ಭುವನೇಶ್ವರ(ಒಡಿಶಾ):ಭಾರತದಲ್ಲಿ ಆಯೋಜಿಸಲಾಗಿದ್ದ ಹಾಕಿ ವಿಶ್ವಕಪ್ನ 15ನೇ ಆವೃತ್ತಿ ಕೊನೆಯ ಹಂತ ತಲುಪಿದ್ದು, ಬೆಲ್ಜಿಯಂ ಮತ್ತು ಜರ್ಮನಿ ಕಪ್ಗಾಗಿ ಭಾನುವಾರ ಸೆಣಸಾಡಲಿದೆ. ಮೂರು ಮತ್ತು ನಾಲ್ಕನೇ ಸ್ಥಾನಕ್ಕಾಗಿ ಇಂದಿನ ಸೆಮಿಸ್ನಲ್ಲಿ ಸೋಲನುಭವಿಸಿ ಆಸ್ಟ್ರೇಲಿಯಾ ಮತ್ತು ನೆದರ್ಲೆಂಡ್ಸ್ ಎದುರಾಗಲಿದೆ. ಶುಕ್ರವಾರ ಭುವನೇಶ್ವರದ ಕಳಿಂಗ ಕ್ರೀಡಾಂಗಣದಲ್ಲಿ ನಡೆದ ತೀವ್ರ ಪೈಪೋಟಿಯಿಂದ ಕೂಡಿದ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಬೆಲ್ಜಿಯಂ, ಪುರುಷರ ಹಾಕಿ ವಿಶ್ವಕಪ್ 2023 ರಲ್ಲಿ ನೆದರ್ಲೆಂಡ್ಸ್ ತಂಡವನ್ನು ಪೆನಾಲ್ಟಿ ಶೂಟೌಟ್ ನಲ್ಲಿ 3-2 ಗೋಲುಗಳಿಂದ ಸೋಲಿಸಿ ಫೈನಲ್ ಪ್ರವೇಶಿಸಿತು.
ನಿಗದಿತ ಸಮಯದಲ್ಲಿ ಪಂದ್ಯ 2-2ರಲ್ಲಿ ಪಂದ್ಯ ಟೈಯಲ್ಲಿ ಕೊನೆಗೊಂಡಿತು. ನಂತರದ ಪೆನಾಲ್ಟಿ ಶೂಟೌಟ್‌ನಲ್ಲಿ ಬೆಲ್ಜಿಯಂ 3-2 ಗೋಲುಗಳಿಂದ ನೆದರ್ಲೆಂಡ್ಸ್ ಅನ್ನು ಸೋಲಿಸಿ ಫೈನಲ್ಗೆ ತಲುಪುವಲ್ಲಿ ಯಶಸ್ವಿಯಾಯಿತು. ನೆದರ್ಲೆಂಡ್ಸ್ ಏಳು, 10 ಮತ್ತು 11ನೇ ನಿಮಿಷಗಳಲ್ಲಿ ಮೂರು ಪೆನಾಲ್ಟಿ ಕಾರ್ನರ್‌ಗಳನ್ನು ಗಳಿಸಿತು. ಜಿಪ್ ಜಾನ್ಸೆನ್ 11ನೇ ನಿಮಿಷದ ಅವಕಾಶವನ್ನು ಗೋಲ್ ಆಗಿ ಪರಿವರ್ತಿಸಿದರು. ಮೊದಲ ಕ್ವಾರ್ಟರ್‌ನಲ್ಲಿ ನೆದರ್ಲೆಂಡ್ಸ್ 0-1 ಮುನ್ನಡೆ ನೀಡಿದರು.
ಎರಡನೇ ಕ್ವಾರ್ಟರ್‌ನಲ್ಲಿ ಬೆಲ್ಜಿಯಂ ಪ್ರಬಲ ಪುನರಾಗಮನ ಮಾಡಿತು. ಎದುರಾಳಿ ತಂಡದ ಮೇಲೆ ಭಾರಿ ಒತ್ತಡ ಹೇರಿದ ಅವರು 26ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಅವಕಾಶ ಸೃಷ್ಟಿಸಿದರು. ಸ್ಟಾರ್ ಆಟಗಾರ ಟಾಮ್ ಬೂನ್ ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡರು. ಸಮಬಲದ ಪೈಪೋಟಿಯಿಂದ ಕೂಡಿದ ಮೊದಲಾರ್ಧ 1-1 ಗೋಲುಗಳಿಂದ ಅಂತ್ಯಗೊಂಡಿತು.
ನೆದರ್ಲ್ಯಾಂಡ್ಸ್ ಮೂರನೇ ಕ್ವಾರ್ಟರ್ ಆಕ್ರಮಣಕಾರಿ ಪ್ರವೃತ್ತಿಯೊಂದಿಗೆ ದ್ವಿತೀಯಾರ್ಧವನ್ನು ಸಮೀಪಿಸಿದರು ಮತ್ತು 35 ನೇ ನಿಮಿಷದಲ್ಲಿ ಮೂರು ಬ್ಯಾಕ್ - ಟು - ಬ್ಯಾಕ್ ಪೆನಾಲ್ಟಿ ಕಾರ್ನರ್ ಗಳಿಸಿದರು. ಜಿಪ್ ಜಾನ್ಸೆನ್ 35ನೇ ನಿಮಿಷದಲ್ಲಿ ಕೊನೆಯದನ್ನು ಗೋಲಾಗಿ ಪರಿವರ್ತಿಸಿ ಆರೆಂಜಸ್‌ನ ಮುನ್ನಡೆಯನ್ನು 1-2ಕ್ಕೆ ಹೆಚ್ಚಿಸಿದರು. ಆದರೆ, ಹಾಲಿ ಚಾಂಪಿಯನ್ ಎದುರಾಳಿಯ ಮೇಲೆ ಪ್ರತಿ ಸ್ಪರ್ಧೆ ನೀಡಿ 44 ನೇ ನಿಮಿಷದಲ್ಲಿ ಅದ್ಭುತ ಗೋಲು ಗಳಿಸಿ ಮೂರನೇ ಕ್ವಾರ್ಟರ್‌ನ ಕೊನೆಯಲ್ಲಿ ಅದನ್ನು 2-2 ಗೆ ಮಾಡಿದರು.
ನಾಲ್ಕನೇ ಕ್ವಾರ್ಟರ್ ತೀವ್ರ ಪೈಪೋಟಿಯಿಂದ ಕೂಡಿತ್ತು. ಎರಡೂ ತಂಡಗಳು ಡೆಡ್‌ಲಾಕ್ ಅನ್ನು ಮುರಿಯಲು ತೀವ್ರವಾಗಿ ಒತ್ತಡ ಹೇರಿದವು. ನೆದರ್ಲ್ಯಾಂಡ್ಸ್ 46 ನೇ ನಿಮಿಷದಲ್ಲಿ ಬ್ಯಾಕ್-ಟು-ಬ್ಯಾಕ್ ಪೆನಾಲ್ಟಿ ಕಾರ್ನರ್‌ಗಳನ್ನು ಪಡೆದುಕೊಂಡಿತು. ಆದರೆ, ಗೋಲ್ ಆಗಿ ಪರಿವರ್ತಿಸುವಲ್ಲಿ ವಿಫಲವಾಯಿತು. 50ನೇ ನಿಮಿಷದಲ್ಲಿ ಬೆಲ್ಜಿಯಂ ಪೆನಾಲ್ಟಿ ಸ್ಟ್ರೋಕ್ ಕೈ ತಪ್ಪಿದ ಕಾರಣ ಗೋಲ್ಡನ್ ಗೋಲು ಗಳಿಸುವ ಅವಕಾಶವನ್ನೂ ಕಳೆದುಕೊಂಡಿತು. ನಿಗದಿತ ಸಮಯದಲ್ಲಿ ಪಂದ್ಯ 2-2ರಲ್ಲಿ ಕೊನೆಗೊಂಡಿತು. ಪೆನಾಲ್ಟಿ ಶೂಟ್-ಔಟ್ನಲ್ಲಿ ಬೆಲ್ಜಿಯಂ ಮೂರು ಗೋಲ್ ಪಡೆದು ನೆದರ್ಲ್ಯಾಂಡ್ಸ್ ಅನ್ನು ಸೋಲಿಸಿತು.