ಅಲ್ ಖೋರ್ (ಕತಾರ್):ಫಿಫಾವಿಶ್ವಕಪ್ ಟೂರ್ನಿಯ ಅಂತಿಮ ಸುತ್ತು ಪ್ರವೇಶಿಸಲು ಫ್ರಾನ್ಸ್ ತಂಡ ಇನ್ನೊಂದು ಅಡಿ ಇಡಬೇಕಿದೆ. ನಿನ್ನೆ ಆಂಗ್ಲರೆದುರಿನ ಪಂದ್ಯದಲ್ಲಿ 2-1 ಗೋಲುಗಳಿಂದ ಗೆದ್ದ ಹಾಲಿ ಚಾಂಪಿಯನ್ನರು ಸೆಮಿಫೈನಲ್ ತಲುಪಿದರು. ಇಲ್ಲಿನ ಅಲ್ ಬೇಟ್ ಸ್ಟೇಡಿಯಂನಲ್ಲಿ ನಡೆದ ರೋಮಾಂಚಕ ಕಾದಾಟದ 78ನೇ ನಿಮಿಷದಲ್ಲಿ ಒಲಿವಿಯರ್ ಗಿರೌಡ್ ಗಳಿಸಿದ ಗೋಲು ಫ್ರಾನ್ಸ್ ತಂಡವನ್ನು ವಿಶ್ವಕಪ್ ಸನಿಹಕ್ಕೆ ಕೊಂಡೊಯ್ದರೆ, 1966ರ ನಂತರ ಕಪ್ ಗೆಲ್ಲುವ ಕನಸು ಕಾಣುತ್ತಿದ್ದ ಇಂಗ್ಲೆಂಡ್ಗೆ ನಿರಾಶೆಯಾಯಿತು.
ಪಂದ್ಯಾರಂಭದ 17 ನಿಮಿಷಗಳ ನಂತರ ಆಂಟೊಯಿನ್ ಗ್ರೀಜ್ಮನ್ ಅವರು ಫ್ರಾನ್ಸ್ ಪರ ಮೊದಲ ಗೋಲು ದಾಖಲಿಸಿದರು. 54 ನಿಮಿಷದವರೆಗೆ ಗೋಲ್ ಗಳಿಸಲು ಬಬಿಟೀಷ್ ಪಡೆ ಸಾಕಷ್ಟು ಸೆಣಸಿತು. 54ನೇ ನಿಮಿಷದಲ್ಲಿ ಹ್ಯಾರಿ ಕೇನ್ ಚೆಂಡನ್ನು ಗೋಲ್ ಕೀಪರ್ ಲೊರಿಸ್ ಅವರನ್ನು ವಂಚಿಸಿ ಗೋಲ್ ಪೋಸ್ಟ್ ಸೇರುವಂತೆ ಮಾಡಿದರು. ಇದರಿಂದ ಇತ್ತಂಡಗಳು ಸಮಬಲ ಸಾಧಿಸಿದವು. ಇದು ಇಂಗ್ಲೆಂಡ್ಗೆಪೆನಾಲ್ಟಿ ಕಿಕ್ನಲ್ಲಿ ದೊರೆತ ಗೋಲ್ ಆಗಿದೆ.