ಕರ್ನಾಟಕ

karnataka

ETV Bharat / sports

15 ದಿನದಲ್ಲಿ 4ನೇ ಚಿನ್ನ ಗೆದ್ದ ಹಿಮಾ ದಾಸ್! - undefined

ಝೆಕ್ ರಿಪಬ್ಲಿಕ್‌ನಲ್ಲಿ ನಡೆದ ಟ್ಯಾಬರ್ ಅಥ್ಲೆಟಿಕ್ಸ್ ಮೀಟ್‌ನ 200 ಮೀ. ಓಟದಲ್ಲಿ ಹಿಮಾ ದಾಸ್​ ಚಿನ್ನದ ಪದಕ ಗೆದ್ದಿದ್ದಾರೆ.

ಹಿಮಾ ದಾಸ್

By

Published : Jul 19, 2019, 11:07 AM IST

ಪ್ರಾಗ್​ (ಝೆಕ್​ ಗಣರಾಜ್ಯ): ಭಾರತದ ಓಟದ ವಿಭಾಗದಲ್ಲಿ ಕ್ರಾಂತಿಯೆಬ್ಬಿಸುತ್ತಿರುವ ಅಸ್ಸೋಂ ಮೂಲದ ಹಿಮಾ ದಾಸ್​ ಕೇವಲ 15 ದಿನಗಳಲ್ಲಿ 4ನೇ ಅಂತಾರಾಷ್ಟ್ರೀಯ ಬಂಗಾರ ಗೆದ್ದಿದ್ದಾರೆ.

ಝೆಕ್ ರಿಪಬ್ಲಿಕ್‌ನಲ್ಲಿ ನಡೆದ ಟ್ಯಾಬರ್ ಅಥ್ಲೆಟಿಕ್ಸ್ ಮೀಟ್‌ನ 200 ಮೀ. ಓಟದಲ್ಲಿ 23.25 ಸೆಕೆಂಡ್​ಗಳಲ್ಲಿ ಗುರಿ ಮುಟ್ಟಿದ ಹಿಮಾ ಚಿನ್ನದ ಪದಕ ಕೊರಳಿಗೇರಿಸಿಕೊಂಡಿದ್ದಾರೆ.

ಜುಲೈ 2ರಂದು ಪೋಲೆಂಡ್​​​ನ ಪೊನ್ಝಾನ್ ಅಥ್ಲೆಟಿಕ್ಸ್ ಗ್ರ್ಯಾಂಡ್ ಪ್ರಿಕ್ಸ್​ನಲ್ಲಿ ಹಿಮಾ ದಾಸ್ 200 ಮೀ. ಓಟವನ್ನು 23.65 ಸೆಕೆಂಡ್​ಗಳಲ್ಲಿ ತಲುಪುವ ಮೂಲಕ ಚಿನ್ನ ಗೆದ್ದಿದ್ದರು. ನಂತರ ಜುಲೈ 7ರಂದು ಕುಂತೊ ಅಥ್ಲೆಟಿಕ್ಸ್ ಕೂಟದ ಮಹಿಳೆಯರ 200 ಮೀ. ಓಟವನ್ನು 23.97 ಸೆಕೆಂಡ್​ನಲ್ಲಿ ತಲುಪಿ ಎರಡನೇ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದರು.

ಕ್ಲಾಡ್ನೋ ಮೆಮೋರಿಯಲ್ ಅಥ್ಲೆಟಿಕ್ಸ್​ನಲ್ಲಿ ಮಹಿಳೆಯರ 200 ಮೀ. ಓಟದ ವಿಭಾಗದಲ್ಲಿ 23.43 ಸೆಕೆಂಡ್​ನಲ್ಲಿ ಗುರಿ ತಲುಪುವ ಮೂಲಕ ಮೂರನೇ ಚಿನ್ನದ ಪದಕ ಪಡೆದುಕೊಂಡಿದ್ದರು.

ಇತ್ತೀಚೆಗೆ ಅಸ್ಸೋಂನಲ್ಲಿ ಉಂಟಾದ ಪ್ರವಾಹ ಸಂತ್ರಸ್ಥರ ನೆರವಿಗಾಗಿ ತನ್ನ ವೇತನದ ಅರ್ಧ ಭಾಗವನ್ನ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಿ ಮಾನವೀಯತೆ ಮೆರೆದಿದ್ದರು.

For All Latest Updates

TAGGED:

ABOUT THE AUTHOR

...view details