ಟೋಕಿಯೊ :ಸೋಮವಾರ ವಿಶ್ವದಾಖಲೆಯೊಂದಿಗೆ ಪ್ಯಾರಾಲಿಂಪಿಕ್ಸ್ನಲ್ಲಿ ಚಿನ್ನದ ಪದಕ ಗೆದ್ದ ಜಾವಲಿನ್ ಥ್ರೋವರ್ ಸುಮಿತ್ ಅಂತಿಲ್ ಅವರಿಗೆ ಹರಿಯಾಣ ಸರ್ಕಾರ 6 ಕೋಟಿ ರೂ., ಬೆಳ್ಳಿ ಗೆದ್ದ ಕಥುನಿಯಾಗೆ 4 ಕೋಟಿ ರೂ. ನಗದು ಬಹುಮಾನ ಮತ್ತು ಸರ್ಕಾರಿ ಕೆಲಸ ನೀಡುವುದಾಗಿ ಘೋಷಿಸಿದೆ.
ಅಂತಿಲ್ ಪುರುಷರ ಜಾವಲಿನ್ F64 ವಿಭಾಗದಲ್ಲಿ 68.55 ಮೀಟರ್ ಎಸೆದು ವಿಶ್ವದಾಖಲೆ ಬರೆದು ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದರು. ಈ ಮೂಲಕ ಭಾರತಕ್ಕೆ ಪ್ಯಾರಾಲಿಂಪಿಕ್ಸ್ನಲ್ಲಿ ಚಿನ್ನದ ಪದಕ ಗೆದ್ದ 5ನೇ ಹಾಗೂ 2ನೇ ಜಾವಲಿನ್ ಥ್ರೋವರ್ ಎನಿಸಿದರು.
ಈ ಮೊದಲು 1972ರಲ್ಲಿ ಈಜುಗಾರ ಮುರಳೀಕಾಂತ್ ಪೆಟ್ಕರ್, 2004 ಮತ್ತು 2012ರಲ್ಲಿ ಜಾವಲಿನ್ ಥ್ರೋವರ್ ದೇವೇಂದ್ರ ಜಜಾರಿಯಾ ಮತ್ತು 2016ರಲ್ಲಿ ಹೈಜಂಪರ್ ಮರಿಯಪ್ಪನ್ ತಂಗವೇಲು ಹಾಗೂ ಈ ಆವೃತ್ತಿಯಲ್ಲಿ ಶೂಟರ್ ಅವನಿ ಲೇಖಾರಾ ಚಿನ್ನದ ಪದಕ ಪಡೆದಿದ್ದರು.