ಕರ್ನಾಟಕ

karnataka

ETV Bharat / sports

ನಟ ಸಿದ್ಧಾರ್ಥ್ ಕ್ಷಮೆ ಕೇಳಿದ್ದರಿಂದ ಸಂತಸವಾಗಿದೆ: ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ - ಸೈನಾ ನೆಹ್ವಾಲ್ ವಿರುದ್ಧದ ಹೇಳಿಕೆ ನಟ ಸಿದ್ಧಾರ್ಥ್ ಕ್ಷಮೆ

ಸಿದ್ಧಾರ್ಥ್ ಕ್ಷಮೆಯಾಚಿಸಿದ್ದಕ್ಕಾಗಿ ಪ್ರತಿಕ್ರಿಯೆ ನೀಡಿರುವ ಸೈನಾ ನೆಹ್ವಾಲ್, ಸಿದ್ಧಾರ್ಥ್ ಕ್ಷಮೆ ಕೇಳಿರುವುದರಿಂದ ಸಂತೋಷವಾಗಿದೆ. ಅವರಿಗೆ ದೇವರು ಒಳ್ಳೆಯದು ಮಾಡಲಿ ಎಂದಿದ್ದಾರೆ.

Happy in my space, god bless him: Saina accepts Siddharth's apology
ನಟ ಸಿದ್ಧಾರ್ಥ್ ಕ್ಷಮೆ ಕೇಳಿದ್ದರಿಂದ ಸಂತೋಷವಾಗಿದೆ: ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್

By

Published : Jan 12, 2022, 1:07 PM IST

ನವದೆಹಲಿ:ಪ್ರಧಾನಮಂತ್ರಿ ಭದ್ರತಾಲೋಪ ವಿಚಾರಕ್ಕೆ ಸಂಬಂಧಿಸಿದಂತೆ ತಾವು ಮಾಡಿದ್ದ ಟ್ವೀಟ್​ಗೆ ಅವಹೇಳನಕಾರಿಯಾಗಿ ಪ್ರತಿಕ್ರಿಯೆ ನೀಡಿದ್ದ ಟಾಲಿವುಡ್ ನಟ ಸಿದ್ಧಾರ್ಥ್ ಕ್ಷಮೆ ಕೇಳಿದ್ದು ಸಂತಸ ತಂದಿದೆ ಎಂದು ಭಾರತೀಯ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಹೇಳಿದ್ದಾರೆ.

ಪ್ರಧಾನಿ ಮೋದಿ ಅವರಿಗೆ ಭದ್ರತಾಲೋಪಕ್ಕೆ ಆಕ್ರೋಶ ವ್ಯಕ್ತಪಡಿಸಿ ಜನವರಿ 5ರಂದು ಟ್ವೀಟ್‌ ಮಾಡಿದ್ದ ಸೈನಾ ನೆಹ್ವಾಲ್ ' ತಮ್ಮ ಪ್ರಧಾನಿಯ ಭದ್ರತೆಗೆ ಧಕ್ಕೆ ಉಂಟಾದರೆ ಯಾವುದೇ ರಾಷ್ಟ್ರವು ತಾನು ಸುರಕ್ಷಿತ ಎಂದು ಹೇಳಿಕೊಳ್ಳುವುದಿಲ್ಲ. ಇದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ಇದು ಮೋದಿ ಮೇಲಿನ ಅರಾಜಕತಾವಾದಿಗಳ ಹೇಡಿತನದ ದಾಳಿ' ಎಂದು ಬೇಸರ ವ್ಯಕ್ತಪಡಿಸಿದ್ದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ನಟ ಸಿದ್ಧಾರ್ಥ್ ಅವಹೇಳನಕಾರಿಯಾಗಿ ಟ್ವೀಟ್ ಮಾಡಿದ್ದರು. ಮಗಳ ಬಗ್ಗೆ ಕೆಟ್ಟದಾಗಿ ಟೀಕೆ ಮಾಡಿದ ಸಿದ್ಧಾರ್ಥ್ ಬಗ್ಗೆ ಪ್ರತಿಕ್ರಿಯಿಸಿದ್ದ ಸೈನಾ ತಂದೆ ಹರ್ವಿರ್ ಸಿಂಗ್, ಸಿದ್ಧಾರ್ಥ್ ಕ್ಷಮೆ ಕೇಳಬೇಕೆಂದು ಆಗ್ರಹಿಸಿದ್ದರು. ಇದಷ್ಟೇ ಅಲ್ಲದೇ ರಾಷ್ಟ್ರೀಯ ಮಹಿಳಾ ಆಯೋಗ ನಟ ಸಿದ್ಧಾರ್ಥ್ ಅವರ ಟ್ವಿಟರ್ ಅಕೌಂಟ್ ಅನ್ನು ಬ್ಲಾಕ್ ಮಾಡುವಂತೆ ಒತ್ತಾಯಿಸಿತ್ತು.

ಇದಾದ ಕೆಲವು ದಿನಗಳ ನಂತರ ಟ್ವಿಟರ್​ನಲ್ಲಿ ಪತ್ರವೊಂದನ್ನು ಲಗತ್ತಿಸಿದ ಸಿದ್ಧಾರ್ಥ್​ ಸೈನಾ ನೆಹ್ವಾಲ್​ ಬಳಿ ಕ್ಷಮೆ ಕೋರಿದ್ದಾರೆ. ನಾನು ದುರುದ್ದೇಶ ಪೂರಕವಾಗಿ ಟ್ವೀಟ್ ಮಾಡಿಲ್ಲ. ನನ್ನ ಅಸಭ್ಯ ಹಾಸ್ಯಕ್ಕಾಗಿ ನಾನು ನಿಮ್ಮಲ್ಲಿ ಕ್ಷಮೆಯಾಚಿಸಲು ಬಯಸುತ್ತೇನೆ ಎಂದಿದ್ದರು.

ಒಳ್ಳೆಯದಾಗಲಿ ಎಂದ ಸೈನಾ

ಸಿದ್ಧಾರ್ಥ್ ಕ್ಷಮೆಯಾಚಿಸಿದ್ದಕ್ಕಾಗಿ ಪ್ರತಿಕ್ರಿಯೆ ನೀಡಿರುವ ಸೈನಾ ನೆಹ್ವಾಲ್, ಸಿದ್ಧಾರ್ಥ್ ಕ್ಷಮೆ ಕೇಳಿರುವುದರಿಂದ ಸಂತೋಷವಾಗಿದೆ. ಅವರಿಗೆ ದೇವರು ಒಳ್ಳೆಯದು ಮಾಡಲಿ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿ:'ನೀವು ಯಾವಾಗಲೂ ನನ್ನ ಚಾಂಪಿಯನ್​': ಸೈನಾ ಕ್ಷಮೆ ಯಾಚಿಸಿದ ನಟ ಸಿದ್ಧಾರ್ಥ್​

ABOUT THE AUTHOR

...view details