ಕರ್ನಾಟಕ

karnataka

By

Published : May 27, 2021, 4:31 PM IST

Updated : May 27, 2021, 5:09 PM IST

ETV Bharat / sports

Sushil ಕುಮಾರ್ ಪ್ರಕರಣದಲ್ಲಿ 'ಮಾಧ್ಯಮ ವಿಚಾರಣೆ' ತಡೆಗೆ ಅರ್ಜಿ: ವಿಚಾರಣೆಗೆ Court​ ಸಮ್ಮತಿ

ಮುಖ್ಯ ನ್ಯಾಯಮೂರ್ತಿ ಡಿ ಎನ್ ಪಟೇಲ್ ಮತ್ತು ನ್ಯಾಯಮೂರ್ತಿ ಜ್ಯೋತಿ ಸಿಂಗ್ ಅವರ ನ್ಯಾಯಪೀಠದ ಮುಂದೆ ಈ ಅರ್ಜಿಯನ್ನು ಉಲ್ಲೇಖಿಸಲಾಗಿದ್ದು, ಇದನ್ನು ಶುಕ್ರವಾರ ವಿಚಾರಣೆ ಮಾಡಲು ಅನುಮತಿ ನೀಡಲಾಗಿದೆ.

ಸುಶೀಲ್ ಕುಮಾರ್
ಸುಶೀಲ್ ಕುಮಾರ್

ನವದೆಹಲಿ: ಕ್ರೀಡಾಪಟು ಸಾಗರ್​ ರಾಣಾ ಸಾವಿನ ಸಂಬಂಧ, ಒಲಿಂಪಿಕ್ ಪದಕ ವಿಜೇತ ಸುಶೀಲ್ ಕುಮಾರ್ ಅವರ ಪಾತ್ರದ ಬಗ್ಗೆ ಮಾಧ್ಯಮಗಳು ಬಿತ್ತರಿಸುತ್ತಿರುವ ಮೀಡಿಯಾ ಟ್ರಯಲ್​ (ಮಾಧ್ಯಮ ವಿಚಾರಣೆ) ವರದಿಗಳು 'ಸಂವೇದನಾಶೀಲಗೊಳಿಸದಂತೆ' ತಡೆಯುವ ಅರ್ಜಿ ವಿಚಾರಣೆಗೆ ದೆಹಲಿ ಹೈಕೋರ್ಟ್ ಸಮ್ಮತ್ತಿಸಿದೆ.

ಕ್ರಿಮಿನಲ್ ಪ್ರಕರಣಗಳನ್ನು ವರದಿ ಮಾಡುವಾಗ ಮಾಧ್ಯಮಗಳು ಅನುಸರಿಸಬೇಕಾದ ನಿಯಮಗಳ ಪಾಲನೆ ಬಗ್ಗೆ ಅರ್ಜಿಯಲ್ಲಿ ಉಲ್ಲೇಖಿಸಲಾಗಿದ್ದು, ಅರ್ಜಿದಾರರ ಮನವಿಯನ್ನು ಕೋರ್ಟ್​ ಪುರಸ್ಕರಿಸಿ ಮೇ 28ರಂದು ಈ ಬಗ್ಗೆ ವಿಚಾರಣೆ ನಡೆಸಲಿದೆ.

ಮುಖ್ಯ ನ್ಯಾಯಮೂರ್ತಿ ಡಿ ಎನ್ ಪಟೇಲ್ ಮತ್ತು ನ್ಯಾಯಮೂರ್ತಿ ಜ್ಯೋತಿ ಸಿಂಗ್ ಅವರ ನ್ಯಾಯಪೀಠದ ಮುಂದೆ ಈ ಅರ್ಜಿಯನ್ನು ಉಲ್ಲೇಖಿಸಲಾಗಿದ್ದು, ಇದನ್ನು ಶುಕ್ರವಾರ ವಿಚಾರಣೆ ಮಾಡಲು ಅನುಮತಿ ನೀಡಲಾಗಿದೆ.

23 ವರ್ಷದ ಕುಸ್ತಿಪಟು ಸಾವಿನ ಪ್ರಕರಣಕ್ಕೆ ಸಂಬಂಧಿಸದಂತೆ ಮಾಧ್ಯಮಗಳು ಸುಶೀಲ್ ಕುಮಾರ್ ವಿರುದ್ಧ ಮಾಧ್ಯಮಗಳು ವರದಿ ಮಾಡುತ್ತಿರುವುದರಿಂದ ಅವರ ವೃತ್ತಿ ಜೀವನ ಮತ್ತು ಖ್ಯಾತಿಗೆ ಧಕ್ಕೆ ಉಂಟಾಗಿದೆ. ಹಾಗಾಗಿ ಇಂತಹ ವರದಿಗಳನ್ನು ತಡೆಯಬೇಕೆಂದು ಕಾನೂನು ವಿದ್ಯಾರ್ಥಿಯೊಬ್ಬರು ನ್ಯಾಯಾಲಯಕ್ಕೆ ಮನವಿಯನ್ನು ಸಲ್ಲಿಸಿದ್ದಾರೆ.

ಮೇ 23 ರಂದು ಸುಶೀಲ್ ಕುಮಾರ್ ಮತ್ತು ಆತನ ಸಹಚರ ಅಜಯ್ ಅವರನ್ನು ದೆಹಲಿ ವಿಶೇಷ ಪೊಲೀಸರ ತಂಡ ಬಂಧಿಸಿತ್ತು. ಇವರನ್ನು ಕೋರ್ಟ್​ ವಿಚಾರಣಗೆಗಾಗಿ ಕೋರ್ಟ್​ 6 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಅನುಮತಿ ನೀಡಿತ್ತು. ಇದೀಗ ಬುಧವಾರ ಈ ಪ್ರಕರಣದಕ್ಕೆ ಸಂಬಂಧಿಸಿದಂತೆ ಸುಶೀಲ್ ಕುಮಾರ್​ರ ನಾಲ್ವರು ಸಹಚರರನ್ನು ಕೂಡ ಬಂಧಿಸಲಾಗಿದೆ.

ಇದನ್ನು ಓದಿ:ಛತ್ರಸಾಲ್ ಕೊಲೆ ಪ್ರಕರಣ: ಕುಸ್ತಿಪಟು ಸುಶೀಲ್ ಕುಮಾರ್​ರ ನಾಲ್ವರು ಸಹಚರರ ಬಂಧನ

Last Updated : May 27, 2021, 5:09 PM IST

ABOUT THE AUTHOR

...view details