ಪಾಂಟೆವೆದ್ರಾ(ಸ್ಪೇನ್):ವೀಸಾ ನಿರಾಕರಣೆ ನಡುವೆಯೇ ಭಾರತ ಇಲ್ಲಿ ನಡೆಯುತ್ತಿರುವ 23 ವರ್ಷದೊಳಗಿನ ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಐತಿಹಾಸಿಕ ಪದಕ ಸಾಧನೆ ಮಾಡಿದೆ. 77 ಕೆಜಿ ವಿಭಾಗದಲ್ಲಿ ಭಾರತದ ಗ್ರೀಕೋ ರೋಮನ್ ಕುಸ್ತಿಪಟು ಸಜನ್ ಭನ್ವಾಲಾ ಉಕ್ರೇನ್ ಆಟಗಾರನನ್ನು ಎತ್ತೆಸೆದು ಕಂಚಿನ ಪದಕ ಪಡೆದರು.
ರಿಪಿಚೇಜ್ ಸುತ್ತಿನಲ್ಲಿ ಗ್ರೀಕೋ- ರೋಮನ್ ಕುಸ್ತಿಪಟು ಸಜನ್ ಭನ್ವಾಲಾ, ಉಕ್ರೇನ್ನ ಡಿಮಿಟ್ರೊ ವಸೆಟ್ಸ್ಕಿ ಅವರನ್ನು 10-10 ಪಾಯಿಂಟ್ಗಳಿಂದ ಸೋಲಿಸಿದರು. ಈ ಟೂರ್ನಿಯಲ್ಲಿ ಭಾರತಕ್ಕೆ ಬಂದ ಮೊದಲ ಪದಕ ಇದಾಗಿದೆ.
ಸಜನ್ ಭನ್ವಾಲಾ ಅವರು ಮೊದಲ ಸುತ್ತಿನಲ್ಲಿ ಲಿಥುವೇನಿಯಾದ ಐಸ್ಟಿಸ್ ಲಿಯಾಗ್ಮಿನಾಸ್ ವಿರುದ್ಧ 3- 0 ಅಂತರದ ಗೆಲುವು ಸಾಧಿಸಿದ ನಂತರ, ಮೊಲ್ಡೊವಾದ ಅಲೆಕ್ಸಾಂಡ್ರಿನ್ ಗುಟು ವಿರುದ್ಧ ಪ್ರಿ ಕ್ವಾರ್ಟರ್‌ನಲ್ಲಿ 0-8 ಅಂತರದಲ್ಲಿ ಸೋತಿದ್ದರು.