ಲಂಡನ್: ಫಾರ್ಮುಲಾ 1 ವಿಶ್ವಚಾಂಪಿಯನ್ ಲೂಯಿಸ್ ಹ್ಯಾಮಿಲ್ಟನ್ ನೈಟ್ಹುಡ್ ಅವಾರ್ಡ್ ಪಡೆಯುವ ಮೂಲಕ ಯುಕೆಯ ಸಾಂಪ್ರದಾಯಿಕ ಗೌರವ ಪಟ್ಟಿಯಲ್ಲಿ ಸೇರಿಕೊಳ್ಳಲಿದ್ದಾರೆ.
ಈ ವರ್ಷ ಅವರು ಅತಿ ಹೆಚ್ಚು ವಿಶ್ವಚಾಂಪಿಯನ್ಶಿಪ್ ಗೆಲ್ಲುವ ಮೂಲಕ ಫಾರ್ಮುಲಾ ಒನ್ ದಂತಕತೆ ಮೈಕಲ್ ಶುಮಾಕರ್ ಅವರ ವಿಶ್ವದಾಖಲೆಯನ್ನು ಸರಿಗಟ್ಟಿದ್ದರು. ಇದೀಗ ಮೊಟ್ಟ ಮೊದಲ ಸಕ್ರಿಯ ಚಾಲಕರಾಗಿ ನೈಟ್ಹುಡ್ ಗೌರವಕ್ಕೆ ಪಾತ್ರರಾಗುತ್ತಿದ್ದಾರೆ.
35 ವರ್ಷದ ಹ್ಯಾಮಿಲ್ಟನ್ ಈ ಪ್ರತಿಷ್ಠಿತ ಪ್ರಶಸ್ತಿಗೆ ಭಾಜನರಾಗುತ್ತಿರುವ 4ನೇ ಕಿರಿಯ ಕ್ರೀಡಾಪಟು ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ. ಎರಡು ಒಲಿಂಪಿಕ್ಸ್ನಲ್ಲಿ ಚಿನ್ನದ ಪದಕ ಪಡೆದಿದ್ದ ಬ್ರಿಟನ್ ಟೆನ್ನಿಸ್ ತಾರೆ 29ನೇ ವಯಸ್ಸಿನಲ್ಲಿ ನೈಟ್ಹುಡ್ ಗೌರವಕ್ಕೆ ಪಾತ್ರರಾಗಿದ್ದರು. ಸೈಕ್ಲಿಸ್ಟ್ಗಳಾದ ಬ್ರ್ಯಾಡ್ಲೀ ವಿಗ್ಗಿನ್ಸ್ ಮತ್ತು ಕ್ರಿಸ್ ಹೋಯ್ 32ನೇ ವಯಸ್ಸಿನಲ್ಲಿ ಈ ಪ್ರತಿಷ್ಠಿತ ಗೌರವ ಪಡೆದಿದ್ದರು.
ಜ್ಯಾಕ್ ಬ್ರಾಭಮ್ (1978), ಸ್ಟಿರ್ಲಿಂಗ್ ಮಾಸ್ (2000), ಜಾಕಿ ಸ್ಟೀವರ್ಟ್ (2001) ನಂತರ ನೈಟ್ಹುಡ್ ಪ್ರಶಸ್ತಿಗೆ ಭಾಜನರಾಗುತ್ತಿರುವ 4ನೇ ಫಾರ್ಮುಲಾ 1ಚಾಲಕರಾಗಿದ್ದಾರೆ. ಹಾಗೂ 6ನೇ ಫಾರ್ಮುಲಾ ಒನ್ ಕ್ರೀಡಾಪಟುವಾಗಿದ್ದಾರೆ. ಎಫ್ 1 ವಿಲಿಯಮ್ಸ್ ತಂಡದ ಸಹ-ಸಂಸ್ಥಾಪಕರಾದ ಫ್ರಾಂಕ್ ವಿಲಿಯಮ್ಸ್ ಮತ್ತು ಪ್ಯಾಟ್ರಿಕ್ ಹೆಡ್ ಕ್ರಮವಾಗಿ 1999 ಮತ್ತು 2015 ರಲ್ಲಿ ನೈಟ್ಹುಟ್ ಆಗಿದ್ದಾರೆ.