ದಾರೆ. ಕಲಾವಿದರ ಮನರಂಜನಾ ಕಾರ್ಯಕ್ರಮಕ್ಕೆ ಬಾರಾಬತಿ ಕ್ರೀಡಾಂಗಣದಲ್ಲಿ ವೇದಿಕೆ ಸಜ್ಜಾಗಿದೆ. ಇಡೀ ನಗರ ಮದುವಣಗಿತ್ತಿಯಂತೆ ಶೃಂಗಾರವಾಗಿದೆ.
ಇಂದು ಸಂಜೆ ಹಾಕಿ ವಿಶ್ವಕಪ್ ಟ್ರೋಫಿಗೆ ಅದ್ಧೂರಿ ಸ್ವಾಗತ ಕೋರಲಾಯಿತು. ಕಟಕ್ ಜಿಲ್ಲಾಡಳಿತವು ಹಾಕಿ ವಿಶ್ವಕಪ್ ಅನ್ನು ಸ್ವೀಕರಿಸಿ ಜವಾಹರಲಾಲ್ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ಪೊಲೀಸ್ ಬಿಗಿ ಭದ್ರತೆಯಲ್ಲಿ ಇರಿಸಿದೆ. ನಾಳೆ ವಿಶ್ವಕಪ್ ಅನ್ನು ಅನಾವರಣಗೊಳಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು. ಟ್ರೋಫಿ ಅನಾವಣದ ನಂತರ ನಗರದ ಪ್ರಮುಖ ಪ್ರದೇಶಗಳಲ್ಲಿ ಮೆರವಣಿಗೆಗೊಳ್ಳಲಿದೆ. ನಂತರ ಹಾಕಿ ವಿಶ್ವಕಪ್ ಟ್ರೋಫಿ ನಾಳೆ ಮಧ್ಯಾಹ್ನ 1 ಗಂಟೆಗೆ ಬಾರಾಬತಿ ಕ್ರೀಡಾಂಗಣಕ್ಕೆ ಆಗಮಿಸಲಿದೆ.
ಮೆರವಣಿಗೆ ವೇಳೆ ನಗರದ ವಿವಿಧೆಡೆ ಟ್ರೋಫಿಯನ್ನು ಸ್ವಾಗತಿಸಲಾಗುವುದು. ಮಧ್ಯಾಹ್ನ 3 ಗಂಟೆಯೊಳಗೆ ಬಾರಾಬತಿ ಕ್ರೀಡಾಂಗಣಕ್ಕೆ ತಲುಪುವಂತೆ ಸಿಎಂಸಿ ಆಯುಕ್ತರು ಮನವಿ ಮಾಡಿದ್ದಾರೆ. ಉದ್ಘಾಟನಾ ಸಮಾರಂಭದಲ್ಲಿ ಒಡಿಶಾ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳು, ಇತರ ನ್ಯಾಯಾಧೀಶರು, ಮುಖ್ಯಮಂತ್ರಿಗಳು, ಸಚಿವರು ಮತ್ತು ರಾಜ್ಯದ ಹೊರಗಿನಿಂದ ಬರುವ ಗಣ್ಯರು ಭಾಗವಹಿಸಲಿದ್ದಾರೆ. ಬಾರಬತಿ ಸ್ಟೇಡಿಯಂನಲ್ಲಿ ನಾಳೆ 6 ಗಂಟೆಗೆ ಉದ್ಘಾಟನಾ ಸಮಾರಂಭ ನಡೆಯಲಿದೆ.
ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಸಿದ್ಧತೆ:ಬಾರಾಬತಿ ಕ್ರೀಡಾಂಗಣ ನಾಳೆಯ ಉದ್ಘಾಟನಾ ಕಾರ್ಯಕ್ರಮಕ್ಕೆ ಸಂಪೂರ್ಣ ಸಜ್ಜಾಗಿದೆ. ನಾಳೆಯ ಮನರಂಜನಾ ಕಾರ್ಯಕ್ರಮಕ್ಕಾಗಿ ವಿವಿಧ ಕಲಾತಂಡಗಳು ಅಭ್ಯಾಸ ನಡೆಸುತ್ತಿವೆ. ಒಡಿಶಾ ರಾಜ್ಯದ ಸಂಸ್ಕೃತಿಕ ಮೆರುಗನ್ನು ತೋರ್ಪಡಿಸುವ ಮತ್ತು ಗ್ರಾಮೀಣ ಮನರಂಜನಾ ನೃತ್ಯಗಳಿಗೆ ಪ್ರಾಶಸ್ತ್ಯ ನೀಡಲಾಗಿದೆ.