ನವದೆಹಲಿ:ಭಾರತದ ಮಾಜಿ ಬ್ಯಾಟ್ಸ್‌ಮನ್ ಮತ್ತು ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಸಂಸದ ಗೌತಮ್ ಗಂಭೀರ್ (Gautam Gambir) ನವೆಂಬರ್ 18 ರಂದು ರಾಜಧಾನಿಯಲ್ಲಿ ಮೊದಲ ಪೂರ್ವ ದೆಹಲಿ ಪ್ರೀಮಿಯರ್ ಲೀಗ್ ಅನ್ನು (East Delhi Premier League) ಉದ್ಘಾಟಿಸಿದರು.
ಪೂರ್ವ ದೆಹಲಿ ಪ್ರೀಮಿಯರ್ ಲೀಗ್ಗೆ ಚಾಲನೆ.. ಹೊಸ ಪ್ರತಿಭೆ ಹುಡುಕಾಟದಲ್ಲಿ ಗೌತಮ್ ಗಂಭೀರ್! - ಇಡಿಪಿಎಲ್
ನಿನ್ನೆಯಿಂದ ಪೂರ್ವ ದೆಹಲಿ ಪ್ರೀಮಿಯರ್ ಲೀಗ್ಗೆ (East Delhi Premier League) ಭಾರತದ ಮಾಜಿ ಬ್ಯಾಟ್ಸ್‌ಮನ್ ಗೌತಮ್ ಗಂಭೀರ್ (Gautam Gambir) ಚಾಲನೆ ನೀಡುವ ಮೂಲಕ ಹೊಸ ಪ್ರತಿಭೆ ಹುಡುಕಾಟದಲ್ಲಿ ತೊಡಗಿದ್ದಾರೆ.
![ಪೂರ್ವ ದೆಹಲಿ ಪ್ರೀಮಿಯರ್ ಲೀಗ್ಗೆ ಚಾಲನೆ.. ಹೊಸ ಪ್ರತಿಭೆ ಹುಡುಕಾಟದಲ್ಲಿ ಗೌತಮ್ ಗಂಭೀರ್! East Delhi Premier League, Gautam Gambir, EDPL, Yamuna sports complex, ಪೂರ್ವ ದೆಹಲಿ ಪ್ರೀಮಿಯರ್ ಲೀಗ್, ಗೌತಮ್ ಗಂಭೀರ್, ಇಡಿಪಿಎಲ್, ಯಮುನಾ ಕ್ರೀಡಾ ಸಂಕೀರ್ಣ,](https://etvbharatimages.akamaized.net/etvbharat/prod-images/768-512-13674408-thumbnail-3x2-edpl.jpg)
ಪೂರ್ವ ದೆಹಲಿ ಪ್ರೀಮಿಯರ್ ಲೀಗ್ಗೆ ಚಾಲನೆ
ಪೂರ್ವ ದೆಹಲಿ ಪ್ರೀಮಿಯರ್ ಲೀಗ್ಗೆ ಚಾಲನೆ ನೀಡಿದ ಗೌತಮ್ ಗಂಭೀರ್
ನವದೆಹಲಿಯ ಯಮುನಾ ಕ್ರೀಡಾ ಸಂಕೀರ್ಣದಲ್ಲಿ (Yamuna sports complex) ನಡೆಸಲಾಗುತ್ತಿರುವ ಈ ಪಂದ್ಯಾವಳಿಯಲ್ಲಿ ಸುಮಾರು 14ಕ್ಕೂ ಹೆಚ್ಚು ತಂಡಗಳು ಭಾಗವಹಿಸಿವೆ. ಹೊಸದಾಗಿ ತಯಾರಿಸಿದ ಯಮುನಾ ಕ್ರೀಡಾ ಸಂಕೀರ್ಣದಲ್ಲಿ ನಡೆಯಲಿರುವ ಇಡಿಪಿಎಲ್ (EDPL) ಮೂಲಕ ನಾವು ಹೊಸ ಪ್ರತಿಭೆ ಹುಡುಕುತ್ತಿದ್ದೇವೆ. ಉತ್ತಮ ಆಟಗಾರರಿಗೆ ಇಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದು ಗೌತಮ್ ಗಂಭೀರ್ ಹೇಳಿದ್ದಾರೆ.
ಈ ಪಂದ್ಯಾವಳಿಯಲ್ಲಿ ವಿಜೇತರಿಗೆ 30 ಲಕ್ಷ ರೂಪಾಯಿ ಮತ್ತು ರನ್ನರ್ಸ್ ಅಪ್‌ಗೆ 20 ಲಕ್ಷ ರೂಪಾಯಿ ಬಹುಮಾನ ನೀಡಲಾಗುವುದು ಎಂದು ಗೌತಮ್ ಗಂಭೀರ್ (Gautam Gambir) ಹೇಳಿದ್ದಾರೆ.