ಕರ್ನಾಟಕ

karnataka

ETV Bharat / sports

ಹಿಮಾದಾಸ್​ ಮುಡಿಗೆ ಮತ್ತೊಂದು ಸ್ವರ್ಣ: ಒಂದೇ ವಾರದಲ್ಲಿ ಎರಡು ಚಿನ್ನದ ಪದಕ! - ಪೋಲ್ಯಾಂಡ್

ಭಾರತದ ಅಥ್ಲೀಟ್​ ಹಿಮಾದಾಸ್​ ಪೋಲ್ಯಾಂಡ್​​ನಲ್ಲಿ ನಡೆಯುತ್ತಿರುವ ಅಥ್ಲೆಟಿಕ್ಸ್​ ಮೀಟ್​​ನಲ್ಲಿ ಒಂದೇ ವಾರದಲ್ಲಿ ಎರಡು ಚಿನ್ನದ ಪದಕ ಗೆದ್ದು ದಾಖಲೆ ಬರೆದಿದ್ದಾರೆ.

ಹಿಮಾದಾಸ್​

By

Published : Jul 8, 2019, 5:29 PM IST

ಪೊಜ್ನಾನ್​(ಪೋಲ್ಯಾಂಡ್​): ಪೋಲೆಂಡ್‌ನ ಪೊನ್ಝಾನ್‌ ಅಥ್ಲೆಟಿಕ್ಸ್‌ ಗ್ರ್ಯಾಂಡ್‌ ಪ್ರಿಕ್ಸ್‌ನಲ್ಲಿ ಪಾಲ್ಗೊಂಡಿರುವ ಭಾರತದ ಸ್ಟಾರ್​ ಓಟಗಾರ್ತಿ ಹಿಮಾದಾಸ್​ ಒಂದೇ ವಾರದಲ್ಲಿ ಎರಡು ಸ್ವರ್ಣ ಪದಕ ಗೆದ್ದು ದಾಖಲೆ ನಿರ್ಮಾಣ ಮಾಡಿದ್ದಾರೆ.

ಕಳೆದ ಗುರುವಾರ ಅಥ್ಲೆಟಿಕ್ಸ್‌ ಗ್ರ್ಯಾಂಡ್‌ ಪ್ರಿಕ್ಸ್‌ನಲ್ಲಿ ಪಾಲ್ಗೊಂಡಿದ್ದ ಹಿಮಾ, 23.65 ಸೆಕೆಂಡ್‌ಗಳಲ್ಲಿ ರೇಸ್‌ ಪೂರೈಸಿ ಚಿನ್ನ ಮುಡಿಗೇರಿಸಿಕೊಂಡಿದ್ದರು. ಇದೀಗ ಕುಂತೊ ಅಥ್ಲೆಟಿಕ್ಸ್‌ ಕೂಟದಲ್ಲಿನ ಮಹಿಳೆಯರ 200 ಮೀ. ಓಟದಲ್ಲಿ ಬಂಗಾರಕ್ಕೆ ಕೊರಳೊಡ್ಡಿದ್ದಾರೆ.

ಕಳೆದ ಐದು ತಿಂಗಳಿಂದ ಬೆನ್ನು ನೋವಿನ ತೊಂದರೆಯಿಂದ ಬಳಲುತ್ತಿದ್ದ ಹಿಮಾದಾಸ್​​ ಇದೀಗ ಚೇತರಿಸಿಕೊಂಡು ಈ ದಾಖಲೆ ಬರೆದಿದ್ದಾರೆ. ಇನ್ನು ಮತ್ತೊಬ್ಬ ಭಾರತೀಯ ಓಟಗಾರ್ತಿ ವಿಕೆ ವಿಸ್ಮಯಾ 24.06 ಸೆಂಕೆಂಡ್​ಗಳಲ್ಲಿ ತಮ್ಮ ಗುರಿ ಮುಟ್ಟುವ ಮೂಲಕ ಬೆಳ್ಳಿ ಪದಕ ಗೆದ್ದಿದ್ದಾರೆ.

ABOUT THE AUTHOR

...view details