ಹೈದರಾಬಾದ್:ದೇಶದ ಸ್ಟಾರ್ ಅಥ್ಲೀಟ್ ಹಿಮಾದಾಸ್ ಟೋಕಿಯೋ ಒಲಿಂಪಿಕ್ಸ್ನಿಂದ ಹೊರಬಿದ್ದಿದ್ದಾರೆ. ಜಾಗತಿಕ ಮಹತ್ವದ ಕ್ರೀಡಾಕೂಟದಲ್ಲಿ ಭಾಗಿಯಾಗುವ ಮೊದಲ ಅವಕಾಶ ಅವರ ಕೈತಪ್ಪಿದೆ.
ಕಳೆದ ತಿಂಗಳು ನಡೆದಿದ್ದ ರಾಷ್ಟ್ರೀಯ ಅಂತಾರಾಜ್ಯ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ಭಾಗಿಯಾಗಿದ್ದ ಸಂದರ್ಭದಲ್ಲಿ 100 ಮೀಟರ್ ಓಟದ ವೇಳೆ ಮಂಡಿ ನೋವಿಗೊಳಗಾಗಿದ್ದು, ಚೇತರಿಸಿಕೊಳ್ಳಲು ಕೆಲ ತಿಂಗಳ ಅವಶ್ಯಕತೆ ಇದೆ. ಹೀಗಾಗಿ ಒಲಿಂಪಿಕ್ಸ್ನಿಂದ ಅವರು ಹೊರಗುಳಿಯುತ್ತಿದ್ದಾರೆ.
ಈ ಸಂಬಂಧ ಟ್ವಿಟ್ ಮಾಡಿರುವ ಹಿಮಾದಾಸ್, ಗಾಯದ ಸಮಸ್ಯೆಯಿಂದಾಗಿ ನಾನು ಮೊದಲ ಒಲಿಂಪಿಕ್ಸ್ ಕ್ರೀಡಾಕೂಟ ತಪ್ಪಿಸಿಕೊಳ್ಳುತ್ತಿದ್ದೇನೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಬಲಿಷ್ಠಳಾಗಿ ಕಮ್ಬ್ಯಾಕ್ ಮಾಡುವೆ ಎಂದಿದ್ದಾರೆ.