ಅಡಿಲೇಡ್(ಆಸ್ಟ್ರೇಲಿಯಾ):ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ 5 ಪಂದ್ಯಗಳ ಹಾಕಿ ಟೆಸ್ಟ್ನಲ್ಲಿ ಭಾರತ 2ನೇ ಸೋಲನುಭವಿಸಿದೆ. ಅಡಿಲೇಡ್ನಲ್ಲಿ ಇಂದು ನಡೆದ ಪಂದ್ಯದಲ್ಲಿ ಬ್ಲೇಕ್ ಗೋವರ್ಸ್ರ ಹ್ಯಾಟ್ರಿಕ್ ಗೋಲುಗಳ ಸಹಾಯದಿಂದ ಆಸೀಸ್ ಪಡೆ 7- 4 ಗೋಲುಗಳಿಂದ ಗೆಲುವು ಸಾಧಿಸಿತು.
ಮೊದಲ ಹಾಕಿ ಪಂದ್ಯದ ಕೊನೆಯ ಕ್ಷಣದಲ್ಲಿ ಮಾಡಿದ ಎಡವಟ್ಟಿನಿಂದಾಗಿ ಭಾರತ 4-5 ರ ಗೋಲುಗಳಿಂದ ಸೋಲನುಭವಿಸಿತ್ತು. 2 ನೇ ಪಂದ್ಯದಲ್ಲೂ ಆಸ್ಟ್ರೇಲಿಯಾದ ಆಟಗಾರರು ಹರ್ಮನ್‌ಪ್ರೀತ್ ಸಿಂಗ್ ತಂಡದ ಮೇಲೆ ಸವಾರಿ ಮಾಡಿ ಪಾರಮ್ಯ ಮೆರೆದರು. ಇದರಿಂದ ಸರಣಿಯಲ್ಲಿ ಭಾರತ 2-0 ಯಲ್ಲಿ ಹಿನ್ನಡೆ ಅನುಭವಿಸಿತು.
ಪಂದ್ಯ ಆರಂಭವಾದ ಮೂರೇ ನಿಮಿಷದಲ್ಲಿ ಭಾರತ ಸಿಕ್ಕ ಪೆನಾಲ್ಟಿ ಕಾರ್ನರ್ ಅನ್ನು ಬಳಸಿಕೊಂಡು 1-0 ಗೋಲುಗಳಿಂದ ಮುನ್ನಡೆ ಸಾಧಿಸಿತು. ಬಳಿಕ ಕಾಂಗರೂ ಪಡೆಯ ಬ್ಲೇಕ್ ಗೋವರ್ಸ್ 12, 27, 53 ನೇ ನಿಮಿಷದಲ್ಲಿ ಗೋಲು ಗಳಿಸಿ ಭಾರತವನ್ನು ಕಾಡಿದರೆ, ವೆಲ್ಚ್ 17, 24 ನೇ ನಿಮಿಷ, ಜಾಕೋಬ್ ಆ್ಯಂಡರ್ಸನ್ 48 ನೇ ನಿಮಿಷ, ಜೇಕ್ ವೆಟ್ಟನ್ 49ನೇ ನಿಮಿಷದಲ್ಲಿ ಗೋಲು ಬಾರಿಸಿದರು.
ಭಾರತದ ಪರವಾಗಿ ಹಾರ್ದಿಕ್ ಸಿಂಗ್ (25ನೇ ನಿ) ಮೊಹಮ್ಮದ್ ರಹೀಲ್ (36ನೇ ನಿ), ನಾಯಕ ಹರ್ಮನ್‌ಪ್ರೀತ್ ಪಂದ್ಯದ ಅಂತಿಮದಲ್ಲಿ (60ನೇ ನಿ) ಪೆನಾಲ್ಟಿ ಮೂಲಕ ಗೋಲು ಗಳಿಸಿದರು. ವಿಶ್ವ ನಂಬರ್ ಒನ್ ತಂಡವಾದ ಆಸ್ಟ್ರೇಲಿಯಾ, ಭಾರತದ ವಿರುದ್ಧ 12 ನೇ ನೇರ ಗೆಲುವು ಸಾಧಿಸಿತು. 5 ಪಂದ್ಯಗಳ ಸರಣಿಯನ್ನು ಜೀವಂತವಾಗಿಡಲು ಮುಂದಿನ 2 ಪಂದ್ಯಗಳನ್ನು ಗೆಲ್ಲಲೇಬೇಕಾಗಿದೆ. ಸರಣಿಯ ಮೂರನೇ ಹಾಕಿ ಟೆಸ್ಟ್ ಬುಧವಾರ ನಡೆಯಲಿದೆ.
ಓದಿ:IND vs NZ: ಹ್ಯಾಮಿಲ್ಟನ್ ಏಕದಿನ ಪಂದ್ಯ ಮಳೆಗೆ ಆಹುತಿ