ಕರ್ನಾಟಕ

karnataka

14 ವರ್ಷದ ಬಾಲಕ ಲಿಯಾನ್ ಮೆಂಡೊಂಕಾ ಭಾರತದ 67ನೇ ಗ್ರಾಂಡ್​ ಮಾಸ್ಟರ್​

ಮೆಂಡೊಂಕಾ ತಮ್ಮ 14ನೇ ವರ್ಷದಲ್ಲಿ(14 ವರ್ಷ 9 ತಿಂಗಳು ಹಾಗೂ 17 ದಿನಗಳು) ಈ ಸಾಧನೆ ಮಾಡಿದ್ದಾರೆ. ಅವರು ಗೋವಾ ರಾಜ್ಯದ 2ನೇ ಗ್ರ್ಯಾಂಡ್​ ಮಾಸ್ಟರ್​ ಎನಿಸಿಕೊಂಡಿದ್ದಾರೆ.

By

Published : Dec 31, 2020, 6:49 PM IST

Published : Dec 31, 2020, 6:49 PM IST

ಗ್ರಾಂಡ್ ಮಾಸ್ಟರ್​  ಲಿಯಾನ್ ಮೆಂಡೊಂಕಾ
ಗ್ರಾಂಡ್ ಮಾಸ್ಟರ್​ ಲಿಯಾನ್ ಮೆಂಡೊಂಕಾ

ಚೆನ್ನೈ: ಇಟಲಿಯಲ್ಲಿ ನಡೆದ ಟೂರ್ನಮೆಂಟ್​ನಲ್ಲಿ ಗೋವಾದ 14 ವರ್ಷದ ಲಿಯಾನ್ ಮೆಂಡೊಂಕಾ ಫೈನಲ್​ ಪಂದ್ಯ ಗೆಲ್ಲುವ ಮೂಲಕ ಭಾರತದ 67ನೇ ಚೆಸ್ ಗ್ರ್ಯಾಂಡ್ ಮಾಸ್ಟರ್ ಎನಿಸಿಕೊಂಡಿದ್ದಾರೆ.

ಮೆಂಡೊಂಕಾ ತಮ್ಮ 14ನೇ ವರ್ಷದಲ್ಲಿ (14 ವರ್ಷ 9 ತಿಂಗಳು ಹಾಗೂ 17ದಿನಗಳು) ಈ ಸಾಧನೆ ಮಾಡಿದ್ದಾರೆ. ಅವರು ಗೋವಾ ರಾಜ್ಯದ 2ನೇ ಗ್ರ್ಯಾಂಡ್​ ಮಾಸ್ಟರ್​ ಎನಿಸಿಕೊಂಡಿದ್ದಾರೆ.

ಅಕ್ಟೋಬರ್​ನಲ್ಲಿ ಈ ಆಟಗಾರ ತಮ್ಮ ಮೊದಲ ಜಿಮ್​ ನಾರ್ಮ್​ ಗೆದ್ದಿದ್ದರು. ನವೆಂಬರ್​ನಲ್ಲಿ ಎರಡನೇ ಜಿಎಂ ಹಾಗೂ ಮೂರನೇ ಜಿಎಂ ಅನ್ನು ಇಟಲಿಯಲ್ಲಿ ಗೆಲ್ಲುವ ಮೂಲಕ ಭಾರತದ 67ನೇ ಗ್ರ್ಯಾಂಡ್​ ಮಾಸ್ಟರ್​ ಎನ್ನಿಸಿಕೊಂಡಿದ್ದಾರೆ.

ಕೊರೊನಾ ವೈರಸ್ ಪರಿಣಾಮ ಜಾರಿಯಾದ ಲಾಕ್‌ಡೌನ್ ಮತ್ತು ಪ್ರಯಾಣದ ನಿರ್ಬಂಧಗಳ ಹಿನ್ನೆಲೆಯಲ್ಲಿ ಮೆಂಡೊಂಕಾ ಮತ್ತು ಅವರ ತಂದೆ ಲಿಂಡನ್ ಮಾರ್ಚ್​ನಿಂದಲೂ ಯುರೋಪ್​ನಲ್ಲಿ ಸಿಲುಕಿಕೊಂಡಿದ್ದರು. ಆದರೆ ಇದನ್ನು ಅನುಕೂಲಕ್ಕೆ ಬಳಸಿಕೊಂಡ ಅವರು ಗ್ರ್ಯಾಂಡ್​ ಮಾಸ್ಟರ್ ​(ಜಿಎಂ) ಪ್ರಶಸ್ತಿಯನ್ನು ಪಡೆಯುವ ಉದ್ದೇಶದಿಂದ ಹಲವು ಟೂರ್ನಮೆಂಟ್​ಗಳಲ್ಲಿ ಪಾಲ್ಗೊಂಡಿದ್ದರು.

ಮಾರ್ಚ್​ನಿಂದ ಡಿಸೆಂಬರ್​ವರೆಗೆ ಒಂಭತ್ತು ತಿಂಗಳ ಅವಧಿಯಲ್ಲಿ ಮೆಂಡೊಂಕಾ 16 ಟೂರ್ನಮೆಂಟ್​ಗಳಲ್ಲಿ ಆಡಿದ್ದು, ತಮ್ಮ ಇಎಲ್​ಒ ರೇಟಿಂಗ್ ಪಾಯಿಂಟ್​ ಅನ್ನು 2432 ರಿಂದ 2544ಕ್ಕೆ ಏರಿಸಿಕೊಂಡಿದ್ದರು.

ABOUT THE AUTHOR

...view details