ಕರ್ನಾಟಕ

karnataka

ETV Bharat / sports

ವಿಶ್ವ ಯೂತ್ ಬಾಕ್ಸಿಂಗ್​ನಲ್ಲಿ ಚಿನ್ನದ ಪದಕಕ್ಕೆ ಮುತ್ತಿಕ್ಕಿದ ಗೀತಿಕಾ - ಬಾಬಿರೋಜಿಸಾನಾ

ಫೈನಲ್​ ಪಂದ್ಯದಲ್ಲಿ ಸಂಪೂರ್ಣ ಪ್ರಾಬಲ್ಯ ಸಾಧಿಸಿದ ಗೀತಿಕಾ 5-0 ಅಂತರದಲ್ಲಿ ಪೋಲೆಂಡ್​ನ ನಟಾಲಿಯಾ ಕುಕ್ಜೆವ್​ಸ್ಕಾರನ್ನು ಮಣಿಸಿದರೆ, ಬಾಬಿರೋಜಿಸಾನಾ ರಷ್ಯಾದ ವಲೇರಿಯಾ ಲಿಂಕೋವಾರನ್ನು ಇಷ್ಟೇ ಅಂಕಗಳ ಅಂತರದಿಂದ ಮಣಿಸಿ ಚಾಂಪಿಯನ್​ ಆಗಿ ಹೊರಹೊಮ್ಮಿದರು.

ವಿಶ್ವ ಯೂತ್ ಬಾಕ್ಸಿಂಗ್​
ವಿಶ್ವ ಯೂತ್ ಬಾಕ್ಸಿಂಗ್​

By

Published : Apr 22, 2021, 10:05 PM IST

Updated : Apr 22, 2021, 11:01 PM IST

ನವದೆಹಲಿ: ಭಾರತೀಯ ಮಹಿಳಾ ಸ್ಟಾರ್​ ಬಾಕ್ಸರ್​ ಗೀತಿಕಾ(48 ಕೆಜಿ) ಮತ್ತು ಬಾಬಿರೋಜಿಸಾನಾ ಚಾನು(51 ಕೆಜಿ) ಪೋಲೆಂಡ್​ನ ಕೀಲ್ಸ್​ನಲ್ಲಿ ನಡೆದ ವಿಶ್ವ ಯೂತ್​ ಚಾಂಪಿಯನ್​ಶಿಪ್​ನಲ್ಲಿ ಗುರುವಾರ ಚಿನ್ನದ ಪದಕ ಪಡೆದಿದ್ದಾರೆ.

ಫೈನಲ್​ ಪಂದ್ಯದಲ್ಲಿ ಸಂಪೂರ್ಣ ಪ್ರಾಬಲ್ಯ ಸಾಧಿಸಿದ ಗೀತಿಕಾ 5-0 ಅಂತರದಲ್ಲಿ ಪೋಲೆಂಡ್​ನ ನಟಾಲಿಯಾ ಕುಕ್ಜೆವ್​ಸ್ಕಾ ರನ್ನು ಮಣಿಸಿದರೆ, ಬಾಬಿರೋಜಿಸಾನಾ ರಷ್ಯಾದ ವಲೇರಿಯಾ ಲಿಂಕೋವಾರನ್ನು ಇಷ್ಟೇ ಅಂಕಗಳ ಅಂತರದಿಂದ ಮಣಿಸಿ ಚಾಂಪಿಯನ್​ ಆಗಿ ಹೊರಹೊಮ್ಮಿದರು.

ಆತಿಥೇಯ ರಾಷ್ಟ್ರ ಕುಕ್ಜೆವ್​ಸ್ಕಾ ವಿರುದ್ಧ ಉತ್ತಮ ಪಾದ ಚಲನೆ ಮತ್ತು ಸಮತೋಲನದಿಂದ ಪ್ರಾಬಲ್ಯ ಸಾಧಿಸಿದ ಗೀತಿಕಾ ಎದುರಾಳಿಗೆ ಯಾವುದೇ ಹಂತದಲ್ಲಿ ಮೇಲುಗೈ ಸಾಧಿಸಲು ಅವಕಾಶ ನೀಡಲಿಲ್ಲ. ಮೂರನೇ ಸುತ್ತಿನಲ್ಲಿ ಗೀತಿಕಾ ಹೊಡೆದ ಪಂಚ್​ಗೆ ಕುಕ್ಜೆವ್​ಸ್ಕಾ ಮೂಗಲ್ಲಿ ರಕ್ತ ಕಾರಿತು. ಆರಂಭದಿಂದಲೂ ಆಕ್ರಮಣಕಾರಿಯಾಗಿ ಆಡಿದ ಅವರು ಭಾರತಕ್ಕೆ ಮೊದಲ ಪದಕ ತಂದುಕೊಟ್ಟರು.

ಮತ್ತೊಂದೆಡೆ, ಬಾಬಿರೋಜಿಸಾನಾ ರಷ್ಯನ್ ಬಾಕ್ಸರ್​ನಿಂದ ತೀವ್ರವಾದ ಪೈಪೋಟಿ ಎದುರಿಸಿದರು. ಆದರೂ ಮೇರಿ ಕೋಮ್ ಗರಡಿಯಲ್ಲಿ ಪಳಗಿರುವ ಮಣಿಪುರಿ ಬಾಕ್ಸರ್​ ಲಿಂಕೋವರನ್ನು ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾದರು.

ಈ ಟೂರ್ನಿಯಲ್ಲಿ ಒಟ್ಟಾರೆ ಭಾರತದ 7 ಮಹಿಳಾ ಬಾಕ್ಸರ್​ಗಳು ಮತ್ತು ಪುರಷರಲ್ಲಿ ಸಚಿನ್​(56ಕೆಜಿ) ಫೈನಲ್ ಪ್ರವೇಶಿಸಿದ್ದರು.

Last Updated : Apr 22, 2021, 11:01 PM IST

ABOUT THE AUTHOR

...view details