‘ಹಲೋ ಬಾಯ್!! ಈ ಪ್ರಪಂಚಕ್ಕೆ ಸ್ವಾಗತ. ಆತನು ಬಂದನು. ನಾವು ಪ್ರೇಮದಲ್ಲಿ ಮುಳುಗಿದ್ದೇವೆ. ನಮ್ಮ ಮಗುವಿಗೆ ನಿಮ್ಮ ಪ್ರೀತಿ, ಆಶೀರ್ವಾದ ನೀಡಿ. ನಮ್ಮ ಮಗು ನಮ್ಮ ಜೀವನವನ್ನ ಪರಿಪೂರ್ಣ ಮಾಡಿದ್ದಾನೆ. ಮಗುವಿಗೆ ಜನ್ಮ ನೀಡುವುದಕ್ಕಿಂತ ಉತ್ತಮವಾದ ಭಾವನೆ ಇಲ್ಲ’ ಅಂತಾ ಗೀತಾ ಪೋಗಾಟ್ ಫೋಟೋ ಜೊತೆ ಬರಹ ಬರೆದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.
ಪೋಗಾಟ್ ಕುಟುಂಬಕ್ಕೆ ಜ್ಯೂನಿಯರ್ ಕುಸ್ತಿಪಟು ಎಂಟ್ರಿ... ಸಹೋದರಿಗೆ ಶುಭಾಶಯ ತಿಳಿಸಿದ ಬಬಿತಾ! - Geeta Phogat blessed with baby boy,
ಕುಸ್ತಿತಿಗಳಾದ ಗೀತಾ ಪೋಗಾಟ್ ಕುಟುಂಬಕ್ಕೆ ಜ್ಯೂನಿಯರ್ ಕುಸ್ತಿಪಟು ಬಂದಿದ್ದು, ಕುಟುಂಬಸ್ಥರಲ್ಲಿ ಸಂತಸ ಮೂಡಿದೆ.
ಕೃಪೆ: Twitter
ಇನ್ನು ಇವರ ಪೋಸ್ಟ್ಗೆ ಅಭಿಮಾನಿಗಳು ಶುಭಾಶಯ ಹೇಳಿದ್ದಾರೆ. ಕುಸ್ತಿಪಟು ಬಬಿತಾ ದಂಪತಿಗೆ ಅಭಿನಂದಿಸಿದ್ದಾರೆ. 2010ರಲ್ಲಿ ಕಾಮಾನ್ವೆಲ್ತ್ ಕ್ರೀಡೆಯಲ್ಲಿ ಸ್ವರ್ಣ ಪದಕ ಗೆದ್ದ ಭಾರತದ ಮೊದಲ ಮಹಿಳಾ ಕುಸ್ತಿಪಟುವಾಗಿ ಗೀತಾ ದಾಖಲೆ ಬರೆದಿದ್ದಾರೆ. ಬಳಿಕ ಕೆನಾಡಾದಲ್ಲಿ ನಡೆದ ವಿಶ್ವ ಚಾಂಪಿಯನ್ಶಿಪ್ನಲ್ಲಿ ಕಂಚು ಗೆದ್ದರು. ಗೀತಾ ಕುಟುಂಬ ಸದಸ್ಯರೆಲ್ಲ ಕುಸ್ತಿಪಟು ಎಂಬುದು ಗಮನಾರ್ಹ.