ಕರ್ನಾಟಕ

karnataka

ETV Bharat / sports

French Open 2023: ಮಹಿಳಾ ಸಿಂಗಲ್ಸ್ ಫೈನಲ್ಸ್​ನಲ್ಲಿ ಕುತೂಹಲದ ಕಾದಾಟ.. ಹಾಲಿ ಚಾಂಪಿಯನ್​ ಇಗಾ ವಿರುದ್ಧ ಮುಚೋವಾ ಕಣಕ್ಕೆ - ETV Bharath Karnataka

ಇಂದು ಫ್ರೆಂಚ್ ಓಪನ್ 2023 ರ ಮಹಿಳಾ ಸಿಂಗಲ್ಸ್ ಫೈನಲ್‌ನಲ್ಲಿ ಹಾಲಿ ಚಾಂಪಿಯನ್ ಇಗಾ ಸ್ವಿಯಾಟೆಕ್ ಅವರು ಕ್ಯಾರೊಲಿನ್ ಮುಚೋವಾ ಅವರನ್ನು ಎದುರಿಸಲಿದ್ದಾರೆ.

French Open 2023
ಮಹಿಳಾ ಸಿಂಗಲ್ಸ್ ಫೈನಲ್ಸ್​ನಲ್ಲಿ ಕುತೂಹಲದ ಕಾದಾಟ

By

Published : Jun 10, 2023, 3:15 PM IST

ಪ್ಯಾರಿಸ್: ಫ್ರೆಂಚ್ ಓಪನ್ 2023 ರ ಮಹಿಳಾ ಸಿಂಗಲ್ಸ್ ಫೈನಲ್‌ನಲ್ಲಿ ಇಂದು ಇಬ್ಬರು ಶ್ರೇಷ್ಠ ಆಟಗಾರ್ತಿಯರು ಸ್ಪರ್ಧಿಸಲಿದ್ದಾರೆ. ಇದರಲ್ಲಿ ಹಾಲಿ ಚಾಂಪಿಯನ್ ಇಗಾ ಸ್ವಿಯಾಟೆಕ್ ಅವರು ಕ್ಯಾರೊಲಿನ್ ಮುಚೋವಾ ಅವರನ್ನು ಎದುರಿಸಲಿದ್ದಾರೆ.

ಕ್ಲೇ ಕೋರ್ಟ್ ಗ್ರ್ಯಾಂಡ್ ಸ್ಲಾಮ್‌ನ ಅಗ್ರ ಪಂದ್ಯದಲ್ಲಿ ಜೆಕ್ ಗಣರಾಜ್ಯದ ಮುಚೋವಾ ವಿರುದ್ಧ ಪೋಲೆಂಡ್‌ನ ಸ್ವಿಯಾಟೆಕ್ ನಾಲ್ಕನೇ ಪ್ರಶಸ್ತಿಯನ್ನು ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ. ಆದರೆ ಮುಚೋವಾ ತಮ್ಮ ಮೊದಲ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿಯನ್ನು ಗೆಲ್ಲುವ ಹಂಬಲದಲ್ಲಿದ್ದಾರೆ. 43ನೇ ಶ್ರೇಯಾಂಕದ ಕರೋಲಿನಾ ಮುಚೋವಾ ಅವರು ಸೆಮಿಫೈನಲ್‌ನಲ್ಲಿ ನಂ. 2 ಅರೀನಾ ಸಬಲೆಂಕಾ ವಿರುದ್ಧ ಮೂರು ಸೆಟ್‌ಗಳ ಗೆಲುವು ಸಾಧಿಸಿ ಫೈನಲ್​ ಪ್ರವೇಶ ಪಡೆದಿದ್ದಾರೆ.

ಹಾಲಿ ಚಾಂಪಿಯನ್ ಪೋಲೆಂಡ್‌ನ ಇಗಾ ಸ್ವಿಯಾಟೆಕ್ ತಮ್ಮ ಮೂರನೇ ಫ್ರೆಂಚ್ ಓಪನ್ ಪ್ರಶಸ್ತಿಯನ್ನು ಗೆದ್ದು ವಿಶ್ವದ ನಂ.1 ಆಟಗಾರ್ತಿಯಾಗುವ ಗುರಿಯನ್ನು ಹಾಕಿಕೊಂಡಿದ್ದಾರೆ. ಇಗಾ ಒಂದೂ ಸೆಟ್ ಕಳೆದುಕೊಳ್ಳದೆ ಫೈನಲ್ ತಲುಪಿದ್ದಾರೆ. ಹೀಗಾಗಿ ಇಗಾ ಅವರಿಗೆ ಗೆಲುವಿನ ವಿಶ್ವಾಸ ಹೆಚ್ಚಿದೆ. ಮತ್ತೆ ಫ್ರೆಂಚ್ ಓಪನ್ ಪ್ರಶಸ್ತಿ ಮುಡಿಗೇರಿಸಿಕೊಳ್ಳಲು ಸಿದ್ಧತೆ ನಡೆಸುತ್ತಿದ್ದಾರೆ. 2015-2016ರಲ್ಲಿ ಸೆರೆನಾ ವಿಲಿಯಮ್ಸ್ ನಂತರ ಪ್ಯಾರಿಸ್‌ನಲ್ಲಿ 13 ನೇರ ಪಂದ್ಯಗಳನ್ನು ಗೆದ್ದ ಮೊದಲ ಮಹಿಳೆ ಇಗಾ ಸ್ವಿಯಾಟೆಕ್ ಆಗಿದ್ದಾರೆ.

"ನನಗೆ ಹೇಗಾದರೂ ಕರೋಲಿನಾ ಅವರ ಆಟ ತಿಳಿದಿದೆ ಎಂದು ನಾನು ಭಾವಿಸುತ್ತೇನೆ, ಏಕೆಂದರೆ ನಾನು 2019 ರಿಂದ ಅವಳೊಂದಿಗೆ ಸಾಕಷ್ಟು ಅಭ್ಯಾಸ ಪಂದ್ಯಗಳನ್ನು ಆಡಿದ್ದೇನೆ. ನಿಜ ಹೇಳಬೇಕೆಂದರೆ, ನಾನು ಅವಳ ಆಟವನ್ನು ನಿಜವಾಗಿಯೂ ಇಷ್ಟಪಡುತ್ತೇನೆ. ನಾನು ಅವಳನ್ನು ನಿಜವಾಗಿಯೂ ಗೌರವಿಸುತ್ತೇನೆ ಮತ್ತು ಅವಳು ನನಗೆ ಪ್ರಬಲವಾದ ಎದುರಾಳಿ ಆಗಬಲ್ಲಳು. ನನೆಗೆ ತಿಳಿದಿದಂತೆ ಅವಳು ಉತ್ತಮ ಆಟದ ಯೋಜನೆಯನ್ನು ಹೊಂದಿದ್ದಾಳೆ" ಎಂದು ಸ್ವಿಯಾಟೆಕ್ ಶುಕ್ರವಾರ ಫೈನಲ್‌ಗಾಗಿ ಹೇಳಿದರು.

"ಅವಳು ಅಂತಹ ಸ್ವಾತಂತ್ರ್ಯದಿಂದ ಆಡುತ್ತಾಳೆ ಮತ್ತು ಅವಳು ಉತ್ತಮ ತಂತ್ರವನ್ನು ಹೊಂದಿದ್ದಾಳೆ. ನಾನು ಅವಳ ಪಂದ್ಯಗಳನ್ನು ನೋಡಿದೆ ಮತ್ತು ನನಗೆ ಅವಳ ಆಟವನ್ನು ಚೆನ್ನಾಗಿ ತಿಳಿದಿದೆ. ಆದರೆ ನಿಸ್ಸಂಶಯವಾಗಿ, ಈ ಪಂದ್ಯವು ವಿಭಿನ್ನವಾಗಿರುತ್ತದೆ. ನಾನು ಆಕೆಯನ್ನು ಎದುರಿಸಲು ಸಂಪೂರ್ಣವಾಗಿ ಸಿದ್ಧಳಿದ್ದೇನೆ" ಎಂದ ಇಗಾ ಹೇಳಿಕೊಂಡಿದ್ದಾರೆ.

ಮುಚೋವಾ ಮಾತನಾಡಿ, "ನಾನು ಇಗಾ ವಿರುದ್ಧ ಸಮರ್ಥವಾಗಿ ಆಡಬಲ್ಲೆ ಎಂದು ಇದು ನನಗೆ ತೋರಿಸುತ್ತದೆ. ನಾನು ಸ್ಪರ್ಧಿಸಬಲ್ಲೆ ಮತ್ತು ನಿಸ್ಸಂಶಯವಾಗಿ, ನಾವಿಬ್ಬರು ತುಂಬಾ ಹತ್ತಿರದಲ್ಲಿ ಪಂದ್ಯಗಳನ್ನು ಗೆಲ್ಲುತ್ತಾ ಇಲ್ಲಿಯವರೆಗೆ ಬಂದಿದ್ದೇವೆ. ನಾನು ಗೆಲ್ಲುತ್ತೇನೆ ಅಥವಾ ಕಳೆದುಕೊಳ್ಳುತ್ತೇನೆ. ಆದರೆ, ನನಗೆ ಗೆಲ್ಲುವ ಅವಕಾಶ ಜಾಸ್ತಿ ಇದೆ. ಎರಡನೇ ಶ್ರೇಯಾಂಕದ ಸಬಲೆಂಕಾಳನ್ನು ಸೋಲಿಸಿರುವುದು ನನಗೆ ಹೆಚ್ಚಿನ ಆತ್ಮ ವಿಶ್ವಾಸವನ್ನು ನೀಡಿದೆ. ಅದೇ ಸ್ಥೈರ್ಯದಲ್ಲಿ ನಾನು ಇಂದಿನ ಫೈನಲ್ಸ್​ನಲ್ಲಿ ಮುಂದುವರೆಯುತ್ತೇನೆ" ಎಂದರು.

ಇದನ್ನೂ ಓದಿ:French Open 2023: ಕಾರ್ಲೋಸ್ ಮಣಿಸಿ ಫೈನಲ್‌ಗೆ ಲಗ್ಗೆಯಿಟ್ಟ ನೊವಾಕ್ ಜೊಕೊವಿಕ್

ABOUT THE AUTHOR

...view details