ಪ್ಯಾರಿಸ್: ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯಲ್ಲಿ ವಿಶ್ವದ ನಂಬರ್ 1 ಆಟಗಾರ ನೊವಾಕ್ ಜೊಕೊವಿಕ್ ವಿರುದ್ಧ ಭರ್ಜರಿ ಗೆಲುವು ದಾಖಲು ಮಾಡಿರುವ ರಫೆಲ್ ನಡಾಲ್ ಸಮಿಫೈನಲ್ಗೆ ಲಗ್ಗೆ ಹಾಕಿದ್ದಾರೆ. ಮಂಗಳವಾರ ರಾತ್ರಿ ನಡೆದ ಪಂದ್ಯದಲ್ಲಿ ಸರ್ಬಿಯಾದ ಜೊಕೊವಿಕ್ ವಿರುದ್ಧ 6-2, 4-6, 6-2, 7-6 ಸೆಟ್ಗಳಿಂದ ಗೆಲುವಿನ ನಗೆ ಬೀರಿದರು.
ಪಂದ್ಯ ಆರಂಭಗೊಂಡಾಗ ಮೊದಲ ಸೆಟ್ನಲ್ಲಿ ಜೊಕೊವಿಕ್ ವಿರುದ್ಧ ನಡಾಲ್ ಮುನ್ನಡೆ ಸಾಧಿಸಿದ್ದರು. ಹೀಗಾಗಿ 6-2 ಅಂತರದ ಸೆಟ್ಗಳಿಂದ ಮುನ್ನಡೆ ಪಡೆದುಕೊಂಡರು. ಆದರೆ, ಎರಡನೇ ಹಾಗೂ ಮೂರನೇ ಸೆಟ್ನಲ್ಲಿ ನಡಾಲ್ ಪಾರಮ್ಯ ಮೆರೆದ ಕಾರಣ ಗೆಲುವು ದಾಖಲು ಮಾಡಿದ್ದಾರೆ. ಈ ಗೆಲುವಿನೊಂದಿಗೆ ನಡಾಲ್ ಫ್ರೆಂಚ್ ಟೂರ್ನಿಯಲ್ಲಿ 15ನೇ ಸಲ ಸೆಮಿಫೈನಲ್ಗೆ ಪ್ರವೇಶ ಪಡೆದುಕೊಂಡಿದ್ದಾರೆ.